For Quick Alerts
ALLOW NOTIFICATIONS  
For Daily Alerts

ಜಾಗತಿಕ ಮಾರುಕಟ್ಟೆ ಟಾಪ್ 100 ಕಂಪನಿಗಳ ಮೌಲ್ಯ 31 ಟ್ರಿಲಿಯನ್ ಡಾಲರ್‌ಗೇರಿಕೆ

|

ಜಾಗತಿಕವಾಗಿ ಅಗ್ರ 100 ಕಂಪನಿಗಳ ಮಾರುಕಟ್ಟೆ ಮೌಲ್ಯ 10.3 ಟ್ರಿಲಿಯನ್‌ ಡಾಲರ್‌ನಿಂದ 31.7 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ, ಮಾರ್ಚ್ 2020 ರಿಂದ ಮಾರ್ಚ್ 2021 ರವರೆಗೆ 48 ಶೇಕಡಾ ಹೆಚ್ಚಳವಾಗಿದೆ ಎಂದು ಭಾನುವಾರದಂದು ಹೊಸ ವರದಿ ಬಂದಿದೆ.

ಆಪಲ್ 2.85 ಟ್ರಿಲಿಯನ್ ಡಾಲರ್‌ನೊಂದಿಗೆ ಮಾರುಕಟ್ಟೆ ಬಂಡವಾಳದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಸೌದಿ ಅರಾಮ್ಕೊ, ಮೈಕ್ರೋಸಾಫ್ಟ್, ಆಲ್ಫಾಬೆಟ್ ಮತ್ತು ಅಮೆಜಾನ್ ನಂತರದ ಸ್ಥಾನಗಳಲ್ಲಿವೆ ಎಂದು , ಲಂಡನ್ ಮೂಲದ ಲೆಕ್ಕಪರಿಶೋಧಕ ಕಂಪನಿ PwC ಮಾಹಿತಿ ನೀಡಿದೆ.

ಸೌದಿಯ ಅರಾಮ್ಕೊ ಮತ್ತು ಮೈಕ್ರೋಸಾಫ್ಟ್‌ಗಿಂತ ಕ್ರಮವಾಗಿ ಶೇಕಡಾ 6 ಮತ್ತು ಶೇಕಡಾ 13 ರ ಮೌಲ್ಯ ಹೆಚ್ಚಳ ಕಂಡಿರುವ ಆಪಲ್ ಮತ್ತೊಮ್ಮೆ ಮಾರುಕಟ್ಟೆ ಬಂಡವಾಳೀಕರಣ ಹೆಚ್ಚಿಸಿಕೊಂಡು, ವಿಶ್ವದ ಅತಿದೊಡ್ಡ ಕಂಪನಿಯಾಗಿ ಹೊರ ಹೊಮ್ಮಿದೆ.

ಮಾರುಕಟ್ಟೆ ಬಂಡವಾಳೀಕರಣ ಮತ್ತು ಕಂಪನಿಗಳ ಸಂಖ್ಯೆಯ ವಿಷಯದಲ್ಲಿ ಯುನೈಟೆಡ್ ಸ್ಟೇಟ್ಸ್ 'ಗ್ಲೋಬಲ್ ಟಾಪ್ 100' ಪಟ್ಟಿಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ, 59 ಕಂಪನಿಗಳು ಒಟ್ಟು ಮಾರುಕಟ್ಟೆ ಬಂಡವಾಳೀಕರಣದ ಶೇ 65 ರಷ್ಟು ಹೊಂದಿವೆ ಎಂದು ವರದಿ ತೋರಿಸಿದೆ.

ರಿಲಯನ್ಸ್, ಟಿಸಿಎಸ್ ಸ್ಥಾನ

ರಿಲಯನ್ಸ್, ಟಿಸಿಎಸ್ ಸ್ಥಾನ

ರಿಲಯನ್ಸ್ ಇಂಡಸ್ಟ್ರೀಸ್ (58 ನೇ ಸ್ಥಾನದಲ್ಲಿ) ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (69 ನೇ ಸ್ಥಾನ) ಜಾಗತಿಕ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದಿಂದ ಎರಡು ಕಂಪನಿಗಳಾಗಿವೆ.

