For Quick Alerts
ALLOW NOTIFICATIONS  
For Daily Alerts

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷ; ಅದರಲ್ಲಿ ಇಳಿಕೆ ಇಲ್ಲ

|

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಬದಲಾಯಿಸುವ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸರ್ಕಾರವು ಗುರುವಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದೆ. 60 ವರ್ಷ ವಯಸ್ಸು ಅಥವಾ 33 ವರ್ಷ ಸೇವಾವಧಿ ಈ ಎರಡರಲ್ಲಿ ಯಾವುದು ಮೊದಲು ಪೂರ್ಣವಾಗುತ್ತದೋ ಅದನ್ನು ಪರಿಗಣಿಸಿ, ನಿವೃತ್ತಿ ಬಗ್ಗೆ ನಿರ್ಧರಿಸಲಾಗುತ್ತದೆಯೇ ಎಂದು ಸಂಸದರಾದ ನೀರಜ್ ಶೇಖರ್ ಪ್ರಶ್ನೆ ಮಾಡಿದ್ದರು.

ಅಂಥ ಯಾವ ಪ್ರಸ್ತಾವವೂ ಇಲ್ಲ ಎಂದು ಸಚಿವರಾದ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಇಲ್ಲ. 60ಕ್ಕಿಂತ ಕಡಿಮೆ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡುವ ಪ್ರಸ್ತಾವ ಇಲ್ಲ ಎಂದು ಅವರು ಲಿಖಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಕೆಲ ತಿಂಗಳಿಂದ ನಿವೃತ್ತಿ ವಯಸ್ಸಿನ ಬದಲಾವಣೆ ಬಗ್ಗೆ ಚರ್ಚೆ ಜಾರಿಯಲ್ಲಿತ್ತು. 2 ವರ್ಷ ಇಳಿಸಿ, 58ಕ್ಕೆ ನಿವೃತ್ತಿ ವಯೋಮಿತಿ ನಿಗದಿ ಮಾಡುವ ಪ್ರಸ್ತಾವ ಇದೆ ಎಂಬ ವರದಿ ಹರಿದಾಡುತ್ತಿತ್ತು.

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷ; ಅದರಲ್ಲಿ ಇಳಿಕೆ ಇಲ್ಲ

ಒಂದು ವೇಳೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಚಿತವಾಗಿ ನಿವೃತ್ತಿಗೊಳಿಸುವುದಕ್ಕೆ ಸರ್ಕಾರಕ್ಕೆ ಅವಕಾಶ ಇದೆ. ಅದಕ್ಕೆ ಮೂರು ತಿಂಗಳಿಗೆ ಕಡಿಮೆ ಇಲ್ಲದಂತೆ ಲಿಖಿತವಾಗಿ ನೋಟಿಸ್ ನೀಡಿರಬೇಕು ಅಥವಾ ಮೂರು ತಿಂಗಳ ವೇತನ ಮತ್ತು ಭತ್ಯೆಯನ್ನು ನೀಡಬೇಕಾಗುತ್ತದೆ.

English summary

There Is No Change In Government Employees Retirement Age

Government employees retirement age at 60. There is no proposal to reduce to 58, said by concerned minister in Rajyasabha on Thursday.
Story first published: Thursday, December 5, 2019, 16:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X