For Quick Alerts
ALLOW NOTIFICATIONS  
For Daily Alerts

"ಪಾರದರ್ಶಕ ತೆರಿಗೆ- ಪ್ರಾಮಾಣಿಕ ತೆರಿಗೆದಾರರಿಗೆ ಗೌರವ" ಪ್ಲಾಟ್ ಫಾರ್ಮ್ ಗೆ ಮೋದಿ ಚಾಲನೆ

|

"ಪಾರದರ್ಶಕ ತೆರಿಗೆ- ಪ್ರಾಮಾಣಿಕ ತೆರಿಗೆದಾರರಿಗೆ ಗೌರವ" ಪ್ಲಾಟ್ ಫಾರ್ಮ್ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಈ ಹೊಸ ಪ್ಲಾಟ್ ಫಾರ್ಮ್ ನಲ್ಲಿನ ಮುಖ್ಯ ಫೀಚರ್ ಅಂದರೆ, ಮುಖರಹಿತವಾದ (ಫೇಸ್ ಲೆಸ್) ಅಸೆಸ್ ಮೆಂಟ್, ಮುಖರಹಿತ ಅರ್ಜಿ. ಇನ್ನು ತೆರಿಗೆ ಪದ್ಧತಿಯನ್ನು ಜನಕೇಂದ್ರಿತ ಹಾಗೂ ಜನಸ್ನೇಹಿಯಾಗಿ ಮಾಡಬೇಕು ಎಂಬುದು ಉದ್ದೇಶ ಎಂದರು.

ನೇರ ತೆರಿಗೆ ಸುಧಾರಣೆಯ ಮುಂದಿನ ಹಂತವನ್ನು ಈ ಹೊಸ ಪ್ಲಾಟ್ ಫಾರ್ಮ್ ತೆರೆದಿಡುತ್ತದೆ. ಕೊರೊನಾದಿಂದ ಬಾಧಿತವಾಗಿರುವ ದೇಶದ ಆರ್ಥಿಕತೆಯನ್ನು ಮತ್ತೆ ಕಟ್ಟಬೇಕಿದೆ. ಆದ್ದರಿಂದ ನಿಯಮಾವಳಿಗಳನ್ನು ಸರಳಗೊಳಿಸಿ, ಪ್ರಾಮಾಣಿಕ ತೆರಿಗೆದಾರರಿಗೆ ಪ್ರತಿಫಲ ದೊರೆಯುವಂತೆ ಮಾಡುವುದರ ಕಡೆಗೆ ನಮ್ಮ ಗಮನ ಇದೆ ಎಂದು ಮೋದಿ ಹೇಳಿದರು.

ಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವ ಪ್ರಯತ್ನಕ್ಕೆ 7 ವರ್ಷ ತನಕ ಜೈಲುಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವ ಪ್ರಯತ್ನಕ್ಕೆ 7 ವರ್ಷ ತನಕ ಜೈಲು

ಈ ಹಿಂದೆ ನಮ್ಮ ಗಮನ ಇದ್ದದ್ದು ಎಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲವೋ ಅಲ್ಲಿ ಬ್ಯಾಂಕಿಂಗ್ ತರುವುದು, ಅಭದ್ರತೆ ಇರುವೆಡೆ ಭದ್ರತೆ ತರುವುದು, ಹಣಕಾಸು ಅಗತ್ಯ ಇರುವವರಿಗೆ ಅದನ್ನು ನೀಡುವುದಾಗಿತ್ತು. ಈ ದಿನ ನಾವು ಪ್ರಾಮಾಣಿಕರನ್ನು ಗೌರವಿಸುವುದಕ್ಕೆ ಆರಂಭಿಸಿದ್ದೇವೆ ಎಂದು ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ತಿಳಿಸಿದರು.

ಎಲ್ಲಿ ಸಂಕೀರ್ಣತೆ ಇರುತ್ತದೋ ಅಲ್ಲಿನ ನಿಯಮಾವಳಿಗಳಲ್ಲಿ ಸಮಸ್ಯೆ ಇರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ತೆರಿಗೆದಾರರ ಸಬಲೀಕರಣ, ಪಾರದರ್ಶಕ ವ್ಯವಸ್ಥೆ ಒದಗಿಸುವುದು ಹಾಗೂ ಪ್ರಾಮಾಣಿಕರನ್ನು ಗೌರವಿಸುವುದು ಸರ್ಕಾರದ ಉದ್ದೇಶ. ಸಿಬಿಡಿಟಿಯಿಂದ ಚೌಕಟ್ಟು ರೂಪಿಸಲಾಗಿದೆ. ಆ ಮೂಲಕ ಪಾರದರ್ಶಕವಾದ ವ್ಯವಸ್ಥೆ, ದಕ್ಷ ಹಾಗೂ ಉತ್ತರದಾಯಿತ್ವ ಇರುವಂತೆ ನೋಡಿಕೊಳ್ಳಲಾಗುತ್ತದೆ. ಹೊಸ ಪ್ಲಾಟ್ ಫಾರ್ಮ್ ನಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಹಾಗೂ ಡೇಟಾ ಅನಲಿಟಿಕ್ಸ್ ಬಳಸಲಾಗುತ್ತದೆ ಎಂದರು.

ಫೇಸ್ ಲೆಸ್ ಅಸೆಸ್ ಮೆಂಟ್ ಹಾಗೂ ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಫೇಸ್ ಲೆಸ್ ಅಸೆಸ್ ಮೆಂಟ್ ಭಾರತದಾದ್ಯಂತ ಸೆಪ್ಟೆಂಬರ್ 25ರಿಂದ ಲಭ್ಯವಾಗಲಿದೆ.

English summary

PM Narendra Modi Launches 'Transparent Taxation' Platform: All You Need to Know in Kannada

PM Narendra Modi on Thursday launched 'Transparent Taxation – Honoring the Honest' platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X