For Quick Alerts
ALLOW NOTIFICATIONS  
For Daily Alerts

ಎಜುಕೇ‍ಷನ್ ಷೇರುಗಳಲ್ಲಿ ಹೂಡಿಕೆ ಮಾಡುವಿರಾ? ಇಲ್ಲಿವೆ ನೋಡಿ ಟಾಪ್ ಕಂಪನಿಗಳು

|

ವಿದ್ಯಾರ್ಥಿಗಳು ಭೌತಿಕವಾಗಿ ಶಾಲೆಗೆ ಹೋಗಿ ಶಿಕ್ಷಕರಿಂದ ಮುಖತಃ ಶಿಕ್ಷಣ ಪಡೆಯುವ ವಿಧಾನಕ್ಕೆ ಬೇರಾವುದೂ ಸರಿಸಾಟಿಯಾಗಲಾರದು ಎಂಬ ವಿಷಯ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳ ಪಾಲಕರ ಗಮನಕ್ಕೆ ಬಂದಿದೆ. ಇನ್ನೇನು ಎಲ್ಲ ತರಗತಿಯ ಮಕ್ಕಳು ಶಾಲೆಗಳಿಗೆ ಭೌತಿಕವಾಗಿ ಹಾಜರಾಗುವ ಸಮಯ ಬರುತ್ತಿದ್ದು, ಶೈಕ್ಷಣಿಕ ವಲಯಕ್ಕೆ ಪೂರಕವಾದ ಸಾಧನಗಳನ್ನು ತಯಾರಿಸುವ ಕಂಪನಿಗಳು ಮತ್ತೆ ತಮ್ಮ ಉತ್ಪಾದನೆಗಳನ್ನು ಹೆಚ್ಚಿಸುತ್ತಿವೆ. ಆನ್‌ಲೈನ್ ಕ್ಲಾಸ್‌ಗಳ ಸಮಯ ಮುಗಿದು ಆಫ್‌ಲೈನ್ ತರಗತಿಗಳು ಆರಂಭವಾಗುವ ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಅದಕ್ಕೆ ಸಂಬಂಧಿಸಿದ ಕಂಪನಿಗಳ ಸ್ಟಾಕ್‌ಗಳನ್ನು ನಾವು ಮುಖ್ಯವಾಗಿ ಗಮನಿಸಬೇಕಿದೆ.

 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಕ್ಕೆ ಅನುಮೋದನೆ ನೀಡಿದ ನಂತರ ಹೊಸ ಶಿಕ್ಷಣ ನೀತಿ ದೇಶಾದ್ಯಂತ ಜಾರಿಯಾಗುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಹಂತದ ಹಾಗೂ ಕಾಲೇಜು ಮಟ್ಟದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚುತ್ತಿರುವ ಇಂಟರ್ನೆಟ್ ಬಳಕೆ ಸಹ ಶಿಕ್ಷಣ ರಂಗದಲ್ಲಿ ಹೊಸ ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ದೇಶದ ಯಾವುದೇ ಭಾಗದಿಂದ ಇನ್ನಾವುದೋ ಭಾಗದಲ್ಲಿರುವ ವಿದ್ಯಾರ್ಥಿಗೆ ನೈಜ ಸಮಯದಲ್ಲಿ ಪಾಠಗಳನ್ನು ಕಲಿಸುವುದು ಈಗ ಸಾಧ್ಯವಾಗಿದೆ. ಸಮಾಜದ ಎಲ್ಲರಿಗೂ ಶಿಕ್ಷಣವನ್ನು ತಲುಪಿಸುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತಿದೆ. ಈ ಸಂದರ್ಭದಲ್ಲಿ ದೇಶದಲ್ಲಿನ ಕೆಲ ಪ್ರಮುಖ ಶಿಕ್ಷಣ ಮತ್ತು ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆಗಳ ಬಗ್ಗೆ ತಿಳಿಯೋಣ.

