For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ 450 ಕೋಟಿ ರು. ಲೆಕ್ಕ ನೀಡದ ಆಸ್ತಿ ಪತ್ತೆ

By ಅನಿಲ್ ಆಚಾರ್
|

ಆದಾಯ ತೆರಿಗೆ ಇಲಾಖೆಯಿಂದ ನವೆಂಬರ್ 27ನೇ ತಾರೀಕು ಐಟಿ ಎಸ್ ಇಜೆಡ್ ಡೆವಲಪರ್ ಪ್ರಕರಣದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ 450 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಲೆಕ್ಕಕ್ಕೆ ತೋರಿಸದ ಆದಾಯವು ಈ ತನಕ ಪತ್ತೆಯಾಗಿದೆ.

ಅದರ ಮಾಜಿ ನಿರ್ದೇಶಕ ಮತ್ತು ಪ್ರಮುಖ ಸ್ಟೇನ್ ಲೆಸ್ ಸ್ಟೀಲ್ ಪೂರೈಕೆದಾರರು ಚೆನ್ನೈನವರು. ಚೆನ್ನೈ, ಮುಂಬೈ, ಹೈದರಾಬಾದ್ ಹಾಗೂ ಕಡಲೂರಿನ ಹದಿನಾರು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿತ್ತು. ಆಗ ದೊರೆತ ಸಾಕ್ಷ್ಯದಲ್ಲಿ ಲೆಕ್ಕಕ್ಕೆ ನೀಡದ 100 ಕೋಟಿಯಷ್ಟು ಮೌಲ್ಯದ ಆಸ್ತಿ ಬಯಲು ಮಾಡಿತ್ತು. ಆ ಕಂಪೆನಿಯ ಮಾಜಿ ನಿರ್ದೇಶಕ ಮತ್ತು ಆತನ ಕುಟುಂಬದವರು ಕಳೆದ ಮೂರು ವರ್ಷದಲ್ಲಿ ಈ ಆಸ್ತಿಯನ್ನು ಸಂಗ್ರಹಿಸಿದ್ದರು.

ಡಿಸೆಂಬರ್ 31, 2020ರೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ರೆ ಏನಾಗುತ್ತೆಡಿಸೆಂಬರ್ 31, 2020ರೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ರೆ ಏನಾಗುತ್ತೆ

ಇನ್ನಷ್ಟು ಶೋಧ ಕಾರ್ಯಾಚರಣೆಯಲ್ಲಿ ಐಟಿ ಎಸ್ ಇಜೆಡ್ ಡೆವಲಪರ್ ಗೆ ಸೇರಿದ 160 ಕೋಟಿ ರುಪಾಯಿ ಮೌಲ್ಯದ ನಕಲಿ ವರ್ಕ್ ಇನ್ ಪ್ರೋಗ್ರೆಸ್ ಬಯಲು ಮಾಡಿತು. ಇದರ ಜತೆಗೆ ನಕಲಿ ಕನ್ಸಲ್ಟನ್ಸಿ ಫೀ ಮೂವತ್ತು ಕೋಟಿ ರುಪಾಯಿಯನ್ನು ಸಹ ಬಂಡವಾಳ ವೆಚ್ಚ ಎಂದು ತೋರಿಸಲಾಗಿದೆ. ಇನ್ನು ಒಪ್ಪಿಕೊಳ್ಳಲಾಗದ ಬಡ್ಡಿ ಮೊತ್ತದ ಇಪ್ಪತ್ತು ಕೋಟಿ ರುಪಾಯಿ ಕೂಡ ಕ್ಲೇಮ್ ಮಾಡಲಾಗಿದೆ.

IT ಇಲಾಖೆ ದಾಳಿಯಲ್ಲಿ 450 ಕೋಟಿ ರು. ಲೆಕ್ಕ ನೀಡದ ಆಸ್ತಿ  ಪತ್ತೆ

ಐಟಿ ಎಸ್ ಇಜೆಡ್ ಡೆವಲಪರ್ ಗೆ ಸಂಬಂಧಿಸಿದಂತೆ ಕೆಲವು ಷೇರು ಖರೀದಿಯ ವ್ಯವಹಾರವನ್ನು ಸಹ ಬಯಲು ಮಾಡಲಾಗಿದೆ. ಸಾಕ್ಷ್ಯಾಧಾರದಿಂದ ಗೊತ್ತಾಗಿರುವುದೇನೆಂದರೆ, ಉಕ್ಕು ಪೂರೈಕೆದಾರ ಸಮೂಹವು ಮಾರಾಟಕ್ಕೆ ಸಂಬಂಧಿದಿದಂತೆ ಮೂರು ಬಗೆಯ ಖಾತೆ ನಿರ್ವಹಿಸುತ್ತಿತ್ತು. ಲೆಕ್ಕ ತೋರಿಸಿರುವುದು, ಲೆಕ್ಕ ತೋರಿಸದಿರುವುದು ಹಾಗೂ ಭಾಗಶಃ ಲೆಕ್ಕ ತೋರಿಸಿರುವುದು ಹೀಗೆ.

ಲೆಕ್ಕ ತೋರಿಸದಿರುವುದು ಹಾಗೂ ಭಾಗಶಃ ಲೆಕ್ಕ ತೋರಿಸಿರುವ ಮಾರಾಟ ಪ್ರತಿ ವರ್ಷ ಶೇಕಡಾ ಇಪ್ಪತ್ತೈದಕ್ಕೂ ಹೆಚ್ಚಿದೆ. ಇನ್ನು ಮಾರಾಟದ ಬಿಲ್ ಗಳನ್ನು ವಿವಿಧ ಒದಗಿಸಿ, ಆ ವ್ಯವಹಾರಗಳ ಮೇಲೆ ಹತ್ತು ಪರ್ಸೆಂಟ್ ಕಮಿಷನ್ ಕೂಡ ಪಡೆಯಲಾಗಿದೆ. ಲೆಕ್ಕ ತೋರಿಸದಿರುವ ಮೊತ್ತವು ಸದ್ಯಕ್ಕೆ ಅಂದಾಜು ನೂರು ಕೋಟಿ ರುಪಾಯಿ ಎನ್ನಲಾಗಿದೆ.

ಈ ಸಮೂಹವು ಫೈನಾನ್ಸಿಂಗ್, ಅಕ್ರಮ ಹಣ ವರ್ಗಾವಣೆ, ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ತೊಡಗಿದ್ದವು. ಈ ಸಂಸ್ಥೆಗಳ ಲೆಕ್ಕಕ್ಕೆ ನೀಡದ ವ್ಯವಹಾರಗಳು ಮತ್ತು ಲೆಕ್ಕಕ್ಕೆ ನೀಡ ಬಂಡವಾಳ/ಸಾಲದ ಪೂರೈಕೆ ಅಂದಾಜು ಐವತ್ತು ಕೋಟಿ ರುಪಾಯಿ ಎನ್ನಲಾಗಿದೆ.

English summary

Unaccounted 450 Crore Rupees Cash Unearthed By Income Tax Department

Income Tax department unearthed amount of 450 crore rupees unaccounted amount. Here is the details.
Story first published: Sunday, November 29, 2020, 17:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X