For Quick Alerts
ALLOW NOTIFICATIONS  
For Daily Alerts

ಮಾರ್ಚ್‌-ಏಪ್ರಿಲ್‌ನಿಂದ ಈ ಐದು ವಸ್ತುಗಳು ದುಬಾರಿಯಾಗಲಿದೆ

|

ಹೊಸ ಹಣಕಾಸಿನ ವರ್ಷ ಆರಂಭಕ್ಕೆ ಇನ್ನೇನು ಒಂದು ತಿಂಗಳು ಅಷ್ಟೇ ಬಾಕಿ ಉಳಿದಿದೆ. ಮಾರ್ಚ್ ಕೊನೆಗೊಂಡು ಏಪ್ರಿಲ್ ಆರಂಭದಿಂದ 2020-21 ರ ಹಣಕಾಸಿನ ವರ್ಷ ಆರಂಭಗೊಳ್ಳುತ್ತದೆ. ಅದರ ಜೊತೆಗೆ ಈ ಐದು ವಸ್ತುಗಳು ದುಬಾರಿಯಾಗಲಿವೆ.

 

ಫೆಬ್ರವರಿ ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದರು. ಅಲ್ಲದೆ ತೆರಿಗೆಯಲ್ಲಿ ಕೆಲ ಬದಲಾವಣೆಗಳನ್ನು ತರಲಾಯಿತು. 2020ರ ಬಜೆಟ್‌ನ ಹೊಸ ಪ್ರಸ್ತಾಪಗಳು ಜಾರಿಗೆ ಬರಲಿವೆ. ಇದರಿಂದ ಕೆಲವು ವಸ್ತುಗಳು ನಿಮಗೆ ಹೆಚ್ಚು ವೆಚ್ಚ ತಗಲಿದೆ. ಅವುಗಳು ಪ್ರಮುಖವಾದದು ಈ ಕೆಳಗಿದೆ.

ಬೇಸಿಗೆಯ ಧಗೆ ಹೆಚ್ಚಿದಂತೆ ಏರಿಕೆಯಾಗಲಿದೆ AC

ಬೇಸಿಗೆಯ ಧಗೆ ಹೆಚ್ಚಿದಂತೆ ಏರಿಕೆಯಾಗಲಿದೆ AC

ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದೆ. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದ ಬಹುತೇಕ ಕಡೆ ಉಷ್ಣಾಂಶ ಹೆಚ್ಚುತ್ತಿದ್ದು ಜನರು ಬಿಸಿಲಿನ ದಗೆಗೆ ಈಗಲೇ ಏನಪ್ಪಾ ಈ ಬಿಸಿಲು ಎನ್ನುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಉಷ್ಣಾಂಶ ಮತ್ತಷ್ಟು ಏರಿದರೆ ಫ್ಯಾನ್‌, ಎಸಿ, ಕೂಲರ್‌ ಉತ್ಪನ್ನಗಳ ಮಾರಾಟವೂ ಏರಿಕೆಯಾಗುವ ಸಾಧ್ಯತೆ ಇದೆ.

ಆದರೆ ಗ್ರಾಹಕರು ಎಸಿ ಖರೀದಿ ಮಾಡಲು ಹೋದರೆ ಬಿಸಿಲಿನ ಧಗೆ ಜೊತೆಗೆ ಎಸಿ ಬೆಲೆ ಏರಿಕೆ ಬಿಸಿ ಕೂಡ ಎದುರಿಸಬೇಕು. ಈ ಬೆಲೆ ಏರಿಕೆಗೆ ಎರಡು ಪ್ರಮುಖ ಕಾರಣ ಅಂದರೆ ಮೊದಲನೆಯದು ಹವಾನಿಯಂತ್ರಣ ಸಂಕೋಚಕಗಳ ಮೇಲಿನ 5 ಪರ್ಸೆಂಟ್ ಕಸ್ಟಮ್ಸ್ ಸುಂಕದ ಹೆಚ್ಚಳ ಮತ್ತು ಚೀನಾದಲ್ಲಿನ ಕೊರೊನಾವೈರಸ್ ಹೆದರಿಕೆಯಿಂದಾಗಿ ಸರಬರಾಜು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

 

