For Quick Alerts
ALLOW NOTIFICATIONS  
For Daily Alerts

ಟಿಸಿಎಸ್ Q3 ನಿವ್ವಳ ಲಾಭ 8,118 ಕೋಟಿ ರುಪಾಯಿ

|

ದೇಶದ ಬಹುದೊಡ್ಡ ಉದ್ಯಮಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ನಿವ್ವಳ ಆದಾಯದಲ್ಲಿ 0.2 ಪರ್ಸೆಂಟ್ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ಶುಕ್ರವಾರ ಟಿಸಿಎಸ್ 2019-20 ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿತು. ಈ ಅವಧಿಯಲ್ಲಿ ಕಂಪನಿಯ ನಿವ್ವಳ ಆದಾಯವು 0.2 ಪರ್ಸೆಂಟ್ ಕಂಡು 8,118 ಕೋಟಿ ರುಪಾಯಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 8,105 ಕೋಟಿ ರುಪಾಯಿ ಆದಾಯಗಳಿಕೆಯಾಗಿದ್ದು, ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ 6.7 ಪರ್ಸೆಂಟ್ರಷ್ಟು ಏರಿಕೆ ಕಂಡಿದ್ದು, 39,854 ಕೋಟಿ ರುಪಾಯಿಗೆ ಮುಟ್ಟಿದೆ.

ಟಿಸಿಎಸ್ Q3 ನಿವ್ವಳ ಲಾಭ 8,118 ಕೋಟಿ ರುಪಾಯಿ

ಕಂಪನಿಯ ಆದಾಯವು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇಕಡಾ 6.8 ರಷ್ಟು ಹೆಚ್ಚಾಗಿದೆ. ಕಾರ್ಯಾಚರಣೆಯ ಅಂಚು 25 ಪ್ರತಿಶತ ಮತ್ತು ನಿವ್ವಳ ಅಂಚು 20.4 ಪರ್ಸೆಂಟ್ ಹೆಚ್ಚಾಗಿದೆ. ವಿವಿಧ ಕಾರ್ಯಾಚರಣೆಗಳಿಂದ ನಿವ್ವಳ ನಗದು 9,451 ಕೋಟಿ ರುಪಾಯಿ ಅಂದರೆ ಡಿಸೆಂಬರ್ 31, 2019 ರ ವೇಳೆಗೆ ನಿವ್ವಳ ಆದಾಯ 116.4 ಪರ್ಸೆಂಟ್‌ನಷ್ಟಿದೆ.

ಟಿಸಿಎಸ್ ಲೈಫ್‌ಕೇರ್ ಮತ್ತು ಹೆಲ್ತ್‌ಕೇರ್ ಉತ್ತಮ ಸಾಧನೆ ತೋರುತ್ತಿದ್ದು, ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 17.1 ಪರ್ಸೆಂಟ್ ಏರಿಕೆಯಾಗಿದೆ. ಕಂಪನಿಯ ಉತ್ಪಾದನೆ ಪ್ರಮಾಣ 9.2ಪರ್ಸೆಂಟ್ ಏರಿಕೆಯಾಗಿದ್ದು,
ಕಮ್ಯುನಿಕೇಷನ್ಸ್ & ಮೀಡಿಯಾ 9.5 ಪರ್ಸೆಂಟ್ ಹೆಚ್ಚಳವಾಗಿದೆ.

English summary

TCS Q3 Profit 8,118 Crore

On Friday, Tata Consultancy Services (TCS) reported a 0.2 percent increase in net income for the December ended quarter at Rs 8,118 crore
Story first published: Saturday, January 18, 2020, 10:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X