For Quick Alerts
ALLOW NOTIFICATIONS  
For Daily Alerts

ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್ ಹಾಗೂ ಮಸ್ಕ್ ಮಧ್ಯೆ ಈಗ $ 3 ಬಿಲಿಯನ್ ಅಂತರ

|

ವಿಶ್ವದ ಅತ್ಯಂತ ಶ್ರೀಮಂತ ಜೆಫ್ ಬೆಜೋಸ್ ನನ್ನು ಮೀರಿ ನಂಬರ್ ಒನ್ ಸ್ಥಾನಕ್ಕೆ ಜಿಗಿಯುವತ್ತ ವೇಗವಾಗಿ ಸಾಗಿದ್ದಾರೆ ಟೆಸ್ಲಾ ಇಂಕ್ ಹಾಗೂ ಸ್ಪೇಸ್ ಎಕ್ಸ್ ರೂವಾರಿ ಎಲಾನ್ ಆರ್. ಮಸ್ಕ್. ಟೆಸ್ಲಾ ಕಂಪೆನಿಯ ಷೇರು ಬುಧವಾರ 2.8%ನಷ್ಟು ಏರಿಕೆ ಕಂಡ ಮೇಲೆ ಮಸ್ಕ್ ಹಾಗೂ ಬೆಜೋಸ್ ಮಧ್ಯದ ಶ್ರೀಮಂತಿಕೆ ಅಂತರ $ 3 ಬಿಲಿಯನ್ ಗೆ ಬಂದಿದೆ.

ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ವಿಶ್ವದ ಟಾಪ್ 500ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಜೆಫ್ ಬೆಜೋಸ್ ಇದ್ದಾರೆ. ಅವರ ಆಸ್ತಿ ಮೌಲ್ಯ 18,400 ಕೋಟಿ ಅಮೆರಿಕನ್ ಡಾಲರ್. ಇನ್ನು ಆ ನಂತರದ ಸ್ಥಾನದಲ್ಲಿ ಇರುವ ಎಲಾನ್ ಮಸ್ಕ್ ಆಸ್ತಿ ಮೌಲ್ಯ 18,100 ಕೋಟಿ ಅಮೆರಿಕನ್ ಡಾಲರ್.

ಚೀನಾದ ಅತ್ಯಂತ ಸಿರಿವಂತ ಝೊಂಗ್ ಶನ್ಷನ್ ಈಗ ವಿಶ್ವದ 6ನೇ ಶ್ರೀಮಂತಚೀನಾದ ಅತ್ಯಂತ ಸಿರಿವಂತ ಝೊಂಗ್ ಶನ್ಷನ್ ಈಗ ವಿಶ್ವದ 6ನೇ ಶ್ರೀಮಂತ

ಉದ್ಯಮದ ದೃಷ್ಟಿಯಿಂದಲೂ ಬೆಜೋಸ್ ಹಾಗೂ ಮಸ್ಕ್ ಪ್ರತಿಸ್ಪರ್ಧಿಗಳು. ಕಳೆದ ಒಂದು ವರ್ಷದಲ್ಲೇ ಮಸ್ಕ್ ನಿವ್ವಳ ಆಸ್ತಿಯು 15,000 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. 2020ರಲ್ಲಿ ಟೆಸ್ಲಾ ಕಂಪೆನಿಯ ಷೇರು 743% ಏರಿಕೆ ದಾಖಲಿಸಿದೆ. ಕಳೆದ ಒಂದು ವರ್ಷದಲ್ಲಿ ವಿಶ್ವದ ಐನೂರು ಅತ್ಯಂತ ಶ್ರೀಮಂತರ ಆಸ್ತಿ 1.8 ಲಕ್ಷ ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಇದನ್ನೇ ಪರ್ಸೆಂಟೇಜ್ ನಲ್ಲಿ ಹೇಳುವುದಾದರೆ 31% ಹೆಚ್ಚಳ.

ನಂಬರ್ 1 ಶ್ರೀಮಂತ ಬೆಜೋಸ್- ಮಸ್ಕ್ ಮಧ್ಯೆ ಈಗ $ 3 ಬಿಲಿಯನ್ ಅಂತರ

ಐವರು 100 ಬಿಲಿಯನ್ ಯುಎಸ್ ಡಿಗಿಂತ ಹೆಚ್ಚು ಆಸ್ತಿ ಹೊಂದಿದ್ದರೆ, ಇತರ ಇಪ್ಪತ್ತು ಮಂದಿಯ ಆಸ್ತಿ ಕನಿಷ್ಠ 50 ಬಿಲಿಯನ್ ಯುಎಸ್ ಡಿ ಇದೆ. ಈಚೆಗಷ್ಟೇ ಚೀನಾದ ಝೊಂಗ್ ಶನ್ಷನ್ ವಿಶ್ವದ ಆರನೇ ಶ್ರೀಮಂತರಾಗಿ ಪಟ್ಟಿಯಲ್ಲಿ ಛಕಾಛಕ್ ಮೇಲೇರಿದ್ದಾರೆ. ಅವರ ಆಸ್ತಿ ಮೌಲ್ಯ 1350 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿ, 9170 ಕೋಟಿ ಅಮೆರಿಕನ್ ಡಾಲರ್ ಆಗಿದೆ.

English summary

Tesla Inc CEO Elon Musk Just 3 Billion USD Away To Surpass World's Number 1 Rich Jeff Bezos

Tesla Inc. and Space X CEO Elon Musk just 3 billion USD away to surpass Jeff Bezos and to become world's richest person.
Story first published: Thursday, January 7, 2021, 12:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X