For Quick Alerts
ALLOW NOTIFICATIONS  
For Daily Alerts

6 ವಾರದಲ್ಲಿ 715 ಕೋಟಿ ರು. ಪಾವತಿಸಲು ಅನಿಲ್ ಅಂಬಾನಿಗೆ ಇಂಗ್ಲೆಂಡ್ ಕೋರ್ಟ್ ಆದೇಶ

|

ಚೀನಿ ಮೂಲದ ಬ್ಯಾಂಕುಗಳಿಗೆ ಸಾಲ ಮರುಪಾವತಿಸಲು ವಿಫಲಾಗಿರುವ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಆರು ವಾರದೊಳಗೆ 100 ಮಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ 715 ಕೋಟಿ, 16 ಲಕ್ಷ ) ಅನ್ನು ಪಾವತಿಸಬೇಕು ಎಂದು ಇಂಗ್ಲೆಂಡ್ ನ್ಯಾಯಾಲಯವು ಷರತ್ತುಬದ್ಧ ಆದೇಶ ನೀಡಿದೆ.

ಪ್ರಕರಣದ ಕುರಿತು ಪೂರ್ಣ ವಿಚಾರಣೆಯು ನ್ಯಾಯಾಲಯದಲ್ಲಿ ಬಾಕಿ ಇದ್ದು, ನ್ಯಾಯಾಧೀಶ ಡೇವಿಡ್ ವಕ್ಸ್‌ಮನ್ ಆರು ವಾರದೊಳಿಗೆ 100 ಮಿಲಿಯನ್ ಡಾಲರ್ ಪಾವತಿಸಲು ನಿರ್ದೇಶನ ನೀಡಿದ್ದಾರೆ. ಇದಕ್ಕೂ ಮೊದಲು ವಿಚಾರಣೆ ವೇಳೆ 'ನನ್ನ ಹೂಡಿಕೆಗಳ ಮೌಲ್ಯವು ಕುಸಿದಿದೆ "ಎಂದು ಅನಿಲ್ ಅಂಬಾನಿ ಲಂಡನ್ ಮೊಕದ್ದಮೆಯಲ್ಲಿ ಬ್ಯಾಂಕುಗಳು ಸಲ್ಲಿಸಿದ ನ್ಯಾಯಾಲಯದ ವರದಿಯಲ್ಲಿ ತಿಳಿಸಿದ್ದಾರೆ.

6 ವಾರದಲ್ಲಿ 715 ಕೋಟಿ ರು. ಪಾವತಿಸಲು ಅನಿಲ್ ಅಂಬಾನಿಗೆ ಕೋರ್ಟ್ ಆದೇಶ

"ನನ್ನ ಒಟ್ಟಾರೆ ತೀರ್ಮಾನದಲ್ಲಿ, ಶ್ರೀ ಅಂಬಾನಿ ಅವರು ಯಾವುದೇ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ನನಗೆ ತೃಪ್ತಿ ನೀಡಿಲ್ಲ" ಎಂದು ನ್ಯಾಯಾಧೀಶ ವಕ್ಸ್ಮನ್ ಅವರು ಅಂಬಾನಿಯ ರಕ್ಷಣೆಯ ಭಾಗವಾಗಿ "ಬುದ್ಧಿವಂತಿಕೆಯ ಕೊರತೆ" ಮತ್ತು "ಪಾರದರ್ಶಕತೆ" ಯ ಬಗ್ಗೆ ನಿರ್ದಿಷ್ಟ ಟೀಕೆಗಳನ್ನು ವ್ಯಕ್ತಪಡಿಸಿದರು. ಈ ವಿಚಾರವಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಿಲಯನ್ಸ್ ಗ್ರೂಪ್ ಯೋಜಿಸಿದೆ.

ಏನಿದು ಅನಿಲ್ ಅಂಬಾನಿ ಪ್ರಕರಣ

ರಿಲಯನ್ಸ್ ಕಮ್ಯುನಿಕೇಷನ್ಸ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ವಿರುದ್ಧ ಚೀನಾದ 3 ಬ್ಯಾಂಕುಗಳು ಮೊಕದ್ದಮೆ ಹೂಡಿದ್ದವು. 680 ಮಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ 4,863 ಕೋಟಿ, 08 ಲಕ್ಷದ 80 ಸಾವಿರ) ಸಾಲವನ್ನು ಮರುಪಾವತಿ ಮಾಡಲು ವಿಫಲವಾಗಿದ್ದರಿಂದ ಚೀನಾದ ಬ್ಯಾಂಕುಗಳು ಲಂಡನ್‌ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿವೆ.

ಸಾಲ ಮರುಪಾವತಿಸಲು ವಿಫಲ-ಅನಿಲ್ ಅಂಬಾನಿ ಮೇಲೆ ಕೇಸ್ಸಾಲ ಮರುಪಾವತಿಸಲು ವಿಫಲ-ಅನಿಲ್ ಅಂಬಾನಿ ಮೇಲೆ ಕೇಸ್

ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್, ಚೀನಾ ರಫ್ತು-ಆಮದು ಬ್ಯಾಂಕ್ 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6,603 ಕೋಟಿ 80 ಲಕ್ಷದ 400) ಸಾಲವನ್ನು ನೀಡಲು ಒಪ್ಪಿಕೊಂಡಿದ್ದವು.

English summary

UK Court Directed Anil Ambani To Pay 100 Million Within Six Weeks

A UK court on Friday directed Reliance Group chairman Anil Ambani to pay 100 million Dollar within six weeks
Story first published: Saturday, February 8, 2020, 12:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X