ಲೆವೀಸ್‌ನ ಈ ಜೀನ್ಸ್ 71 ಲಕ್ಷ ರೂಪಾಯಿಗೆ ಹರಾಜು!

1880ರ ಅಪರೂಪದ ಲೆವೀಸ್ ಜೀನ್ಸ್ ಹಲವು ವರ್ಷದಿಂದ ಮುಚ್ಚಿರುವ ಗಣಿಯಲ್ಲಿ ಪತ್ತೆಯಾಗಿದೆ. ಈ ಜೀನ್ಸ್ ಅನ್ನು 71 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದೆ. ಅಂದರೆ ಸುಮಾರು 87,400 ಡಾಲರ್‌ಗೆ ಹರಾಜಾಗಿದೆ.

ಜೀನ್ಸ್ ಅನ್ನು ತಯಾರಿ ಮಾಡುವ ಡೇನಿಮ್‌ (ಹತ್ತಿ) ಬಗ್ಗೆ ಹೆಚ್ಚು ತಿಳಿದಿರುವ ತಜ್ಞ ಎಂದು ತನ್ನನ್ನು ಪರಿಚಯಿಸಿಕೊಂಡಿರುವ ಮೈಕಲ್ ಹ್ಯಾರಿಸ್ ಈ ಜೀನ್ಸ್ ಪ್ಯಾಂಟ್ ಅನ್ನು ಪತ್ತೆ ಹಚ್ಚಿದ್ದಾರೆ. ಅದನ್ನು ಡೇನಿಮ್ ಡಾಕ್ಟರ್ಸ್‌ಗೆ ಮಾರಾಟ ಮಾಡಿದ್ದಾರೆ. ನ್ಯೂ ಮೆಕ್ಸಿಕೋದಲ್ಲಿ ನಡೆದ ಉತ್ಸವವೊಂದರಲ್ಲಿ (Durango Vintage Festivus) ಈ ಜೀನ್ಸ್ ಅನ್ನು ಹರಾಜು ಮಾಡಲಾಗಿದೆ.

"ಈ ಜೀನ್ಸ್ ಅತೀ ವಿರಳವಾದ ಜೀನ್ಸ್ ಆಗಿದೆ. ಇದು ಅದ್ಭುತವಾಗಿ ಜೀನ್ಸ್ ಆಗಿದೆ," ಎಂದು ಬಿಡ್ಡರ್ ಜಿಪ್ ಸ್ಟಿವೆನ್ಸನ್ ಹೇಳಿದ್ದಾರೆ. "ಈ ಜೀನ್ಸ್‌ನಲ್ಲಿ ಒಂದೆರಡು ಕಡೆ ಕೊಂಚ ಹರಿಯುವಂತಾಗಿದೆ. ಅದನ್ನು ಸರಿಪಡಿಸಲು ಸಾಧ್ಯವಿದೆ. ಅದನ್ನು ಹೊರತುಪಡಿಸಿ ಈ ಜೀನ್ಸ್ ಸೂಪರ್, ಡೂಪರ್ ಜೀನ್ಸ್ ಆಗಿದೆ," ಎಂದು ಡೆನೀಮ್ ಡಾಕ್ಟರ್ಸ್ ರಿಪೇರ್ ಶಾಪ್ ಹೇಳಿಕೊಂಡಿದೆ.

ಲೆವೀಸ್‌ನ ಈ ಜೀನ್ಸ್ 71 ಲಕ್ಷ ರೂಪಾಯಿಗೆ ಹರಾಜು!

ಬಿಡ್ಡರ್ ಜಿಪ್ ಸ್ಟಿವೆನ್ಸನ್ ಈ ಜೀನ್ಸ್ ಅನ್ನು ಖರೀದಿ ಮಾಡಿದ್ದಾರೆ. ಕೈಲ್ ಹಾಂಟರ್ ಜೊತೆಗೆ ಈ ಜೀನ್ಸ್ ಅನ್ನು ಖರೀದಿ ಮಾಡಿದ್ದಾರೆ. ಈ ಜೀನ್ಸ್ ಅತೀ ವಿರಳವಾದ ಜೀನ್ಸ್ ಆಗಿದೆ. ಈ ಎರಡು ಜೀನ್ಸ್‌ಗಳು ಮಾತ್ರ ಲಭ್ಯವಿದೆ ಎಂದಿದ್ದಾರೆ.

ಈ ಜೀನ್ಸ್ ತೊಡುವ ಸ್ಥಿತಿಯಲ್ಲಿ ಇಲ್ಲ. ಕೆಲವು ಸಣ್ಣ ಪುಟ್ಟ ರಿಪೇರಿ ಮಾಡಿಕೊಂಡು ಈ ಜೀನ್ಸ್ ಅನ್ನು ತೊಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಮೈಕಲ್ ಹ್ಯಾರಿಸ್ , "ನಾನು ಸುಮಾರು 50 ಪಾಳು ಬಿದ್ದಿರುವ ಗಣಿಗಳಲ್ಲಿ ಹುಡುಕಾಟ ನಡೆಸಿದ್ದೇವೆ. ಐದು ವರ್ಷಗಳ ಕಾಲ ಹುಡುಕಾಟ ನಡೆಸಿದ್ದೇವೆ. ಆದರೆ ಇಷ್ಟು ಗುಣಮಟ್ಟದ ಜೀನ್ಸ್ ಈವರೆಗೂ ಪತ್ತೆಯಾಗಿಲ್ಲ," ಎಂದು ತಿಳಿಸಿದ್ದಾರೆ.

ಬ್ಯಾಂಕ್ ಲಾಕರ್‌ನಲ್ಲಿ ಜೀನ್ಸ್

ಈ ಜೀನ್ಸ್‌ನ ಒಳಭಾಗದಲ್ಲಿರುವ ಲೇಬಲ್‌ನಲ್ಲಿ, "The only kind made by white labor" ಎಂದು ಬರೆಯಲಾಗಿದೆ. 1882ರ ಚೈನೀಸ್ ಎಕ್ಸ್ಯೂಷನ್ ಕಾಯ್ದೆಯ ಬಳಿಕ ಲೆವೀಸ್ ತನ್ನ ಜೀನ್ಸ್‌ಗಳಲ್ಲಿ ಈ ಘೋಷಣೆ ಹಾಕುತ್ತಿದೆ. ಈ ಕಾಯ್ದೆಯು ಚೀನಾದ ಕೆಲಸಗಾರರು ಯುಎಸ್‌ಗೆ ಆಗಮಿಸುವುದನ್ನು ನಿಷೇಧಿಸುತ್ತದೆ. ಈ ಜೀನ್ಸ್ ಅನ್ನು ಸದ್ಯ ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿದೆ. ನೇಮಕಾತಿಯನ್ನು ಪಡೆದು ಜೀನ್ಸ್ ನೋಡಲು ಅವಕಾಶವಿದೆ.

ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ

ಲೆವೀಸ್ ಜೀನ್ಸ್ ತೆರಪಿಯನ್ನು ಆರಂಭ ಮಾಡಲು ಮುಂದಾಗುತ್ತಿದೆ ಎಂದು ನೆಟ್ಟಿಗರೋರ್ವರು ಲೇವಡಿ ಮಾಡಿದ್ದರೆ, ಹಲವಾರು ಮಂದಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಆಶ್ಚರ್ಯ ಸೂಚಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+