For Quick Alerts
ALLOW NOTIFICATIONS  
For Daily Alerts

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 'ಗೋಲ್ಡನ್' ವೀಸಾ ಹತ್ತು ವರ್ಷಕ್ಕೆ

|

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಅದರ 'ಗೋಲ್ಡನ್' ವೀಸಾ ನಿಯಮವನ್ನು ವಿಸ್ತರಣೆ ಮಾಡಲಾಗುವುದು- ಗಲ್ಫ್ ದೇಶದಲ್ಲಿ ಹತ್ತು ವರ್ಷಗಳ ಕಾಲ ನಿವಾಸಿಗಳಾಗಬಹುದು. ಕೆಲವು ವೃತ್ತಿಪರರಿಗೆ, ವಿಶಿಷ್ಟ ಪದವಿ ಹೊಂದಿದವರಿಗೆ ಮತ್ತು ಇತರರಿಗೆ ಈ ಅನುಕೂಲ ದೊರೆಯಲಿದೆ ಎಂದು ಯುಎಇ ಉಪಾಧ್ಯಕ್ಷ ಭಾನುವಾರ ಹೇಳಿದ್ದಾರೆ.

ವಿದೇಶಿಗರು ಯುಎಇಯಲ್ಲಿ ಸಾಮಾನ್ಯವಾಗಿ ನವೀಕರಿಸುವಂಥ ವೀಸಾವನ್ನು ಕೆಲ ವರ್ಷಗಳ ಅವಧಿಗೆ ಹೊಂದಿರುತ್ತಾರೆ. ಅದು ಉದ್ಯೋಗಕ್ಕೆ ಹೊಂದಿಕೊಂಡಂತೆ ಇರುತ್ತದೆ. ಕಳೆದ ಕೆಲವು ವರ್ಷಗಳಿದ ಸರ್ಕಾರವು ವೀಸಾ ನಿಯಮವನ್ನು ಸಡಿಲಗೊಳಿಸಿದೆ. ಕೆಲವು ಬಗೆಯ ಹೂಡಿಕೆದಾರರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ದೀರ್ಘಾವಧಿಯ ವಾಸಕ್ಕೆ ಅವಕಾಶ ನೀಡುತ್ತಿದೆ.

ವಿದೇಶಿಗರಿಗೆ ಪ್ರವೇಶ ನಿರ್ಬಂಧ ತೆರವುಗೊಳಿಸಿದ ಯುಎಇವಿದೇಶಿಗರಿಗೆ ಪ್ರವೇಶ ನಿರ್ಬಂಧ ತೆರವುಗೊಳಿಸಿದ ಯುಎಇ

ಡಾಕ್ಟರೇಟ್ ಪದವೀಧರರು, ವೈದ್ಯಕೀಯ ಪದವೀಧರರು, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್, ಎಲೆಕ್ಟ್ರಿಕಲ್ ಮತ್ತು ಬಯೋಟೆಕ್ನಾಲಜಿ ಎಂಜಿನಿಯರ್ ಗಳು ಅರ್ಹರು ಎಂದು ಯುಎಇ ಉಪಾಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 'ಗೋಲ್ಡನ್' ವೀಸಾ ಹತ್ತು ವರ್ಷಕ್ಕೆ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಿಗ್ ಡೇಟಾ ಮತ್ತು ಇತರ ವಿಶೇಷ ಪದವಿಗಳನ್ನು ಪಡೆದವರು ಹಾಗೂ ಯುಎಇಯಲ್ಲಿ ಪ್ರೌಢ ಶಾಲೆಗಳಲ್ಲಿ ಓದುತ್ತಾ ದೇಶಕ್ಕೇ ಉನ್ನತ ಶ್ರೇಯಾಂಕ ಪಡೆದವರು, ಕೆಲ ವಿ.ವಿ. ವಿದ್ಯಾರ್ಥಿಗಳಾಗಿದ್ದು ಜಿಪಿಎ 3.8 ಅಥವಾ ಅದಕ್ಕಿಂತ ಹೆಚ್ಚು ಇರುವವರು ಸಹ ಅರ್ಹರು.

2018ರಲ್ಲಿ ಮೊದಲ ಬಾರಿಗೆ ದೀರ್ಘಾವಧಿ ವೀಸಾವನ್ನು ಘೋಷಣೆ ಮಾಡಿದ ನಂತರ, ಯುಎಇಯಿಂದ 2019ರಲ್ಲಿ 5 ಹಾಗೂ 10 ವರ್ಷದ ನವೀಕರಿಸುವಂಥ ವೀಸಾ ವಿತರಣೆ ಆರಂಭಿಸಲಾಯಿತು. ಕೆಲವು ವಿದೇಶೀ ಹೂಡಿಕೆದಾರರು, ಉದ್ಯಮಿಗಳು, ಮುಖ್ಯಾಧಿಕಾರಿಗಳು, ವಿಜ್ಞಾನಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಆರಂಭಿಸಿತು.

Read more about: uae visa ಯುಎಇ ವೀಸಾ
English summary

UAE Extends Golden Visa For 10 Year Residency To Some

UAE on Sunday (November 15, 2020) announced that, golden visa policy extend to 10 years for some. Here is the details.
Story first published: Sunday, November 15, 2020, 20:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X