For Quick Alerts
ALLOW NOTIFICATIONS  
For Daily Alerts

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒಗೆ 166 ಪಟ್ಟು ಹೆಚ್ಚು ಬೇಡಿಕೆ

|

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಕೊನೆ ದಿನವಾದ ಬುಧವಾರ 166 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ 12,39,58,333 ಷೇರುಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದಕ್ಕೆ 72,40,76,400 ಷೇರುಗಳಿಗೆ ಬೇಡಿಕೆ ಬಂದಿದೆ. ಬುಧವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ 97.86 ಪಟ್ಟು ಬೇಡಿಕೆ ಬಂದಿದೆ.

ಮಂಗಳವಾರದಂದು ಐಪಿಒ 5 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ಉಜ್ಜೀವನ್ ಫೈನಾನ್ಷಿಯಲ್ ಸರ್ವೀಸಸ್ ನ ಅಂಗ ಸಂಸ್ಥೆ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಅದು ಈಗಾಗಲೇ 7.14 ಕೋಟಿ ಷೇರುಗಳನ್ನು ಅಂದರೆ 250 ಕೋಟಿ ರುಪಾಯಿ ಮೌಲ್ಯದಷ್ಟನ್ನು ಪ್ರೀ- ಐಪಿಒ ಪ್ಲೇಸ್ ಮೆಂಟ್ ನಲ್ಲಿ ಮಾರಲಾಗಿದೆ.

ಈಗ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ 750 ಕೋಟಿ ರುಪಾಯಿ ಸಂಗ್ರಹಕ್ಕೆ ಮುಂದಾಗಿದೆ. 10 ರುಪಾಯಿ ಮುಖಬೆಲೆಯ ಷೇರನ್ನು 36-37 ದರದ ಬ್ಯಾಂಡ್ ನಲ್ಲಿ ವಿತರಿಸಲಾಗುತ್ತಿದೆ. ಕನಿಷ್ಠ 400 ಷೇರುಗಳಿಗೆ ಅರ್ಜಿ ಹಾಕಬೇಕು. ಅದಕ್ಕಿಂತ ಹೆಚ್ಚು ಬೇಕಿದ್ದಲ್ಲಿ ನಾನೂರರ ಗುಣಕದಲ್ಲಿ ಬೇಡಿಕೆ ಸಲ್ಲಿಸಬೇಕು.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ IPOಗೆ 166 ಪಟ್ಟು ಬೇಡಿಕೆ

ಉಜ್ಜೀವನ್ ಸ್ಮಾಲ್ ಬ್ಯಾಂಕ್ ನ ಐಪಿಒ ಡಿಸೆಂಬರ್ 2ರಿಂದ 4ರ ಮಧ್ಯೆ ನಿಗದಿ ಆಗಿದೆ. ಈಗಿನ ಐಪಿಒ ನಂತರ ಪ್ರವರ್ತಕರ ಷೇರಿನ ಪ್ರಮಾಣ ಶೇಕಡಾ 85ಕ್ಕೆ ಇಳಿಯಲಿದೆ. ಒಟ್ಟು ಇಪ್ಪತ್ನಾಲ್ಕು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ 552 ಬ್ಯಾಂಕಿಂಗ್ ಔಟ್ ಲೆಟ್ ಹಾಗೂ 441 ಎಟಿಎಂ ಮಸೀನ್ ಗಳನ್ನು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೊಂದಿದೆ.

English summary

Ujjivan Small Finance Bank IPO Subscribed 98 Times

Ujjivan Small Finance Bank IPO subscribed 98 times on last day, December 4th 3 PM.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X