ವಾಹನಗಳ ಬೆಲೆ ಏರಿಕೆಯಾಗಲಿದೆ

ವಾಹನಗಳ ಬೆಲೆ ಏರಿಕೆಯಾಗಲಿದೆ

ಭಾರತ ಮಾತ್ರವಲ್ಲ, ಜಾಗತಿಕ ಒಇಎಂಗಳಿಗೆ ಚೀನಾದ ಮೇಲೆ ಅವಲಂಬನೆ ಇದೆ ಮತ್ತು ಈಗ ಲಾಜಿಸ್ಟಿಕ್ಸ್ ಕಾರಣದಿಂದಾಗಿ ಚೀನಾದಿಂದ ಸರಬರಾಜು ಪರಿಣಾಮ ಬೀರಿದರೆ ಗ್ರಾಹಕರು ನೇರವಾಗಿ ಲಾಜಿಸ್ಟಿಕ್ಸ್ ಮತ್ತು ಇತರ ವೆಚ್ಚವನ್ನು ಹೊರಬೇಕಾಗುತ್ತದೆ. ಇದರ ಜೊತೆಗೆ ಭಾರತದಲ್ಲಿ ಆಟೋಮೊಬೈಲ್ ಉದ್ಯಮವು ಬಿಎಸ್ VI ಎಂಜಿನ್ ಮಾನದಂಡಗಳನ್ನು ಬದಲಾಯಿಸುವ ಆಮೂಲಾಗ್ರ ಬದಲಾವಣೆಯ ಮೂಲಕ ಸಾಗುತ್ತಿದ್ದು ದರ ಹೆಚ್ಚಳಕ್ಕೆ ದಾರಿಯಾಗಲಿದೆ.

ಲಾಟರಿ ಬೆಲೆಯು ಹೆಚ್ಚಳ
 

ಲಾಟರಿ ಬೆಲೆಯು ಹೆಚ್ಚಳ

ಅಧಿಸೂಚನೆಯ ಪ್ರಕಾರ, ಲಾಟರಿಗಳು ಈಗ 28 ಪರ್ಸೆಂಟ್ ಜಿಎಸ್‌ಟಿಯನ್ನು ಆಕರ್ಷಿಸುತ್ತವೆ. ಬದಲಾದ ನಿಯಮಗಳಿಗೆ ಅನುಸಾರವಾಗಿ, ಲಾಟರಿಗಳ ಪೂರೈಕೆಗಾಗಿ, ಕೇಂದ್ರ ತೆರಿಗೆ ದರವನ್ನು 14 ಪರ್ಸೆಂಟ್‌ಗೆ ಬದಲಾಯಿಸಲಾಗಿದೆ ಮತ್ತು ಅದೇ ಶೇಕಡಾವಾರು ಮೊತ್ತವನ್ನು ರಾಜ್ಯಗಳು ವಿಧಿಸುತ್ತವೆ. ಲಾಟರಿಗಳ ಮೇಲಿನ ಒಟ್ಟು ಜಿಎಸ್‌ಟಿ ಪರಿಣಾಮವನ್ನು 28 ಪರ್ಸೆಂಟ್ ತೆಗೆದುಕೊಳ್ಳುತ್ತದೆ. ಹೊಸ ಹೆಚ್ಚಿನ ದರ ಮಾರ್ಚ್ 1 ರಿಂದ ಜಾರಿಗೆ ಬರಲಿದೆ.

ಐಸ್‌ಕ್ರೀಂ ಮತ್ತು ಹೆಪ್ಪುಗಟ್ಟಿದ ಸಿಹಿತಿಂಡಿಗಳ ಬೆಲೆ ಏರಿಕೆ

ಐಸ್‌ಕ್ರೀಂ ಮತ್ತು ಹೆಪ್ಪುಗಟ್ಟಿದ ಸಿಹಿತಿಂಡಿಗಳ ಬೆಲೆ ಏರಿಕೆ

ಕಡಿಮೆ ಹಾಲು ಪೂರೈಕೆ ಮತ್ತು ಐಸ್‌ಕ್ರೀಮ್‌ಗಳಿಗೆ ಬಳಸುವ ಪ್ರಮುಖ ಅಂಶವಾದ ಕೆನೆರಹಿತ ಹಾಲಿನ ಪುಡಿಯನ್ನು ಆಮದು ಮಾಡಿಕೊಳ್ಳುವ ವೆಚ್ಚ ಹೆಚ್ಚಿದ ಕಾರಣ, ಈ ಉತ್ಪನ್ನಗಳ ಬೆಲೆಯನ್ನು ಈಗಾಗಲೇ ಅಮುಲ್ ಸೇರಿದಂತೆ ಕೆಲವು ಪ್ರಮುಖ ಉತ್ಪಾದಕರು ಹೆಚ್ಚಿಸಿದ್ದಾರೆ.

English summary

These 5 Things To Get Expensive From March/April

These 5 Things To Get Expensive From March/April. Budget 2020 Proposals will effect few items cost
Story first published: Tuesday, February 25, 2020, 14:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X