For Quick Alerts
ALLOW NOTIFICATIONS  
For Daily Alerts

ಪ್ರಪಂಚದ ಟಾಪ್‌ 10 ಶ್ರೀಮಂತರು ಇವರು

|

ಜಗತ್ತಿನಲ್ಲಿರುವ ಒಟ್ಟು ಸಂಪತ್ತಿನ ಶೇಕಡಾ 50ಕ್ಕೂ ಹೆಚ್ಚಿನ ಭಾಗ ವಿಶ್ವದ ಟಾಪ್ 100 ಶ್ರೀಮಂತ ವ್ಯಕ್ತಿಗಳ ಬಳಿಯಲ್ಲೇ ಇದೆ. ಅದರಲ್ಲೂ ವಿಶ್ವದ ಟಾಪ್ 10 ಪಟ್ಟಕ್ಕೇರಲೂ ಹಗ್ಗಜಗ್ಗಾಟ ನಡೆಯುತ್ತಲೇ ಇರುತ್ತದೆ. ಪ್ರತಿ ವರ್ಷವೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಈ ವರ್ಷದ ಕೊನೆಯವರೆಗೂ ಟಾಪ್ 10 ಶ್ರೀಮಂತರು ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಜಗತ್ತಿನ ಟಾಪ್ 10 ಶ್ರೀಮಂತ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ, ಅವರ ಒಟ್ಟು ಸಂಪತ್ತು ಎಷ್ಟು ಎಂಬ ವಿವರಣೆ ಕೆಳಗಿದೆ ನೋಡಿ

10. ಲ್ಯಾರಿ ಪೇಜ್

10. ಲ್ಯಾರಿ ಪೇಜ್

ಅಮೆರಿಕಾದ ಬಹುರಾಷ್ಟ್ರೀಯ ಕಂಪನಿ ಅಲ್ಫಬೆಟ್ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಓ ಆಗಿರುವ ಲ್ಯಾರಿ ಪೇಜ್ ಜಗತ್ತಿನ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಗೂಗಲ್ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಇವರು 1998ರಲ್ಲಿ ಗೂಗಲ್ ಸಂಸ್ಥೆ ಸ್ಥಾಪಿಸಿದ್ರು. 2001ರವರೆಗೆ ಗೂಗಲ್ ಕಂಪನಿಯ ಸಿಇಓ ಆಗಿದ್ದರು. ಆದರೆ ಬಳಿಕ ಮತ್ತೊಮ್ಮೆ 2011 ರಿಂದ 2015ರವರೆಗೆ ಸಿಇಓ ಆಗಿ ಮುಂದುವರಿದ್ರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಲ್ಯಾರಿ ಪೇಜ್ ನ ಒಟ್ಟು ಸಂಪತ್ತು 50.8 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 3 ಲಕ್ಷದ 64,210 ಕೋಟಿ)

9 . ಮೈಕಲ್ ಬ್ಲೂಮ್‌ಬರ್ಗ್

9 . ಮೈಕಲ್ ಬ್ಲೂಮ್‌ಬರ್ಗ್

ಬ್ಲೂಮ್‌ಬರ್ಗ್ LP ಕಂಪನಿಯ ಸಹ ಸಂಸ್ಥಾಪಕರಾಗಿರುವ ಮೈಕಲ್‌ ಬ್ಲೂಮ್ ಬರ್ಗ್ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. 1961 ರಲ್ಲಿ ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಪಡೆದ ಮೈಕಲ್ 1981ರಲ್ಲಿ ಮೈಕಲ್ ಬ್ಲೂಮ್‌ಬರ್ಗ್ ಕಂಪನಿಯನ್ನು ಶುರುಮಾಡಿದರು. 12 ವರ್ಷಗಳ ಕಾಲ ನ್ಯೂಯಾರ್ಕ್ ಮೇಯರ್ ಆಗಿಯೂ ಸೇವೆ ಸಲ್ಲಿಸಿರುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಒಟ್ಟು ಸಂಪತ್ತು. 55.5 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 3 ಲಕ್ಷದ 97,795 ಕೋಟಿ)

