For Quick Alerts
ALLOW NOTIFICATIONS  
For Daily Alerts

ಟಿಸಿಎಸ್ Q1 ಫಲಿತಾಂಶ: YoY ನಿವ್ವಳ ಲಾಭ ಏರಿಕೆ

|

ದೇಶದ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಜುಲೈ 8ರಂದು ತನ್ನ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದೆ. ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಹೊರ ಬರದಿದ್ದರೂ ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ನಿವ್ವಳ ಲಾಭ ಏರಿಕೆ ಕಂಡಿದೆ. ಜೂನ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭ 9,478 ಕೋಟಿ ರು ದಾಟಿದ್ದು, ಶೇ 5.21ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ 9,008 ಕೋಟಿ ರು ಲಾಭ ಬಂದಿತ್ತು.

 

ತ್ರೈಮಾಸಿಕದಲ್ಲಿ ಆದಾಯ ಶೇ 4.28ರಷ್ಟು ಏರಿಕೆ ಕಂಡಿದ್ದು, ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಶೇ 16.17ರಷ್ಟು ಏರಿಕೆ ಕಂಡು 52,758 ಕೋಟಿ ರು ದಾಟಿದೆ.

 

ಟಿಸಿಎಸ್ ಸಂಸ್ಥೆ ತ್ರೈಮಾಸಿಕ ವರದಿ ಬೆನ್ನಲ್ಲೇ ತನ್ನ ಷೇರುದಾರರಿಗೆ 8 ರು ಪ್ರತಿಷೇರಿನಂತೆ ಡಿವಿಡೆಂಡ್ ಘೋಷಿಸಿದೆ. ಆಗಸ್ಟ್ 3, 2022ರಲ್ಲಿ ಮೊತ್ತ ತಲುಪಲಿದೆ.

ಟಿಸಿಎಸ್ Q1 ಫಲಿತಾಂಶ: YoY ನಿವ್ವಳ ಲಾಭ ಏರಿಕೆ

ಆಟ್ರಿಷನ್ ದರದ ಚಿಂತೆ
ಇನ್ಫೋಸಿಸ್ ಸಂಸ್ಥೆಯಂತೆ ಟಿಸಿಎಸ್ ಕೂಡಾ ಆಟ್ರಿಷನ್ ದರದ ಬಗ್ಗೆ ಚಿಂತಿಸಬೇಕಾಗಿದೆ. ಕಳೆದ 12 ತಿಂಗಳಲ್ಲಿಆಟ್ರಿಷನ್ ದರ ಶೇ 19.7ರಷ್ಟು ತಲುಪಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 17.4ರಷ್ಟಿತ್ತು. ಕೋವಿಡ್ 19 ನಂತರದ ಕಚೇರಿ ಸಂಸ್ಕೃತಿಗೆ ನಿಧಾನಗತಿಯಿಂದ ಉದ್ಯೋಗಿಗಳು ಒಗ್ಗಿಕೊಳ್ಳುತ್ತಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ 20ರಷ್ಟು ಸಿಬ್ಬಂದಿ ಮಾತ್ರ ವರ್ಕ್ ಫ್ರಂ ಹೋಂ ಸೌಲಭ್ಯ ಬಳಸಿದ್ದಾರೆ. 2023ರ ವೇಳೆಗೆ 6 ಲಕ್ಷ

ಈ ತ್ರೈಮಾಸಿಕದಲ್ಲಿ 8.2 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, ಕಳೆದ ತ್ರೈಮಾಸಿಕದಲ್ಲಿ 11.3 ಬಿಲಿಯನ್ ಡಾಲರ್ ಒಪ್ಪಂದ ಕಂಡಿತ್ತು. 100 ಮಿಲಿಯನ್ ಡಾಲರ್ ಪ್ಲಸ್ ಸ್ತರಕ್ಕೆ 9 ಹಾಗೂ 50 ಮಿಲಿಯನ್ ಡಾಲರ್ ಸ್ತರಕ್ಕೆ 19 ಕ್ಲೈಂಟ್ ಗಳನ್ನು ಟಿಸಿಎಸ್ ಸೇರಿಸಿಕೊಂಡಿದೆ.

English summary

TCS Q1 Results: Profit rises 5% YoY to Rs 9,478 crore, misses estimates

Tata Consultancy Services on Friday reported a 5.21 per cent year-on-year (YoY) rise in consolidated net profit at Rs 9,478 crore in the June quarter compared with Rs 9,008 crore in the same quarter last year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X