ಐಪಿಒ ಮಾರುಕಟ್ಟೆ ಸಕತ್ ಟ್ರೆಂಡ್ ನಲ್ಲಿದ್ದರೂ IPO ಮೂಲಕ 'ಗ್ಲೋಬಲ್ ಟಾಪ್ 100' ಕಂಪನಿಗಳಿಗೆ ನೇರವಾಗಿ ಯಾವುದೇ ಸಂಸ್ಥೆಗಳು ಪ್ರವೇಶಿಸಿಲ್ಲ.

"ಟಾಪ್ ಕಂಪನಿಗಳ ಪಟ್ಟಿಗೆ ಪ್ರವೇಶಿಸುವ ಮಿತಿ ಈಗ $129 ಬಿಲಿಯನ್ ಆಗಿದೆ, ಇದು IPO ಮೂಲಕ ಭವಿಷ್ಯದಲ್ಲಿ ಪ್ರವೇಶಿಸುವವರಿಗೆ ತಡೆಗೋಡೆಯನ್ನು ಸೃಷ್ಟಿಸುತ್ತದೆ" ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕುಸಿತ ಕಂಡ ಸ್ಯಾಮ್ ಸಂಗ್

ಕುಸಿತ ಕಂಡ ಸ್ಯಾಮ್ ಸಂಗ್

Samsung Electronics Co ಮಾರುಕಟ್ಟೆ ಬಂಡವಾಳೀಕರಣದ ವಿಷಯದಲ್ಲಿ ವಿಶ್ವದ 22 ನೇ-ಅತಿದೊಡ್ಡ ಕಂಪನಿಯಾಗಿದೆ, ಹಿಂದಿನ ವರ್ಷಕ್ಕಿಂತ ಏಳು ಹಂತಗಳಷ್ಟು ಕೆಳಗಿಳಿದಿದೆ.

ದಕ್ಷಿಣ ಕೊರಿಯಾ ಮೂಲದ ಏಕೈಕ ಕಂಪನಿಯಾಗಿ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಟೆಕ್ ದೈತ್ಯವು ಮಾರ್ಚ್‌ನ ಹೊತ್ತಿಗೆ $342 ಶತಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ಪಟ್ಟಿಯಲ್ಲಿದೆ.

ತೈವಾನ್ ಸೆಮಿಕಂಡಕ್ಟರ್ ಉತ್ಪದನಾ ಸಂಸ್ಥೆ 10 ನೇ ಸ್ಥಾನದಲ್ಲಿದೆ, ಅದರ ಮಾರುಕಟ್ಟೆ ಕ್ಯಾಪ್ $541 ಶತಕೋಟಿಯನ್ನು ತಲುಪಿದೆ, ಹಿಂದಿನ ವರ್ಷಕ್ಕಿಂತ ಒಂದು ಹಂತ ಮೇಲಕ್ಕೇರಿದೆ.

ಅಮೆಜಾನ್‌ ಹಾಗೂ ಟೆಸ್ಲಾ

ಅಮೆಜಾನ್‌ ಹಾಗೂ ಟೆಸ್ಲಾ

ಅಮೆಜಾನ್‌ನ ಮಾರುಕಟ್ಟೆ ಬಂಡವಾಳೀಕರಣವು ಮಾರ್ಚ್ 2021 ರ ವರ್ಷದಲ್ಲಿ ಶೇಕಡಾ 61 ರಷ್ಟು ಹೆಚ್ಚಾಗಿದೆ, 2020 ರ ಉದ್ದಕ್ಕೂ ಮತ್ತು 2021 ರವರೆಗೂ ಕಂಡುಬರುವ "ಸ್ಟೇ-ಅಟ್-ಹೋಮ್ ಎಕಾನಮಿ" ಯಿಂದ ಬೆಂಬಲಿತವಾಗಿದೆ, ಮೌಲ್ಯ ಬಲವರ್ಧನೆ ಕಂಡರೂ ಅಮೆಜಾನ್ ನಾಲ್ಕನೇ ಸ್ಥಾನದಿಂದ ಮೇಲಕ್ಕೇರಲು ಆಗಿಲ್ಲ.

