For Quick Alerts
ALLOW NOTIFICATIONS  
For Daily Alerts

ಕೊರೊನಾಯಿಂದ ಕೆಲಸ ಮಾಡದವರಿಗೆ 80 ಪರ್ಸೆಂಟ್ ವೇತನ:ಬ್ರಿಟೀಷ್ ಸರ್ಕಾರ

|

ಕೊರೊನಾವೈರಸ್‌ನಿಂದಾಗಿ ಏಕಾಏಕಿ ಆರ್ಥಿಕ ಕುಸಿತವು ಹೆಚ್ಚಾಗುತ್ತಿದ್ದಂತೆ ಬ್ರಿಟನ್‌ನಾದ್ಯಂತ ಕೆಲಸ ಕಳೆದುಕೊಳ್ಳುವ ಭೀತಿಯ್ಲಿರುವ ಲಕ್ಷಾಂತರ ಕಾರ್ಮಿಕರ ವೇತನವನ್ನು ಸರ್ಕಾರವು ನೀಡಲು ಯೋಜನೆ ಸಿದ್ಧಪಡಿಸಿದೆ.

ಬ್ರಿಟಿಷ್ ಸರ್ಕಾರವು ಇದುವರೆಗೂ ಕೈಗೊಳ್ಳದ ಅಭೂತಪೂರ್ವ ಹೆಜ್ಜೆಯನ್ನು ಕೈಗೊಂಡಿರುವುದಾಗಿ ತಿಳಿಸಿರುವ ಮೇಯರ್ ರಿಷಿ ಸುನಕ್, ಆರ್ಥಿಕತೆಯು ಕುಸಿದಂತೆ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಬದಲು ಅವರನ್ನು ತಮ್ಮ ವೇತನದಾರರ ಪಟ್ಟಿಯಲ್ಲಿ ಇಟ್ಟುಕೊಂಡರೆ ಕಾರ್ಮಿಕರ ವೇತನದ 80 ಪರ್ಸೆಂಟ್‌ವರೆಗಿನ ಅನುದಾನವನ್ನು ಸರ್ಕಾರ ನೀಡುತ್ತದೆ ಎಂದು ಹೇಳಿದರು. ಸರಾಸರಿ ಆದಾಯಕ್ಕಿಂತ ಸ್ವಲ್ಪ ಹೆಚ್ಚು ಅಂದರೆ ತಿಂಗಳಿಗೆ, 2,500 ಪೌಂಡ್‌ಗಳವರೆಗೆ ವೇತನ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಕೊರೊನಾಯಿಂದ ಕೆಲಸ ಮಾಡದವರಿಗೆ 80 ಪರ್ಸೆಂಟ್ ವೇತನ:ಬ್ರಿಟೀಷ್ ಸರ್ಕಾರ

ರೋಗ ಹರಡುತ್ತಿದ್ದಂತೆ ಬ್ರಿಟಿಷ್ ಆರ್ಥಿಕತೆಯ ಹೆಚ್ಚಿನ ಭಾಗಗಳು ಲಾಕ್‌ಡೌನ್ ಅನ್ನು ನಿಭಾಯಿಸಲು ಸಂಸ್ಥೆಗಳಿಗೆ ಸಹಾಯ ಮಾಡಲು ಸರ್ಕಾರವು 350 ಬಿಲಿಯನ್ ಪೌಂಡ್ (ಭಾರತದ ರುಪಾಯಿಗಳಲ್ಲಿ ಸುಮಾರು 30 ಲಕ್ಷ ಕೋಟಿ ರುಪಾಯಿ) ಮೌಲ್ಯದ ಪ್ಯಾಕೇಜ್ ಘೋಷಿಸಿದೆ.

ಮೇಯರ್ ತನ್ನ ಪರಿಷ್ಕರಿಸಿದ ಯೋಜನೆಯನ್ನು ವಿಶ್ವದ ಅತ್ಯಂತ ವಿಸ್ತಾರವಾದದ್ದು ಮತ್ತು ಬ್ರಿಟಿಷ್ ಇತಿಹಾಸದಲ್ಲಿ ಅಭೂತಪೂರ್ವ ಯೋಜನೆಯಾಗಿದೆ ಎಂದು ನಗರ ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.

ಸಾರ್ವಜನಿಕರು ಈ ಕಷ್ಟದ ಸ್ಥಿತಿಯಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಬೇಕು ಎಂದು ಸ್ಥಳೀಯ ಮೇಯರ್ ಮನವಿ ಮಾಡಿದ್ದಾರೆ.

English summary

UK Government To Pay 80 Percent Wages For Those Not Working

The UK government is to pay the wages of millions of workers across Britain to keep them in jobs as the economic fallout from the coronavirus outbreak
Story first published: Saturday, March 21, 2020, 13:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X