For Quick Alerts
ALLOW NOTIFICATIONS  
For Daily Alerts

1 ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಇಂದು 11.26 ಲಕ್ಷ ರೂ.!

|

ಕೋವಿಡ್-19 ಸಾಂಕ್ರಾಮಿಕದ ಬಳಿಕ ಭಾರತೀಯ ಷೇರುಪೇಟೆ ಸಾಕಷ್ಟು ಏರಿಳಿತಗೊಂಡಿದ್ದು, ಒಂದು ವರ್ಷದ ಹಿಂದೆ ಕುಸಿದಿದ್ದ ಕೆಲವು ಷೇರುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನ ತಲುಪಿದೆ. ಇದರಲ್ಲಿ ಮಿಂಡಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಸೇರಿವೆ.

ಸಣ್ಣ ಬಿಜಿನೆಸ್ ಐಡಿಯಾ: ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಸಂಪಾದಿಸಿ!ಸಣ್ಣ ಬಿಜಿನೆಸ್ ಐಡಿಯಾ: ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಸಂಪಾದಿಸಿ!

ಹೌದು, ಮಿಂಡಾ ಇಂಡಸ್ಟ್ರೀಸ್ ಷೇರುಗಳು ಒಂದು ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಶೇ. 126ರಷ್ಟು ಲಾಭವನ್ನು ನೀಡಿದೆ. ಅಂದರೆ ಜುಲೈ 13, 2020 ರಂದು ಈ ಷೇರು 303.48 ರೂ.ಗಳಷ್ಟಿತ್ತು, ಆದರೆ ಈಗ 684 ರೂಪಾಯಿಗೆ ಜಿಗಿತ ಕಂಡಿದೆ. ಈ ಅವಧಿಯಲ್ಲಿ ಈ ಷೇರಿನ ಮೌಲ್ಯವು ಶೇಕಡಾ 126ರಷ್ಟು ಹೆಚ್ಚಾ ಲಾಭ ನೀಡಿದೆ. ಇದಕ್ಕೆ ಕಾರಣ ಸೆನ್ಸೆಕ್ಸ್ ಒಂದು ವರ್ಷದಲ್ಲಿ ಶೇಕಡಾ 43ರಷ್ಟು ಏರಿಕೆಯಾಗಿದೆ.

ಒಂದು ವರ್ಷದ ಹಿಂದೆ ವಾಹನಗಳ ಕಾಂಪೊನೆಂಟ್ ತಯಾರಕ ಮಿಂಡಾ ಇಂಡಸ್ಟ್ರೀಸ್‌ ಷೇರಿನಲ್ಲಿ ಹೂಡಿಕೆ ಮಾಡಿದ 5 ಲಕ್ಷ ರೂ. ಇಂದು 11.26 ಲಕ್ಷ ರೂ. ಆಗಿದೆ.

1 ವರ್ಷದ ಹಿಂದೆ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಇಂದು 11.26 ಲಕ್ಷ ರೂ

ಈ ವರ್ಷದ ಆರಂಭದಿಂದ ಈ ಷೇರು ಶೇ. 69 ರಷ್ಟು ಲಾಭ ಗಳಿಸಿದೆ. ಇದು ಬಿಎಸ್‌ಇನಲ್ಲಿ ಹಿಂದಿನ ಕ್ಲೋಸ್‌ 653.70 ಕ್ಕೆ ಹೋಲಿಸಿದರೆ ಶೇ 0.8 ರಷ್ಟು ಏರಿಕೆ ಕಂಡು 659.00 ರೂ.ಗೆ ತಲುಪಿದೆ. ಇದು ತನ್ನ ಪ್ರಬಲ ಏರಿಕೆಯನ್ನ ಮುಂದುವರೆಸಿದೆ ಮತ್ತು ಶೇಕಡಾ 5 ರಷ್ಟು ಏರಿಕೆಯಾಗಿದ್ದು, ಬಿಎಸ್‌ಇಯಲ್ಲಿ 684.00 ರೂ.ಗೆ ತಲುಪಿದೆ.

18,000 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ಈ ಷೇರು 5 ದಿನ, 10 ದಿನ, 20 ದಿನ, 50 ದಿನ, 100 ದಿನ ಮತ್ತು 200 ದಿನಗಳ ಸರಾಸರಿಗಿಂತ ಹೆಚ್ಚಾಗಿದೆ.

ಮಾರ್ಚ್ 2021 ರಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಮಿಂಡಾ ಇಂಡಸ್ಟ್ರೀಸ್ 140.32 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಮಾರ್ಚ್ 2020 ರಲ್ಲಿ 7.30 ಕೋಟಿ ರೂ. ನಿವ್ವಳ ಲಾಭವಾಗಿದೆ. ಮಾರ್ಚ್ 2021 ರಲ್ಲಿ ನಿವ್ವಳ ಮಾರಾಟವು 2,238.27 ಕೋಟಿ ರೂ. ತಲುಪಿದೆ.

English summary

This Stock Doubled Investor Wealth Within A Year: Do You Own It?

Share of Minda Industries Limited has delivered 126 per cent return to its shareholders in one year. The share stood at Rs 303.48 on July 13, 2020. It has zoomed to Rs 684 today
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X