For Quick Alerts
ALLOW NOTIFICATIONS  
For Daily Alerts

ಟೆಸ್ಲಾದಿಂದ 150 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಖರೀದಿ

By ಅನಿಲ್ ಆಚಾರ್
|

ಟೆಸ್ಲಾದಿಂದ ಜನವರಿ 2021ರಲ್ಲಿ 150 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಅನ್ನು ಖರೀದಿ ಮಾಡಲಾಗಿದೆ. ಕಂಪೆನಿಯ ಹೂಡಿಕೆ ನಿಯಮಾವಳಿಯಲ್ಲಿ ಅಪ್ ಡೇಟ್ ಮಾಡಲಾಗಿದೆ. ಈಗ ಡಿಜಿಟಲ್ ಆಸ್ತಿ ಮೇಲೆ ಹೂಡಿಕೆ ಮಾಡಲಾಗುತ್ತಿದೆ ಎಂದು ಸೆಕ್ಯೂರಿಟೀಸ್ ಎಕ್ಸ್ ಚೇಂಜ್ ಕಮಿಷನ್ ನಿಂದ ಗೊತ್ತಾಗಿದೆ.

ಬ್ಲೂಮ್ ಬರ್ಗ್ ವರದಿ ಪ್ರಕಾರ, ಬಿಟ್ ಕಾಯಿನ್ ದರದಲ್ಲಿ 16% ಏರಿಕೆ ಆಗಿದ್ದು, $ 45,000 ಸಮೀಪ ಇದೆ. ಮತ್ತೊಂದು ಮಹತ್ತರ ನಡೆಯಲ್ಲಿ, ಕಂಪೆನಿ ತಿಳಿಸಿರುವ ಮಾಹಿತಿಯಂತೆ, ಭವಿಷ್ಯದಲ್ಲಿ ಅದರ ಉತ್ಪನ್ನ ಹಾಗೂ ಸೇವೆಗಳಿಗೆ ಬಿಟ್ ಕಾಯಿನ್ ಸ್ವೀಕರಿಸಲಾಗುತ್ತದೆ.

ಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳುಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳು

ಈಚೆಗೆ ಟೆಸ್ಲಾ ಕಂಪೆನಿ ಸಹ ಸಂಸ್ಥಾಪಕ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಬಿಟ್ ಕಾಯಿನ್ ಚಿಹ್ನೆ ಪ್ರದರ್ಶಿಸಿದ್ದರು. ಆ ನಂತರ ಈ ಬೆಳವಣಿಗೆ ಆಗಿದೆ. ಇನ್ನು ಪರ್ಯಾಯ ಕ್ರಿಪ್ಟೋಕರೆನ್ಸಿ Dogecoin ಮೀಮ್ಸ್ ಕೂಡ ಮಸ್ಕ್ ಟ್ವೀಟ್ ಮಾಡಿದ್ದರು. ಈ ವರ್ಷದ ಆರಂಭದಿಂದ ಇಲ್ಲಿಯ ತನಕ ಬಿಟ್ ಕಾಯಿನ್ ದರ 35% ಏರಿಕೆ ಕಂಡಿದೆ. ಏಪ್ರಿಲ್ ಆರಂಭದಿಂದ ಈಚೆಗೆ 800% ಬೆಲೆ ಏರಿಕೆ ಆಗಿದೆ. ಸಾಂಸ್ಥಿಕ ಹಾಗೂ ವೈಯಕ್ತಿಕ ಹೂಡಿಕೆದಾರರು ಬಿಟ್ ಕಾಯಿನ್ ಹೂಡಿಕೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ.

ಟೆಸ್ಲಾದಿಂದ 150 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಖರೀದಿ

ಭಾರತದಲ್ಲಿ ಖಾಸಗಿ ಕ್ರಿಪ್ಟೋಕರೆನ್ಸಿ ನಿಷೇಧಿಸಲು ಸಂಸತ್ ನಲ್ಲಿ ಮಸೂದೆ ತರುವುದಕ್ಕೆ ಸರ್ಕಾರ ಗುರಿ ಹೊಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೃಷ್ಟಿಸುವ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಚಯಿಸುವ ಯೋಜನೆ ಇಟ್ಟುಕೊಂಡಿದೆ.

ಈಚೆಗೆ ಆರ್ ಬಿಐ ತಿಳಿಸಿರುವ ಪ್ರಕಾರ, ಬಿಟ್ ಕಾಯಿನ್ ನಂಥ ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಪ್ರತಿಸ್ಪರ್ಧಿಯಾಗಿ ಡಿಜಿಟಲ್ ಕರೆನ್ಸಿ ಮಾಡೆಲ್ ರೂಪಿಸಲು ಆಂತರಿಕ ಸಮಿತಿಯೊಂದು ಕೆಲಸ ಮಾಡುತ್ತಿದೆ.

English summary

Tesla Purchased 150 Crore USD Worth Of Bitcoin In January 2021

$ 150 crore worth of cryptocurrency bitcoin purchased by Tesla in January 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X