 ಎನ್ಐಐಟಿ (NIIT)

ಎನ್ಐಐಟಿ (NIIT)

ದೇಶದ ಗುರುಗ್ರಾಮದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎನ್ಐಐಟಿ, ಪ್ರತಿಭೆ ಹಾಗೂ ಕೌಶಲ್ಯಗಳನ್ನು ಕಲಿಸುವ ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದೆ. 1981 ರಲ್ಲಿ ಆಗ ತಾನೇ ಬೆಳೆಯುತ್ತಿದ್ದ ಐಟಿ ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶದಿಂದ ಈ ಕಂಪನಿಯನ್ನು ಸ್ಥಾಪಿಸಲಾಯಿತು. ನಿಫ್ಟಿ ಸ್ಮಾಲ್ ಕ್ಯಾಪ್-100 ಇಂಡೆಕ್ಸ್ ನ ಶೇ 94.85 ಪ್ರತಿಫಲಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಮೂರು ವರ್ಷಗಳ ಅವಧಿಯಲ್ಲಿ ಶೇ 380.00 ಯಷ್ಟು ಪ್ರತಿಫಲ ನೀಡಿವೆ. 1981 ರಲ್ಲಿ ಆರಂಭವಾದ NIIT Limited ಸೇವಾ ವಲಯದ ಸ್ಮಾಲ್ ಕ್ಯಾಪ್ ಕಂಪನಿಯಾಗಿದ್ದು, 4,649.07 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.

ವಿಭಿನ್ನ ವಲಯಗಳಲ್ಲಿ ಹಲವಾರು ರೀತಿಯ ಸೇವೆಗಳನ್ನು ಕಂಪನಿಯು ನೀಡುತ್ತಿದೆ. ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಹಣಕಾಸು, ಡಿಜಿಟಲ್ ಮಾರ್ಕೆಟಿಂಗ್, ಡಾಟಾ ಸೈನ್ಸ್ ಮತ್ತು ಅನಾಲಿಟಿಕ್ಸ್, ವೃತ್ತಿಪರ ಜೀವನ ಕೌಶಲಗಳು, ವ್ಯವಹಾರ ಪ್ರಕ್ರಿಯೆಯಲ್ಲಿ ಶ್ರೇಷ್ಠತೆ ಮತ್ತು ಬಹು ವಲಯ ವೃತ್ತಿಪರ ಕೌಶಲಗಳು ಸೇರಿದಂತೆ ಇನ್ನೂ ಕೆಲ ಕ್ಷೇತ್ರಗಳಲ್ಲಿ ಕಂಪನಿಯು ತೊಡಗಿಸಿಕೊಂಡಿದೆ.

 

 ಆಪ್ಟೆಕ್ ಎಜ್ಯುಕೇಶನ್ (Aptech Education)
 

ಆಪ್ಟೆಕ್ ಎಜ್ಯುಕೇಶನ್ (Aptech Education)

1986 ರಲ್ಲಿ ಆರಂಭವಾದ ಆಪ್ಟೆಕ್ ಲಿಮಿಟೆಡ್ ಸದ್ಯ ಜಗತ್ತಿನಾದ್ಯಂತ 800 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಐಟಿ ಟ್ರೈನಿಂಗ್, ಮಾಧ್ಯಮ ಮತ್ತು ಮನರಂಜನೆ, ರಿಟೇಲ್ ಮತ್ತು ವಿಮಾನಯಾನ, ಸೌಂದರ್ಯ ಮತ್ತು ಆರೋಗ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಮತ್ತು ಪ್ರಿಸ್ಕೂಲ್ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಂಡಿದೆ. ಆಪ್ಟೆಕ್ ಲಿಮಿಟೆಡ್‌ನ ಎರಡು ಪ್ರಮುಖ ವಿಭಾಗಗಳಾದ- ಮಾನವ ತರಬೇತಿ ಮತ್ತು ಎಂಟರ್‌ಪ್ರೈಸ್ ಬ್ಯುಸಿನೆಸ್ ಗ್ರೂಪ್ ಇವು ವಿದ್ಯಾರ್ಥಿಗಳು, ವೃತ್ತಿಪರರು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ತರಬೇತಿ ನೀಡಿವೆ.

