For Quick Alerts
ALLOW NOTIFICATIONS  
For Daily Alerts

ಜಪಾನ್ ನ ಶತಕೋಟ್ಯಧಿಪತಿ 1 ಸಾವಿರ ಮಂದಿಗೆ ತಲಾ 1 ಮಿಲಿಯನ್ ಯೆನ್ ಕೊಡ್ತಾರೆ

|

ಆ ಒಂದು ಸಾವಿರ ಮಂದಿ ಅದೃಷ್ಟಶಾಲಿಗಳು ಯಾರು ಎಂದು ತಿಳಿದುಕೊಳ್ಳಲು ನಲವತ್ತು ಲಕ್ಷಕ್ಕೂ ಹೆಚ್ಚು ಮಂದಿ ಕಾಯುತ್ತಿದ್ದಾರೆ. ಅಂದ ಹಾಗೆ ಈ ನಲವತ್ತು ಲಕ್ಷ ಜನ ಯಾರು ಅಂತೀರಾ? ಇವರೆಲ್ಲ ಜಪಾನ್ ನ ಶತ ಕೋಟ್ಯಧಿಪತಿ ಯುಸಕು ಮೆಝವಾ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದವರು. ಈ ಪುಣ್ಯಾತ್ಮ ಒಂದು ಘೋಷಣೆ ಮಾಡಿದ್ದಾರೆ: ಆಯ್ದ ಸಾವಿರ ಮಂದಿ ಅದೃಷ್ಟಶಾಲಿಗಳಿಗೆ ಒಂಬತ್ತು ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಹಂಚುತ್ತಾರಂತೆ.

 

ಭಾರತೀಯ ರುಪಾಯಿಗಳಲ್ಲಿ ಹೇಳಬೇಕು ಅಂದರೆ, ಅರವತ್ನಾಲ್ಕು ಕೋಟಿ ರುಪಾಯಿ. ಇಷ್ಟು ಮೊತ್ತವನ್ನು ಆಯ್ದ ಸಾವಿರ ಮಂದಿಗೆ ಹಂಚಿ, ಅವರ ಬದುಕಿನಲ್ಲಿ ಹಣವು ಸಂತೋಷ ತರಬಹುದಾ ಎಂದು ನೋಡಲು ಬಯಸುತ್ತಾರಂತೆ ಯುಸಕು. ಹೊಸ ವರ್ಷದ ಹಿಂದಿನ ಯುಸಕು ಘೋಷಣೆ ಮಾಡಿದರು, ಟ್ವಿಟ್ಟರ್ ಬಳಕೆದಾರರಿಗೆ ಒಂದು ಬಿಲಿಯನ್ ಯೆನ್ ಹಂಚುವುದಾಗಿ ತಿಳಿಸಿದರು. ಹಣವು ಅವರ ಸಂತೋಷವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ನೋಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದರು.

 
ಈ ಕೋಟ್ಯಧಿಪತಿ 1 ಸಾವಿರ ಮಂದಿಗೆ ತಲಾ 1 ಮಿಲಿಯನ್ ಯೆನ್ ಕೊಡ್ತಾರೆ ಏಕೆ?

ಈ ಅದೃಷ್ಟದಾಟದಲ್ಲಿ ಭಾಗವಹಿಸಲು ಬಯಸುವವರು ಮಾಡಬೇಕಾಗಿದ್ದದ್ದು ಇಷ್ಟೇ: ಜನವರಿ ಏಳನೇ ತಾರೀಕಿನ ಮಧ್ಯರಾತ್ರಿಗೆ ಮುನ್ನ ಯುಸಕು ಟ್ವೀಟ್ ಅನ್ನು ರೀಟ್ವೀಟ್ ಮಾಡಬೇಕಿತ್ತು. ಅಂದ ಹಾಗೆ ಸಾವಿರ ಅದೃಷ್ಟಶಾಲಿಗಳಿಗೆ ತಲಾ ಒಂದು ಮಿಲಿಯನ್ ಯೆನ್ ದೊರೆಯುತ್ತದೆ.

ಲಾಟರಿ ಮೂಲಕ ವಿಜಯಿ ಯಾರು ಅಂತ ಆರಿಸಲಾಗುತ್ತದೆ. ಯುಸಕು ಸ್ವತಃ ಮೆಸೇಜ್ ಮಾಡಿ, ಎರಡ್ಮೂರು ದಿನದೊಳಗೆ ವಿಜಯಿಗಳಿಗೆ ಮಾಹಿತಿ ನೀಡುತ್ತಾರೆ ಎಂದು ಸಿಎನ್ ಎನ್ ವರದಿ ಮಾಡಿದೆ. ಕಳೆದ ವರ್ಷದ ಜನವರಿಯಲ್ಲಿ ಇದೇ ರೀತಿ ನೂರು ಮಂದಿ ಟ್ವಿಟ್ಟರ್ ಬಳಕೆದಾರರಿಗೆ ತಲಾ ಒಂದು ಮಿಲಿಯನ್ ವಿತರಿಸುವುದಾಗಿ ಹೇಳಿದ್ದರು. ಆಗ ಅವರ ಟ್ಬೀಟ್ 46.8 ಲಕ್ಷ ಬಾರಿ ರೀಟ್ವೀಟ್ ಆಗಿತ್ತು.

English summary

This Billionaire Is Giving Away 1 Billion Yen To People On Twitter

Online shopping mogul Yusaku Maezawa posted a tweet to give away 1 billion yen to the Twitter users, to see if money improves their happiness.
Story first published: Friday, January 10, 2020, 18:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X