ಎಲೋನ್ ಮಸ್ಕ್-ಚಾಲಿತ ಟೆಸ್ಲಾ ಅವರ ಮಾರುಕಟ್ಟೆ ಬಂಡವಾಳೀಕರಣವು ಮಾರ್ಚ್ 2020 ರಲ್ಲಿ $ 96 ಶತಕೋಟಿಯಿಂದ ಮಾರ್ಚ್ 2021 ರಲ್ಲಿ $ 641 ಶತಕೋಟಿಗೆ ಏರಿತು, ಇದು ಬೆರಗುಗೊಳಿಸುವ 565 ಶೇಕಡಾ ಹೆಚ್ಚಳ ಕಂಡಿದೆ.

ತಂತ್ರಜ್ಞಾನವು ಅತಿದೊಡ್ಡ ವಲಯ

ತಂತ್ರಜ್ಞಾನವು ಅತಿದೊಡ್ಡ ವಲಯ

ಮಾರುಕಟ್ಟೆ ಬಂಡವಾಳೀಕರಣದ ($10.5 ಟ್ರಿಲಿಯನ್) ವಿಷಯದಲ್ಲಿ ತಂತ್ರಜ್ಞಾನವು ಅತಿದೊಡ್ಡ ವಲಯವಾಗಿ ಮುಂದುವರಿದಿದೆ.

ವ್ಯಾಪಕ ಉದ್ಯಮ ಸೂಚ್ಯಂಕ ಕಾರ್ಯಕ್ಷಮತೆಗೆ ಅನುಗುಣವಾಗಿ ಜಾಗತಿಕ ಟಾಪ್ 100 ತಂತ್ರಜ್ಞಾನ ಕಂಪನಿಗಳು ಮಾರ್ಚ್ 2020 ರಂತೆ ತಮ್ಮ ಮೌಲ್ಯಕ್ಕೆ ಹೋಲಿಸಿದರೆ 71% ಹೆಚ್ಚಳವನ್ನು ಕಂಡಿವೆ,

ಖಾಸಗಿ ಕಂಪನಿ ಡೊಮೇನ್‌ನಲ್ಲಿ, $1 ಬಿಲಿಯನ್ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಟಾಪ್ 100 ಯುನಿಕಾರ್ನ್‌ಗಳಲ್ಲಿ ಅರ್ಧದಷ್ಟು (31 ಮಾರ್ಚ್ 2021 ರಲ್ಲಿ) ಯುಎಸ್ ಮೂಲದ ಕಂಪನಿಗಳಾಗಿವೆ.

ಟಾಪ್ 100 ಯುನಿಕಾರ್ನ್‌ಗಳ ಮೌಲ್ಯವು ಮಾರ್ಚ್ 2021 ರ ವರ್ಷದಲ್ಲಿ $1.1 ಟ್ರಿಲಿಯನ್‌ಗೆ 30 ಪ್ರತಿಶತದಷ್ಟು ಬೆಳೆದಿದೆ, ಅದೇ ಅವಧಿಯಲ್ಲಿ ಸಾರ್ವಜನಿಕ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣದ ಹೆಚ್ಚಳ ಈ ಹಿಂದೆ ಶೇ 49 ದಷ್ಟು ಬೆಳೆದಿತ್ತು

English summary

Top 100 global firms' market cap reaches $31.7 tn, Apple leads

The market capitalisation of the top 100 companies globally increased from $10.3 trillion to $31.7 trillion, an increase of 48 per cent, from March 2020 till March 2021, a new report said on Sunday.
Story first published: Sunday, June 12, 2022, 16:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X