For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ನಿಂದ ನಗದು ತೆಗೆಯುವ ಮುನ್ನ ಟಿಡಿಎಸ್ ಗಮನದಲ್ಲಿರಲಿ

|

ತೆರಿಗೆ ಕಟ್ಟಬೇಕಾದಷ್ಟು ವರಮಾನ ಇದ್ದರೂ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡದವರಿಗೆ ಮೂಗುದಾರ ಹಾಕಲು ಮತ್ತು ನಗದು ವ್ಯವಹಾರಗಳಿಗೆ ಕಡಿವಾಣ ಹಾಕುವ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟಿಡಿಎಸ್ ಕಡಿತಗೊಳಿಸಲು ಹಣಕಾಸು ಕಾಯ್ದೆ 2020 ಪರಿಚಯಿಸಲಾಗಿದೆ. ಜುಲೈ 1ನೇ ತಾರೀಕಿನಿಂದ ಇದು ಅನ್ವಯ ಆಗಲಿದೆ.

 

ಕಳೆದ ಮೂರು ಹಣಕಾಸು ವರ್ಷದಲ್ಲಿ ಯಾರು ಐಟಿಆರ್ ಫೈಲ್ ಮಾಡಿರುವುದಿಲ್ಲವೋ ಅಂಥವರು ಬ್ಯಾಂಕ್ ನಿಂದ 20 ಲಕ್ಷದಿಂದ 1 ಕೋಟಿಯ ತನಕ ವಿತ್ ಡ್ರಾ ಮಾಡಿದರೆ ಅದಕ್ಕೆ 2 ಪರ್ಸೆಂಟ್ ಟಿಡಿಎಸ್ ಕಟ್ಟಬೇಕು. ಒಂದು ಕೋಟಿ ರುಪಾಯಿ ದಾಟಿದಲ್ಲಿ 5% ದರದಲ್ಲಿ ಟಿಡಿಎಸ್ ಕಡಿತ ಮಾಡಲಾಗುತ್ತದೆ.

2 ಪರ್ಸೆಂಟ್ ಟಿಡಿಎಸ್

2 ಪರ್ಸೆಂಟ್ ಟಿಡಿಎಸ್

ಹಣಕಾಸು ವರ್ಷದಲ್ಲಿ ಒಂದು ಕೋಟಿ ರುಪಾಯಿಗೂ ಹೆಚ್ಚು ವಿತ್ ಡ್ರಾ ಮಾಡಿದಲ್ಲಿ ಐಟಿಆರ್ ಫೈಲ್ ಮಾಡಲಿ ಅಥವಾ ಮಾಡದಿರಲಿ ಟಿಡಿಎಸ್ ಅಂತೂ ಕಟ್ಟಲೇಬೇಕು. 2019ರ ಜುಲೈನಲ್ಲಿ ಸರ್ಕಾರ ಮೊದಲ ಬಾರಿಗೆ ಸೆಕ್ಷನ್ 194N ಅಡಿಯಲ್ಲಿ ಹಣಕಾಸು ವರ್ಷದಲ್ಲಿ 1 ಕೋಟಿ ರುಪಾಯಿಗೂ ಹೆಚ್ಚು ವಿಥ್ ಡ್ರಾ ಮಾಡಿದಲ್ಲಿ 2 ಪರ್ಸೆಂಟ್ ಟಿಡಿಎಸ್ ಪರಿಚಯಿಸಿತು.

ಹೇಗೆ ಅನ್ವಯಿಸುತ್ತದೆ?

ಹೇಗೆ ಅನ್ವಯಿಸುತ್ತದೆ?

