For Quick Alerts
ALLOW NOTIFICATIONS  
For Daily Alerts

ಕೊರೊನಾ ವಿರುದ್ಧ ಹೋರಾಟಕ್ಕೆ ಟ್ವಿಟ್ಟರ್ ಸಿಇಒ ಡೋರ್ಸೆ 75 ಕೋಟಿ ದೇಣಿಗೆ

|

ಟ್ವಿಟ್ಟರ್ ಹಾಗೂ ಸ್ಕ್ವೇರ್ ಸಿಇಒ ಜಾಕ್ ಡೋರ್ಸೆ "ಪ್ರಾಜೆಕ್ಟ್ 100"ಗೆ 1 ಕೋಟಿ ಅಮೆರಿಕನ್ ಡಾಲರ್ ದೇಣಿಗೆ ನೀಡಿದ್ದಾರೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 75 ಕೋಟಿ ರುಪಾಯಿಗಿಂತ ಸ್ವಲ್ಪ ಜಾಸ್ತಿ ಮೊತ್ತ ಇದು. "ಪ್ರಾಜೆಕ್ಟ್ 100" ಅಡಿಯಲ್ಲಿ ಕೊರೊನಾದಿಂದ ಬಾಧಿತವಾದ 10 ಸಾವಿರ ಕುಟುಂಬಗಳಿಗೆ ತಲಾ 1 ಸಾವಿರ ಯುಎಸ್ ಡಾಲರ್ ನೀಡಲಾಗುತ್ತದೆ.

 

"ಪ್ರಾಜೆಕ್ಟ್ 100" ಎಂಬುದು ನಾನ್ ಪ್ರಾಫಿಟ್ ಸಂಸ್ಥೆಗಳಾದ ಗೀವ್ ಡೈರೆಕ್ಟ್ಲಿ, ಪ್ರೊಪೆಲ್ ಮತ್ತು ಸ್ಟ್ಯಾಂಡ್ ಫಾರ್ ಚಿಲ್ಡ್ರನ್ ಇವುಗಳ ಜಂಟಿ ಪ್ರಯತ್ನ. ಕಳೆದ ಏಪ್ರಿಲ್ ನಿಂದ ಈಚೆಗೆ ಇವುಗಳು 8.4 ಕೋಟಿ ಅಮೆರಿಕನ್ ಡಾಲರ್ ಹಣ ಸಂಗ್ರಹ ಮಾಡಿವೆ. ಅಂದಹಾಗೆ, $ 100 ಮಿಲಿಯನ್ ಸಂಗ್ರಹಿಸಿ, ಅದನ್ನು ಒಂದು ಲಕ್ಷ ಅಮೆರಿಕನ್ ಕುಟುಂಬಗಳಿಗೆ ಹಂಚುವುದು ಈ ಸಂಸ್ಥೆಗಳ ಗುರಿ.

 

"ಪ್ರಾಜೆಕ್ಟ್ 100"ಗೆ ಆಲ್ಫಾಬೆಟ್- ಗೂಗಲ್ ಸಿಇಒ ಸುಂದರ್ ಪಿಚೈ, ಶತ ಕೋಟ್ಯಧಿಪತಿ ಸ್ಟೀವ್ ಬಲ್ಮರ್, ಬಿಲ್ ಗೇಟ್ಸ್, ಸರ್ಗೆ ಬ್ರಿನ್, ಮೆಕ್ ಕೆಂಜಿ ಭಾಗವಾಗಿದ್ದಾರೆ. ಯು.ಎಸ್. ಜೈಲುಗಳಲ್ಲಿ ಇರುವವರಿಗೆ ನೆರವಾಗಲು ಈ ತಿಂಗಳಲ್ಲಿ ಡೋರ್ಸೆ 10 ಮಿಲಿಯನ್ ಅಂದರೆ ಒಂದು ಕೋಟಿ ಅಮೆರಿಕನ್ ಡಾಲರ್ ನೀಡಿದ್ದಾರೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಟ್ವಿಟ್ಟರ್ CEO ಡೋರ್ಸೆ 75 ಕೋಟಿ ದೇಣಿಗೆ

480 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೊಂದಿರುವ ಡೋರ್ಸೆ, ಈ ತನಕ 8.50 ಕೋಟಿ ಮೌಲ್ಯದ ಸ್ಕ್ವೇರ್ ಷೇರುಗಳನ್ನು ಏಪ್ರಿಲ್ ನಿಂದ ಈಚೆಗೆ ಐವತ್ತಕ್ಕೂ ಹೆಚ್ಚು ನಾನಾ ಪ್ರಾಫಿಟ್ ಸಂಸ್ಥೆಗಳಿಗೆ ನೀಡಿದ್ದಾರೆ.

English summary

Twitter CEO Jack Dorsey Donated 10 Million USD To Fight Against Corona

Twitter and Square CEO Jack Dorsey donated 1 crore USD to fight against Corona.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X