For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 15ರಿಂದ ರೈಲು ಸಂಚಾರ ಸತ್ಯಕ್ಕೆ ದೂರ: ರೈಲ್ವೆ ಇಲಾಖೆ

|

ದೇಶಾದ್ಯಂತ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಮುಗಿದ ಬಳಿಕ ಏಪ್ರಿಲ್ 15ರಿಂದ ರೈಲು ಸಂಚಾರ ಆರಂಭಗೊಳ್ಳಲಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ರೈಲ್ವೆ ಇಲಾಖೆ ಗುರುವಾರ ತಳ್ಳಿಹಾಕಿದೆ. ಇದೆಲ್ಲಾ ಸುಳ್ಳು ಊಹಾಪೋಹದ ಸುದ್ದಿಯಾಗಿದ್ದು ನಂಬದಿರಿ ಎಂದು ಪ್ರಯಾಣಿಕರಿಗೆ ತಿಳಿಸಿದೆ.

 

ದೇಶದಲ್ಲಿ ಲಾಕ್ ಡೌನ್ ತೆರವುಗೊಳಿಸಿದ ನಂತರ ಪ್ರಯಾಣಿಕರು ನೂತನ ನಿರ್ಬಂಧದ ನಿಯಮಾವಳಿ ಅನುಸರಿಸಬೇಕೆಂಬ ಮಾಧ್ಯಮಗಳ ವರದಿಯನ್ನು ಭಾರತೀಯ ರೈಲ್ವೆ ಇಲಾಖೆ ನಿರಾಕರಿಸಿದೆ. ಸದ್ಯ ಅಂತಹ ಯಾವುದೇ ಮಾಹಿತಿ ಇಲಾಖೆಯಿಂದ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

 
ಏಪ್ರಿಲ್ 15ರಿಂದ ರೈಲು ಸಂಚಾರ ಸತ್ಯಕ್ಕೆ ದೂರ: ರೈಲ್ವೆ ಇಲಾಖೆ

ಏಪ್ರಿಲ್ 14ರ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಪ್ರಯಾಣಿಕರು ರೈಲು ಹೊರಡುವ ಸಮಯಕ್ಕಿಂತ ನಾಲ್ಕು ಗಂಟೆಗಳ ಕಾಲ ಮೊದಲೇ ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕು. ಅಲ್ಲದೇ ಎಲ್ಲಾ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಮುನ್ನ ಸ್ಕ್ರೀನಿಂಗ್ ಗೆ ಒಳಗಾಗಬೇಕು ಎಂಬ ಊಹಾಪೋಹ ಸುದ್ದಿಗಳು ವರದಿಯಾಗಿದೆ.

ಆದರೆ ಭಾರತೀಯ ರೈಲ್ವೆ ಇಲಾಖೆ ಇಂತಹ ಯಾವುದೇ ನಿಯಮಾವಳಿಯನ್ನು ಜಾರಿಗೊಳಿಸಿಲ್ಲ ಎಂದು ಕೇಂದ್ರ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

English summary

There Is No Plan For Resuming Train Service After April 14:Railways

The Indian Railways on Thursday denied all media reports that claimed confirmed decision has been made to resume 'train operations' from April 15
Story first published: Friday, April 10, 2020, 9:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X