For Quick Alerts
ALLOW NOTIFICATIONS  
For Daily Alerts

6,940 ಕೋಟಿ ರುಪಾಯಿಗೆ ಷೇರು ಮಾರಿದ ಉದಯ್ ಕೊಟಕ್

|

ಶತಕೋಟ್ಯಧಿಪತಿ ಉದಯ್ ಕೊಟಕ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿನ 2.83 ಪರ್ಸೆಂಟ್ ಷೇರಿನ ಪಾಲನ್ನು ಮಂಗಳವಾರ (ಜೂನ್ 2, 2020) ಮಾರಾಟ ಮಾಡಿದ್ದಾರೆ. ಆ ಮೂಲಕ ಅವರ ಪಾಲಿನ ಷೇರು 28.93 ಪರ್ಸೆಂಟ್ ನಿಂದ 26.1 ಪರ್ಸೆಂಟ್ ಗೆ ಇಳಿಕೆ ಆಗಿದೆ. ಆ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷ ಒಪ್ಪಿಕೊಂಡ ಪರ್ಸಂಟೇಜ್ ನ ಹತ್ತಿರಕ್ಕೆ ತಲುಪಿದಂತಾಗಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ನ 5.5 ಕೋಟಿ ಷೇರನ್ನು ತಲಾ 1240 ರುಪಾಯಿಯಂತೆ ಮಾರಾಟ ಮಾಡಿದ್ದು, 6,940 ಕೋಟಿ ರುಪಾಯಿ ಸಂಗ್ರಹಿಸಿದ್ದಾರೆ ಉದಯ್ ಕೊಟಕ್. ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಪ್ಲೇಸ್ ಮೆಂಟ್ (QIP) ಮೂಲಕ ಷೇರಿಗೆ ತಲಾ 1,145 ರುಪಾಯಿಯಂತೆ ಮಾರಾಟ ಮಾಡಿ, ಒಂದು ದಿನದ ಹಿಂದಷ್ಟೇ ಕೊಟಕ್ ಮಹೀಂದ್ರಾ ಬ್ಯಾಂಕ್ 7442 ಕೋಟಿ ರುಪಾಯಿ ಸಂಗ್ರಹಿಸಿದೆ.

ಕೋಟಿಗಟ್ಟಲೆ ವೇತನ ಪಡೆಯುತ್ತಿದ್ದ ಈ ಸಿಇಒ ಇನ್ನೊಂದು ವರ್ಷದ ಸಂಬಳ ಕೇವಲ 1 ರು.ಕೋಟಿಗಟ್ಟಲೆ ವೇತನ ಪಡೆಯುತ್ತಿದ್ದ ಈ ಸಿಇಒ ಇನ್ನೊಂದು ವರ್ಷದ ಸಂಬಳ ಕೇವಲ 1 ರು.

ಇನ್ವೆಸ್ಕೊ ಒಪ್ಪೆನ್ ಹೈಮರ್ 52 ಲಕ್ಷ ಷೇರು ಖರೀದಿಸಿದ್ದರೆ, ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್ ಮೆಂಟ್ ಬೋರ್ಡ್ 46 ಲಕ್ಷ ಷೇರು ಖರೀದಿಸಿದ್ದರೆ, ಐಸಿಐಸಿಐ ಮ್ಯೂಚುವಲ್ ಫಂಡ್ 41 ಲಕ್ಷ ಷೇರು ಖರೀದಿ ಮಾಡಿದೆ.

6,940 ಕೋಟಿ ರುಪಾಯಿಗೆ ಷೇರು ಮಾರಿದ ಉದಯ್ ಕೊಟಕ್

ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಡಿಸೆಂಬರ್ 31, 2018ರಲ್ಲಿ ಪ್ರವರ್ತಕರ ಷೇರಿನ ಪಾಲು ಒಟ್ಟು ಪೇಯ್ದ್ ಅಪ್ ಬಂಡವಾಳದ 20 ಪರ್ಸೆಂಟ್ ಗೆ ಮಿತಿಗೊಳಿಸಲು ತಿಳಿಸಲಾಗಿತ್ತು. ಆ ನಂತರ ಮಾರ್ಚ್ 31, 2020ಕ್ಕೆ 15 ಪರ್ಸೆಂಟ್ ಗೆ ಮಿತಿಗೊಳಿಸುವಂತೆ ಸೂಚಿಸಲಾಗಿತ್ತು.

ಆದರೆ, ಸಾಲಗಾರರು ಹೊಸ ಪ್ರಸ್ತಾವ ಮುಂದಿಟ್ಟರು. ಪ್ರವರ್ತಕರ ಪ್ರಮಾಣ 19.70 ಪರ್ಸೆಂಟ್ ಇರಿಸಿಕೊಳ್ಳಲು ಅನುಮತಿ ಕೇಳಿತ್ತು. ಆದರೆ ರಿಸರ್ವ್ ಬ್ಯಾಂಕ್ ಒಪ್ಪಿರಲಿಲ್ಲ. ಈ ವಿಚಾರವಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿತ್ತು.

ಆರ್ ಬಿಐನ ಬ್ಯಾಂಕ್ ಲೈಸೆನ್ಸ್ ನಿಯಮದ ಪ್ರಕಾರ, ಮೂರು ವರ್ಷದಲ್ಲಿ ಪ್ರವರ್ತಕರ ಷೇರಿನ ಪ್ರಮಾಣ 40%, ಹತ್ತು ವರ್ಷಗಳಲ್ಲಿ 20%, ಹದಿನೈದು ವರ್ಷಗಳಲ್ಲಿ 15%ಗೆ ಇಳಿಸಬೇಕು. ಕೊಟಕ್ ಬ್ಯಾಂಕ್ ಕಳೆದ ಫೆಬ್ರವರಿಯಲ್ಲಿ ಕೇಸ್ ಅನ್ನು ವಾಪಸ್ ಪಡೆದಿತ್ತು.

English summary

Uday Kotak Raised 6940 Crore Worth Of Kotak Mahindra Bank Shares

Billionaire banker Uday Kotak raised 6940 crore worth of Kotak Mahindra Bank shares on June 2, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X