ನಿಫ್ಟಿ ಸ್ಮಾಲ್ ಕ್ಯಾಪ್-100 ಇಂಡೆಕ್ಸ್ ನ ಶೇ 94.85 ಪ್ರತಿಫಲಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಮೂರು ವರ್ಷಗಳ ಅವಧಿಯಲ್ಲಿ ಶೇ 93.58 ರಷ್ಟು ಪ್ರತಿಫಲ ನೀಡಿವೆ. 2000 ರಲ್ಲಿ ಸ್ಥಾಪನೆಯಾದ ಆಪ್ಟೆಕ್ ಲಿಮಿಟೆಡ್ ಸೇವಾ ವಲಯದ ಸ್ಮಾಲ್ ಕ್ಯಾಪ್ ಕಂಪನಿಯಾಗಿದ್ದು, 1,260.72 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.

 

 ಝೀ ಲರ್ನ್ (ZEE Learn)

ಝೀ ಲರ್ನ್ (ZEE Learn)

ತನ್ನ ಹಲವಾರು ಕಾರ್ಯವ್ಯಾಪ್ತಿಗಳೊಂದಿಗೆ ಝೀ ಲರ್ನ್ ಲಿಮಿಟೆಡ್ ಕಂಪನಿಯು ದೇಶಾದ್ಯಂತ ಶಿಕ್ಷಣ ಸೇವೆಯನ್ನೂ ನೀಡುತ್ತಿದೆ. ದೇಶದ ಹಲವಾರು ಭಾಗಗಳಲ್ಲಿ ಕಂಪನಿಯು ಶಾಲೆ ಮತ್ತು ವೃತ್ತಿಪರ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ. ಭಾರತದ ಎರಡೂ ಪ್ರಮುಖ ಸ್ಟಾಕ್ ಎಕ್ಸಚೇಂಜ್ಗಳಲ್ಲಿ ಕಂಪನಿಯ ಶೇರು ಲಿಸ್ಟ್ ಆಗಿವೆ. ನಿಫ್ಟಿ ಸ್ಮಾಲ್ ಕ್ಯಾಪ್-100 ನ ಶೇ 94.85 ಕ್ಕೆ ಹೋಲಿಸಿದರೆ ಕಂಪನಿಯ ಶೇರು ಮೂರು ವರ್ಷಗಳಲ್ಲಿ ಶೇ (ಮೈನಸ್) -63.91 ದಷ್ಟು ಪ್ರತಿಫಲ ನೀಡಿವೆ. 2010 ರಲ್ಲಿ ಆರಂಭವಾದ ಇದು ಶಿಕ್ಷಣ ಹಾಗೂ ಕಲಿಕಾ ವಲಯದ ಸ್ಮಾಲ್ ಕ್ಯಾಪ್ ಕಂಪನಿಯಾಗಿದ್ದು, 454.90 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.

ಕಂಪನಿಯು ಎರಡು ಮುಖ್ಯ ಆದಾಯ ಮೂಲಗಳನ್ನು ಹೊಂದಿದೆ. ಮೊದಲನೆಯದು ಮೂಲಭೂತ ಶಿಕ್ಷಣ. ಇದು ಪ್ರಿ ಸ್ಕೂಲ್, ಎಲೆಮೆಂಟರಿ ಮತ್ತು ಸೆಕೆಂಡರಿ ಸ್ಕೂಲ್ ಹಾಗೂ ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊಂದಿದೆ. ಕಿಡ್ ಝೀ ಇದು ಪ್ರಿ ಸ್ಕೂಲ್ ಮಟ್ಟದ ಅತ್ಯಂತ ಹೆಸರುವಾಸಿಯಾದ ಬ್ರಾಂಡ್ ಆಗಿದ್ದು, 2000ಕ್ಕೂ ಅಧಿಕ ಸ್ಥಳಗಳಲ್ಲಿ ಕೇಂದ್ರಗಳನ್ನು ಹೊಂದಿದೆ.

 

 ಎಂಪಿಎಸ್ (MPS)

ಎಂಪಿಎಸ್ (MPS)

ಎಂಪಿಎಸ್ ಇದು ಕಂಟೆಂಟ್ ಸಲ್ಯೂಶನ್ಸ್ ಮತ್ತು ಪ್ಲಾಟ್‌ಫಾರ್ಮ್ ಸಲ್ಯೂಶನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಇದು ಇ-ಲರ್ನಿಂಗ್ ಸೌಲಭ್ಯಗಳು, ಡಾಟಾ ಪ್ರೊಸೆಸಿಂಗ್ ಹಾಸ್ಟಿಂಗ್, ಕಂಪ್ಯೂಟರ್ ಪ್ರೊಗ್ರಾಮಿಂಗ್ ಮತ್ತು ಇತರೆ ಸಂಬಂಧಿತ ಸೇವೆಗಳನ್ನು ಸಹ ಕಂಪನಿ ನೀಡುತ್ತದೆ.

