For Quick Alerts
ALLOW NOTIFICATIONS  
For Daily Alerts

ಟೊಮೆಟೋ ಕೇಜಿಗೆ 75 ಪೈಸೆ, ಈರುಳ್ಳಿ ಕೇಜಿಗೆ 50 ಪೈಸೆ

|

ದೆಹಲಿಯ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಟೊಮೆಟೋ, ಈರುಳ್ಳಿ ಸೇರಿದಂತೆ ಎಲ್ಲ ತರಕಾರಿಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಏಷ್ಯಾದಲ್ಲೇ ಅತಿ ದೊಡ್ಡ ಸಗಟು ಮಾರುಕಟ್ಟೆಯಾದ ಆಜಾದ್ ಪುರ್ ಮಂಡಿಯಲ್ಲಿ ಟೊಮೆಟೋದ ಬೆಲೆ ಕೇಜಿಗೆ 1 ರುಪಾಯಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ತರಕಾರಿಗಳ ಚಿಲ್ಲರೆ ಮಾರಾಟಗಾರರ ಸಂಖ್ಯೆಯೇ ಕುಸಿದಿದೆ. ಆದ್ದರಿಂದಲೇ ಬೇಡಿಕೆ ಕೂಡ ಕುಸಿದಿದೆ ಎಂದು ಮಂಡಿ ವರ್ತಕರು, ಏಜೆಂಟರು ತಿಳಿಸಿದ್ದಾರೆ. ಓಕ್ಲಾ ಮಂಡಿಯಲ್ಲಿನ ಮುಖ್ಯ ವರ್ತಕರೊಬ್ಬರು ಮಾಧ್ಯಮಗಳ ಜತೆ ಮಾತನಾಡಿ, ಟೊಮೆಟೋ ಮಾತ್ರವಲ್ಲ, ಹಸಿರು ತರಕಾರಿಗಳು ಕೂಡ ಕೇಜಿಗೆ ಇಪ್ಪತ್ತೈದು ಪೈಸೆಯಿಂದ ಒಂದು ರುಪಾಯಿಯಂತೆ ಮಾರಾಟ ಆಗುತ್ತಿದೆ ಎಂದಿದ್ದಾರೆ.

ಈರುಳ್ಳಿಯ ಸರಾಸರಿ ಬೆಲೆ  50 ಪೈಸೆಯಿಂದ 1 ರುಪಾಯಿ

ಈರುಳ್ಳಿಯ ಸರಾಸರಿ ಬೆಲೆ 50 ಪೈಸೆಯಿಂದ 1 ರುಪಾಯಿ

ಉದ್ದಬದನೆ ಬೆಲೆ ಕೇಜಿಗೆ ಎರಡು ರುಪಾಯಿಯಿಂದ ಮೂರಕ್ಕೆ ಏರಿಕೆ ಆಗಿದೆ. ಇನ್ನು ಹೀರೇಕಾಯಿ ಕೇಜಿಗೆ 6 ರುಪಾಯಿಯಂತೆ ಮಾರಾಟ ಆಗುತ್ತಿದೆ. ಈರುಳ್ಳಿಯ ಸರಾಸರಿ ಬೆಲೆ ಈ ತಿಂಗಳಲ್ಲಿ 50 ಪೈಸೆಯಿಂದ 1 ರುಪಾಯಿಗೆ ಕುಸಿದಿದೆ. ದೆಹಲಿಯಿಂದ ಹತ್ತಾರು ಲಕ್ಷ ಮಂದಿ ವಲಸಿಗರು ಹೊರಟುಬಿಟ್ಟಿದ್ದಾರೆ. ಆದ್ದರಿಂದಲೇ ಬೇಡಿಕೆ ಕುಸಿತವಾಗಿದೆ ಎನ್ನಲಾಗುತ್ತಿದೆ.

ರೆಸ್ಟೋರೆಂಟ್, ಡಾಬಾಗಳು ಮುಚ್ಚಿವೆ

ರೆಸ್ಟೋರೆಂಟ್, ಡಾಬಾಗಳು ಮುಚ್ಚಿವೆ

ರೆಸ್ಟೋರೆಂಟ್ ಗಳು, ಡಾಬಾಗಳು ಮುಚ್ಚಿರುವುದರಿಂದ ಕೂಡ ತರಕಾರಿಗಳ ಬಳಕೆ ಕಡಿಮೆ ಆಗಿದೆ. ಇದರಿಂದ ಬೇಡಿಕೆ ಕಡಿಮೆ ಆಗಿ, ಬೆಲೆ ಕುಸಿದಿದೆ. ಇನ್ನು ಮಾರ್ಕೆಟ್ ನಲ್ಲಿ ಗ್ರಾಹಕರಿಗೆ ಟೋಕನ್ ಪದ್ಧತಿ ತರಲಾಗಿದೆ. ಇದರಿಂದ ಉದ್ದದ ಸರತಿ ಆಗುತ್ತಿದೆ. ಈ ಕಾರಣಕ್ಕೆ ಕೂಡ ಗ್ರಾಹಕರು ಖರೀದಿಯಿಂದ ದೂರ ಉಳಿಯುತ್ತಿದ್ದಾರೆ.

 ಟೊಮೆಟೋ ಬೆಲೆ 0.75 ಪೈಸೆಯಿಂದ 5.25 ರುಪಾಯಿಗೆ ಇಳಿಕೆ

ಟೊಮೆಟೋ ಬೆಲೆ 0.75 ಪೈಸೆಯಿಂದ 5.25 ರುಪಾಯಿಗೆ ಇಳಿಕೆ

ಆಜಾದ್ ಪುರ್ ಮಂಡಿಯಲ್ಲಿನ ಮಾಹಿತಿ ಪ್ರಕಾರ, ಮೇ 1ನೇ ತಾರೀಕಿನಂದು ಟೊಮೆಟೋ ಕೇಜಿಗೆ 6ರಿಂದ 15.25 ರುಪಾಯಿ ಇತ್ತು. ಕಳೆದ ಮೂರು ದಿನದಿಂದ 0.75 ಪೈಸೆಯಿಂದ 5.25 ರುಪಾಯಿಗೆ ಇಳಿದಿದೆ. ಅದೇ ರೀತಿ ಈರುಳ್ಳಿಯ ಹೋಲ್ ಸೇಲ್ ದರ ಕೇಜಿಗೆ ಮೇ 1ನೇ ತಾರೀಕು 4.50 ರುಪಾಯಿಯಿಂದ 11 ರು. ತನಕ ಇತ್ತು. ಆದರೆ ಶನಿವಾರದಂದು 2.50 ರುಪಾಯಿಯಿಂದ 8.50 ರು.ಗೆ ಕುಸಿದಿದೆ. ಆದರೆ ದೆಹಲಿ ಸುತ್ತ ಟೊಮೆಟೋ ಕೇಜಿಗೆ 15ರಿಂದ 20 ರುಪಾಯಿಗೆ ಮಾರಲಾಗುತ್ತಿದೆ. ಸಾಗಾಟದ ವೆಚ್ಚ ಹೆಚ್ಚು ಬೀಳುವುದರಿಂದ ಹೆಚ್ಚಿನ ದರಕ್ಕೆ ಮಾರಬೇಕಾಗುತ್ತದೆ ಎಂಬುದು ಕೇಳಿಬರುವ ಮಾತು.

English summary

Tomato And Onion Price Huge Drop In Delhi

Due to drop in demand vegetables price including tomato, onion price drop in Delhi whole sale market.
Story first published: Sunday, May 24, 2020, 11:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X