8.  ಮಾರ್ಕ್ ಜುಕರ್ ಬರ್ಗ್

8. ಮಾರ್ಕ್ ಜುಕರ್ ಬರ್ಗ್

ಫೇಸ್‌ಬುಕ್ ಸಂಸ್ಥೆಯ ಮಾಲೀಕನಾಗಿರುವ ಮಾರ್ಕ್ ಜುಕರ್ ಬರ್ಗ್ ಸದ್ಯ ಶ್ರೀಮಂತರ ಪಟ್ಟಿಯಲ್ಲಿ 8 ಸ್ಥಾನ ಅಲಂಕರಿಸಿದ್ದಾರೆ. 2018ರಲ್ಲಿ 5ನೇ ಸ್ಥಾನದಲ್ಲಿದ್ದ ಇವರು ಈ ವರ್ಷ 3 ಸ್ಥಾನ ಕುಸಿದು 8ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 2004ರಲ್ಲಿ ತನ್ನ 19ನೇ ವಯಸ್ಸಿನಲ್ಲೇ ಫೇಸ್‌ಬುಕ್ ಸಂಸ್ಥೆ ಹುಟ್ಟುಹಾಕಿದ ಜುಕರ್ ಬರ್ಗ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಿಲಿನಿಯೇರ್ ಆಗಿ ಗುರುತಿಸಿಕೊಂಡರು. ಆದರೆ ಈ ವರ್ಷ ಜುಲೈನಲ್ಲಿ ಫೇಸ್‌ಬುಕ್ ಮಾಹಿತಿ ದುರ್ಬಳಕೆ, ಸುಳ್ಳುಸುದ್ದಿಯಂತಹ ಹಲವು ಸಮಸ್ಯೆಗಳಿಗೆ ಈಡಾಗಿದ್ದ ಮಾರ್ಕ್‌, 5 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಕಳೆದುಕೊಂಡರು. ಸದ್ಯ ಇವರ ಸಂಪತ್ತಿನ ಮೌಲ್ಯ 62.3 ಬಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ 4 ಲಕ್ಷದ 46,581 ಕೋಟಿ)

7. ಲ್ಯಾರಿ ಎಲಿಸನ್

7. ಲ್ಯಾರಿ ಎಲಿಸನ್

ಐಟಿ ಕ್ಷೇತ್ರದ ದೈತ್ಯ ಕಂಪನಿ ಒರಾಕಲ್ ನ ಸಹ ಸಂಸ್ಥಾಪಕನಾಗಿರುವ ಲ್ಯಾರಿ ಎಲಿಸನ್ 1977ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದರು. ಸದ್ಯ ಒರಾಕಲ್ ನ ಅಧ್ಯಕ್ಷರಾಗಿ ಮುಂದುವರಿದಿರುವ ಲ್ಯಾರಿ 2014ರಲ್ಲಿ ಸಿಇಓ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಇವರ ಒಟ್ಟು ಆಸ್ತಿ ಮೌಲ್ಯ 62.5 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 4 ಲಕ್ಷದ 47,953 ಕೋಟಿ)

6. ಅಮಾನ್ಸಿಯೋ ಒರ್ಟೆಗಾ

6. ಅಮಾನ್ಸಿಯೋ ಒರ್ಟೆಗಾ

ಯೂರೋಪ್‌ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಮಾನ್ಸಿಯೋ ಒರ್ಟೆಗಾ ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಝರಾ ಫ್ಯಾಷನ್ ಚೈನ್ ಶುರು ಮಾಡಿದ ಅಮಾನ್ಸಿಯೋ, ಅನೇಕ ರಾಷ್ಟ್ರಗಳಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಒಟ್ಟು ಸಂಪತ್ತು 62.7 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 4 ಲಕ್ಷದ 49,370 ಕೋಟಿ)

5. ಕಾರ್ಲೋಸ್ ಸ್ಲಿಮ್ ಹಿಲು ಮತ್ತು ಕುಟುಂಬ

5. ಕಾರ್ಲೋಸ್ ಸ್ಲಿಮ್ ಹಿಲು ಮತ್ತು ಕುಟುಂಬ

ಮೆಕ್ಸಿಕೊದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಕಾರ್ಲೋಸ್ ಸ್ಲಿಮ್ ಹಿಲು ಮತ್ತು ಕುಟುಂಬ ಲ್ಯಾಟಿನ್ ಅಮೆರಿಕಾದ ಅತಿದೊಡ್ಡ ಮೊಬೈಲ್ ಟೆಲಿಕಾಂ ಸಂಸ್ಥೆ ಅಮೆರಿಕಾ ಮೊವಿಲ್ ನ್ನು ನಿಯಂತ್ರಿಸುತ್ತದೆ. ಅಲ್ಲದೆ ನಿರ್ಮಾಣ, ಗ್ರಾಹಕ ಸರಕುಗಳು, ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್‌ ಕಂಪನಿಗಳಲ್ಲಿ ಹಾಗೂ ನ್ಯೂಯಾರ್ಕ್‌ ಟೈಮ್ಸ್‌ನ ಶೇಕಡಾ 17ರಷ್ಟು ಪಾಲನ್ನು ಹೊಂದಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 64 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 4 ಲಕ್ಷದ 58,672 ಕೋಟಿ)