2005 ರಿಂದ ಕಂಪನಿಯು ಯಾವುದೇ ಸಾಲ ಹೊಂದಿಲ್ಲ. ಕಂಪನಿಯ ಶೇ 22.98 ರಷ್ಟು ವಾರ್ಷಿಕ ಮಾರಾಟ ಬೆಳವಣಿಗೆ ದರವು ಅದರ ಮೂರು ವರ್ಷಗಳ ಸಂಯೋಜಿತ ಬೆಳವಣಿಗೆ ದರ ಶೇ 14.09 ನ್ನು (CAGR) ಮೀರಿಸಿ ಬೆಳೆದಿದೆ. ನಿಫ್ಟಿ ಸ್ಮಾಲ್ ಕ್ಯಾಪ್-100 ಇಂಡೆಕ್ಸ್ ನ ಶೇ 94.85 ಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಮೂರು ವರ್ಷಗಳಲ್ಲಿ ಶೇ 39.21 ರಷ್ಟು ಪ್ರತಿಫಲ ನೀಡಿವೆ.

 

 ಕರಿಯರ್ ಪಾಯಿಂಟ್ (Career Point)

ಕರಿಯರ್ ಪಾಯಿಂಟ್ (Career Point)

ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಆದಾಯವು ಶೇ 176.53 ರಷ್ಟು ಏರಿಕೆಯಾಗಿದ್ದು, ಇದು ಕಳೆದ ಮೂರು ವರ್ಷಗಳಲ್ಲೇ ಅಧಿಕವಾಗಿದೆ. ನಿಫ್ಟಿ ಸ್ಮಾಲ್ ಕ್ಯಾಪ್-100 ಇಂಡೆಕ್ಸ್ ನ ಶೇ 94.85 ಕ್ಕೆ ಹೋಲಿಸಿದರೆ ಕಂಪನಿಯ ಶೇರುಗಳು ಮೂರು ವರ್ಷಗಳಲ್ಲಿ ಶೇ 47.91 ರಷ್ಟು ಪ್ರತಿಫಲ ನೀಡಿವೆ. ಮಾರಾಟವು ಶೇ 47.91 ರಷ್ಟು ಕುಸಿದಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕಂಪನಿಯ ಆದಾಯ ಕುಸಿದಿದೆ.

2000 ನೇ ಇಸ್ವಿಯಲ್ಲಿ ಆರಂಭವಾದ ಕರಿಯರ್ ಪಾಯಿಂಟ್ ಲಿಮಿಟೆಡ್ ಕಲಿಕೆ ಹಾಗೂ ಶಿಕ್ಷಣ ವಲಯದ ಸ್ಮಾಲ್ ಕ್ಯಾಪ್ ಕಂಪನಿಯಾಗಿದ್ದು, 259.80 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ.

(ಡಿಸಕ್ಲೇಮರ್: ಸ್ಟಾಕ್ಸ್ ಗಳಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳನ್ನು ಒಳಗೊಂಡಿರುತ್ತದೆ ಮತ್ತು ಮಾರುಕಟ್ಟೆಗಳು ವಿಪರೀತ ಏರಿಕೆಯ ಮಟ್ಟದಲ್ಲಿದ್ದಾಗ ಹೂಡಿಕೆದಾರನು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಅಂಕಣವು ಕೇವಲ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ. ಈ ಅಂಕಣದ ಲೇಖಕರು ಅಥವಾ ಗ್ರೇನಿಯಂ ಇನ್ಫರ್ಮೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಹೂಡಿಕೆದಾರರ ಯಾವುದೇ ನಿರ್ಧಾರಗಳಿಂದ ಸಂಭವಿಸಬಹುದಾದ ನಷ್ಟಗಳಿಗೆ ಬಾಧ್ಯರಾಗಿರುವುದಿಲ್ಲ.)

 

English summary

Top Education Stocks In India To Consider 2021

Top Education Stocks In India To Consider in 2021, Here is a detailed list in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X