ಬ್ಯಾಂಕ್ ಗಳು, ಕೋ ಆಪರೇಟಿವ್ ಬ್ಯಾಂಕ್ ಗಳು ಮತ್ತು ಪೋಸ್ಟ್ ಆಫೀಸ್ ನಲ್ಲಿನ ಎಲ್ಲ ಬಗೆಯ ಖಾತೆಗಳಿಗೂ ಇದು ಅನ್ವಯ ಆಗುತ್ತದೆ. ಒಂದೇ ಬ್ಯಾಂಕ್ ನಲ್ಲಿ ವಿವಿಧ ಖಾತೆಗಳಿದ್ದು, ಎಲ್ಲವೂ ಸೇರಿ ಅಥವಾ ಯಾವುದಾದರೂ ಒಂದರಲ್ಲಿ ಮಿತಿಯನ್ನು ದಾಟಿದರೂ ಟಿಡಿಎಸ್ ಅನ್ವಯಿಸುತ್ತದೆ. ಆದರೆ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಖಾತೆಗಳಿದ್ದಲ್ಲಿ ಮಿತಿಯು ಪ್ರತ್ಯೇಕವಾಗಿ ಅನ್ವಯಿಸುತ್ತದೆ.

ಐಟಿಆರ್ ಫೈಲ್ ಆಗಿದೆಯಾ ಇಲ್ಲವಾ?
 

ಐಟಿಆರ್ ಫೈಲ್ ಆಗಿದೆಯಾ ಇಲ್ಲವಾ?

ಬ್ಯಾಂಕ್ ಗಳು ನಗದು ವಿಥ್ ಡ್ರಾ ಮೇಲೆ ನಿಗಾ ಇಟ್ಟಿರಬೇಕು. ಒಂದು ಸಲ ಆ ಮಿತಿಯನ್ನು ದಾಟಿದ ಮೇಲೆ ಟಿಡಿಎಸ್ ಕಡಿತಗೊಳಿಸಬೇಕು. ಬ್ಯಾಂಕ್ ಗಳು ಕಳೆದ ಮೂರು ವರ್ಷದ ಅಥವಾ ಮೂರರ ಪೈಕಿ ಒಂದು ವರ್ಷದಲ್ಲಿ ರಿಟರ್ನ್ ಫೈಲ್ ಮಾಡಿದ್ದಾರಾ ಎಂದು ಜನರನ್ನು ವಿಚಾರಿಸುತ್ತಿದೆ. ಇದರಿಂದ ಬ್ಯಾಂಕ್ ಗಳಿಗೆ ಖಾತೆದಾರರು ಐಟಿಆರ್ ಫೈಲ್ ಮಾಡಿದ್ದಾರಾ ಇಲ್ಲವಾ ಎಂಬುದು ತಿಳಿಯುತ್ತದೆ ಎಂದು ತೆರಿಗೆ ಅಧಿಕಾರಿ ತಿಳಿಸಿದ್ದಾರೆ.

ಡಿಜಿಟಲ್ ಪಾವತಿಗೆ ಪ್ರೋತ್ಸಾಹ

ಡಿಜಿಟಲ್ ಪಾವತಿಗೆ ಪ್ರೋತ್ಸಾಹ

ನಗದು ವ್ಯವಹಾರ ಕಡಿಮೆ ಮಾಡಬೇಕು ಹಾಗೂ ಡಿಜಿಟಲ್ ಪಾವತಿ ಹೆಚ್ಚು ಮಾಡಬೇಕು ಎಂಬುದು ಉದ್ದೇಶ. ದೊಡ್ಡ ಮೊತ್ತದ ನಗದು ವಿಥ್ ಡ್ರಾ ವರ್ಷಕ್ಕೆ 100 ಲಕ್ಷ/ 20 ಲಕ್ಷ ರುಪಾಯಿಗೆ ಮಾತ್ರ ಅನ್ವಯ ಆಗುತ್ತದೆ. ಟಿಡಿಎಸ್ ಕಡಿತ ಆಗಬಾರದು ಅಂದರೆ ಖಾತೆದಾರರು ಡಿಜಿಟಲ್ ಪಾವತಿ ಅಥವಾ ಚೆಕ್ ಮೂಲಕ ನೀಡಬೇಕು ಎನ್ನುತ್ತಾರೆ ತಜ್ಞರು.

English summary

TDS On Cash Withdrawal From Banks: Explanation in Kannada

TDS on cash withdrawal from banks effective on July 1st. Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X