4. ಬರ್ನಾರ್ಡ್ ಅರ್ನಾಲ್ಡ್ ಮತ್ತು ಕುಟುಂಬ

4. ಬರ್ನಾರ್ಡ್ ಅರ್ನಾಲ್ಡ್ ಮತ್ತು ಕುಟುಂಬ

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಡ್ ಮತ್ತು ಕುಟುಂಬ ನಾಲ್ಕನೇ ಸ್ಥಾನ ಪಡೆದಿದೆ. ವಿಶ್ವದಲ್ಲಿ 70 ಬ್ರ್ಯಾಂಡ್ ಗಳ ಮಾಲೀಕರಾಗಿರುವ ಇವರು ಐಷಾರಾಮಿ ಸರಕುಗಳ ಕಂಪನಿ LVMH ಮಾಲೀಕರು ಹೌದು. ಇವರ ಒಟ್ಟು ಸಂಪತ್ತು 76 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 5 ಲಕ್ಷದ 44,749 ಕೋಟಿ)

3. ವಾರೆನ್ ಬಫೆಟ್

3. ವಾರೆನ್ ಬಫೆಟ್

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒರಾಕಲ್ ಆಫ್ ಒಮಾ ಖ್ಯಾತಿಯ ವಾರೆನ್ ಬಫೆಟ್ ಇದ್ದಾರೆ. ಇವರು ವಿಶ್ವದ ಸಾರ್ವಕಾಲಿಕ ಯಶಸ್ವಿ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಬಫೆಟ್ ಬರ್ಕ್‌ಷೈರ್ ಹ್ಯಾಥ್ ವೇ ಬಹುರಾಷ್ಟ್ರೀಯ ಕಂಪನಿಯನ್ನು ನಡೆಸುತ್ತಿದ್ದಾರೆ. ಇದು 60ಕ್ಕೂ ಹೆಚ್ಚು ಕಂಪನಿಯನ್ನು ಹೊಂದಿದೆ. ತನ್ನ ಸಂಪತ್ತಿನಲ್ಲಿ ಶೇಕಡಾ 99ಕ್ಕಿಂತಲೂ ಹೆಚ್ಚಿನದನ್ನು ನೀಡುವ ಭರವಸೆ ನೀಡಿದ್ದಾರೆ. 2019ರಲ್ಲಿ ಇವರು 3.6 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 25 ಸಾವಿರದ 803 ಕೋಟಿ) ಹಣವನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾರೆ. ಇವರ ಸಂಪತ್ತು 82.5 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 5 ಲಕ್ಷದ 91, 339 ಕೋಟಿ)

2. ಬಿಲ್‌ ಗೇಟ್ಸ್‌

2. ಬಿಲ್‌ ಗೇಟ್ಸ್‌

ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಬಿಲ್ ಮತ್ತು ಮೆಲಿಂಡ ಗೇಟ್ಸ್‌ ಫೌಂಡೇಶನ್ ಅಧ್ಯಕ್ಷರಾಗಿರುವ ಇವರ ಪ್ರಸ್ತುತ ಆಸ್ತಿ 96.5 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6 ಲಕ್ಷದ 91,774 ಕೋಟಿ) ಆದರೆ ಇವರು ಇಲ್ಲಿಯವರೆಗೂ 38.5 ಬಿಲಿಯನ್‌ ಅಮೆರಿನ್ ಡಾಲರ್ ನಷ್ಟು ಆಸ್ತಿಯನ್ನು ದಾನ ಮಾಡಿದ್ದರೂ ೨ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.

1. ಜೆಫ್ ಬೆಜೋಸ್

1. ಜೆಫ್ ಬೆಜೋಸ್

2017ರಲ್ಲಿ ಬಿಲ್‌ಗೇಟ್ಸ್‌ರನ್ನ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೇಜೋಸ್ ಈಗಲೂ ನಂಬರ್ 1 ಶ್ರೀಮಂತರಾಗಿ ಮುಂದುವರಿದಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯವು 131 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 9 ಲಕ್ಷದ 39,171 ಕೋಟಿ). ಈಗಾಗಲೇ ಅಮೆರಿಕಾದ ಬಹುದೊಡ್ಡ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಮಾಲೀಕನಾಗಿರುವ ಜೆಫ್ ಬೇಜೋಸ್, ೧೯೯೪ರಲ್ಲಿ ಅಮೆಜಾನ್ ಇ ಕಾಮರ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ರು. 2019ರಲ್ಲಿ ತಮ್ಮ 25 ವರ್ಷಗಳ ಸಂಸಾರ ಜೀವನವನ್ನು ಅಂತ್ಯಗೊಳಿಸಿ, ಪತ್ನಿ ಮೆಕೆಂಜಿಯಿಂದ ವಿಚ್ಛೇದನ ಪಡೆದರು. ಅಲ್ಲದೆ ಅಮೆಜಾನ್ ಪಾಲಿನ ಕಾಲು ಭಾಗ ಷೇರುಗಳನ್ನು ಅವರಿಗೆ ವರ್ಗಾಯಿಸಿದರು.

English summary

The Richest People In The World

This is a list of World top 10 Richest people based on wealth and assets by forbes
Story first published: Wednesday, November 13, 2019, 9:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X