For Quick Alerts
ALLOW NOTIFICATIONS  
For Daily Alerts

ಅಕ್ಸೆಂಚರ್ ಅನ್ನು ಹಿಂದಿಕ್ಕಿದ ಟಿಸಿಎಸ್‌: ಜಗತ್ತಿನ ನಂ 1 ಐ.ಟಿ. ಕಂಪನಿ

|

ದೇಶದ ಬಹುದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ವಿಶ್ವದ ನಂಬರ್ 1 ಐಟಿ ಕಂಪನಿಯಾಗಿ ಹೊರಹೊಮ್ಮಿದ್ದು, ಜಗತ್ತಿನ ಖ್ಯಾತ ಐಟಿ ಕಂಪನಿ ಅಕ್ಸೆಂಚರ್ ಅನ್ನು ಹಿಂದಿಕ್ಕಿದೆ.

ವಿಶ್ವದ ಹೆಚ್ಚು ಮೌಲ್ಯಯುತ ಐಟಿ ಸಂಸ್ಥೆ ಎನಿಸಿಕೊಂಡಿದ್ದ ಅಕ್ಸೆಂಚರ್ ಸಂಸ್ಥೆ(168.57 ಬಿಲಿಯನ್‌)ಯನ್ನು ಟಿಸಿಎಸ್ ಸೋಮವಾರ ಹಿಂದಿಕ್ಕಿದೆ. ಟಿಸಿಎಸ್ ಮಾರುಕಟ್ಟೆ ಮೌಲ್ಯ 169.9 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ಮಾರುಕಟ್ಟೆ ಮೌಲ್ಯ ದಿಢೀರ್ ಏರಿಕೆ ಕಾಣುತ್ತಿದ್ದಂತೆ ಟಿಸಿಎಸ್ ಮಾರುಕಟ್ಟೆ ಮೌಲ್ಯ ಜನವರಿ 25ರ ಮಧ್ಯಾಹ್ನದ ವೇಳೆಗೆ 170 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ನಂತರ 12 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಕ್ಯಾಪ್ ಹೊಂದಿದ ಕಂಪನಿ ಎಂಬ ದಾಖಲೆಗೂ ಟಿಸಿಎಸ್ ಪಾತ್ರವಾಗಿದೆ.

ಅಕ್ಸೆಂಚರ್ ಅನ್ನು ಹಿಂದಿಕ್ಕಿದ ಟಿಸಿಎಸ್‌: ಜಗತ್ತಿನ ನಂ 1 ಐ.ಟಿ. ಕಂಪನ

ಕಳೆದ ವರ್ಷ ಮಾರ್ಚ್‌ನಲ್ಲಿಯೂ ಟಿಸಿಎಸ್‌ ಕಂಪನಿಯು ದೇಶದ ಅತ್ಯಂತ ಮೌಲ್ಯಯುತ ಕಂಪನಿಯ ಸ್ಥಾನಕ್ಕೆ ಏರಿತ್ತು. ಬಿಎಸ್‌ಇನಲ್ಲಿ ಈ ತಿಂಗಳಿನಲ್ಲಿ ಕಂಪನಿಯ ಷೇರು ಶೇಕಡಾ 13ರಷ್ಟು ಗಳಿಕೆ ಸಾಧಿಸಿದೆ. ದಿನದ ವಹಿವಾಟಿನಲ್ಲಿ ಟಿಸಿಎಸ್‌ ಮಾರುಕಟ್ಟೆ ಮೌಲ್ಯವು ಡಾಲರ್‌ಗಳ ಲೆಕ್ಕದಲ್ಲಿ 169.26 ಬಿಲಿಯನ್ ಡಾಲರ್‌ಗೆ ತಲುಪಿತು.

English summary

TCS Beats Accenture To Become Most Valued IT Company Of The World

Indian tech giant Tata Consultancy Services (TCS) has surpassed Accenture again to become the world's most valued IT services company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X