For Quick Alerts
ALLOW NOTIFICATIONS  
For Daily Alerts

ಸ್ಪೆಕ್ಟ್ರಂ ಹರಾಜು: ಇಂದಿನಿಂದ ಆರನೇ ಸುತ್ತಿನ ಬಿಡ್ಡಿಂಗ್

|

ಬಹುನಿರೀಕ್ಷಿತ ಆರನೇ ಸುತ್ತಿನ ಸ್ಪೆಕ್ಟ್ರಂ ಹರಾಜಿನ ಬಿಡ್ಡಿಂಗ್‌ ಸೋಮವಾರದಿಂದ (ಮಾರ್ಚ್‌ 1) ಪ್ರಾರಂಭವಾಗಲಿದೆ ಎಂದು ಕೇಂದ್ರವು ನೀಡಿದ ನೋಟಿಸ್‌ನಲ್ಲಿ ತಿಳಿಸಿದೆ.

700 ಮೆಗಾಹರ್ಟ್ಸ್‌, 800, 900, 1800, 2100, 2300 ಮತ್ತು 2,300 ಮೆಗಾಹರ್ಟ್ಸ್‌ ತರಂಗಾಂತರಗಳ ಹರಾಜು ನಡೆಯಲಿದೆ. 20 ವರ್ಷಗಳ ಅವಧಿಗೆ ತರಂಗಾಂತರಗಳನ್ನು ಹರಾಜು ಹಾಕಲಾಗುತ್ತದೆ. ಒಟ್ಟು 2,251.25 ಮೆಗಾಹರ್ಟ್ಸ್‌ ತರಂಗಾಂತರದ ಹರಾಜು ನಡೆಯಲಿದ್ದು, ಇದರಿಂದ 3.92 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

ಸ್ಪೆಕ್ಟ್ರಂ ಹರಾಜು: ಇಂದಿನಿಂದ ಆರನೇ ಸುತ್ತಿನ ಬಿಡ್ಡಿಂಗ್

ಜನವರಿಯಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ತರಂಗಾಂತರ ಹಂಚಿಕೆಗೆ ಅನುಮೋದನೆ ನೀಡಲಾಗಿತ್ತು. ಈ ಯಶಸ್ವಿ ಬಿಡ್‌ ಮೂಲಕ ತರಂಗಾಂತರಗಳನ್ನು ಪಡೆದುಕೊಂಡ ಕಂಪನಿಗಳಿಗೆ ತಮ್ಮ ನೆಟ್‌ವರ್ಕ್‌ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಸಿಗಲಿದೆ. ಇದರ ಜೊತೆಗೆ ಹೊಸ ಕಂಪನಿಗಳಿಗೂ ಮೊಬೈಲ್‌ ಸೇವೆ ಆರಂಭಿಸಲು ಅವಕಾಶವಿದೆ.

2016 ರಲ್ಲಿ ನಡೆದ ಕೊನೆಯ ಸ್ಪೆಕ್ಟ್ರಂ ಹರಾಜಿನಲ್ಲಿ 5.6 ಲಕ್ಷ ಕೋಟಿ ರೂ.ಗಳ 2,35 ಮೆಗಾಹರ್ಟ್‌ ಶೇಕಡಾ 40ರಷ್ಟು ಮಾರಾಟವಾಗಿದೆ. ಇದರಿಂದ ಸರ್ಕಾರಕ್ಕೆ 65,789 ಕೋಟಿ ರೂ. ಲಭ್ಯವಾಗಿತ್ತು.

ಈ ಬಾರಿ ಬಿಡ್‌ ಗೆದ್ದವರು ಪೂರ್ತಿ ಹಣವನ್ನು ಒಮ್ಮೆಯೇ ಪಾವತಿ ಮಾಡಬಹುದು ಅಥವಾ ಸ್ವಲ್ಪ ಭಾಗ ಪಾವತಿಸಿ ಉಳಿದ ಮೊತ್ತವನ್ನು ನಂತರ ಪಾವತಿಸುವ ಅವಕಾಶವೂ ಇದೆ. 900 ಮೆಗಾಹರ್ಟ್ಸ್‌ಗಿಂತ ಕೆಳಗಿನ ತರಂಗಾಂತರಗಳಿಗೆ ಶೇ.25ರಷ್ಟು ಹಣವನ್ನು ಆರಂಭದಲ್ಲಿ ಕಟ್ಟಲೇಬೇಕು. 1800 ಮೆಗಾಹರ್ಟ್ಸ್‌ಗಿಂತ ಮೇಲಿನ ತರಂಗಾಂತರಗಳಿಗೆ ಶೇ.50 ರಷ್ಟು ಹಣವನ್ನು ಪಾವತಿಸುವುದು ಕಡ್ಡಾಯವಾಗಿದೆ.

English summary

Telecom Spectrum Auctions To Commence Today: Know More

The Bidding The Sixth Round Of Spectrum Auction Will commence from Monday (March 1), the centre had said in a notice issued in January 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X