For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಪದವೀಧರರ ನಿರುದ್ಯೋಗ ದರ 18.5 ಪರ್ಸೆಂಟ್: ನಾಲ್ವರು ಪದವೀಧರರಲ್ಲಿ ಒಬ್ಬರು ನಿರುದ್ಯೋಗಿ

|

ದೇಶದಲ್ಲಿ ಪ್ರಸ್ತುತ ನಿರುದ್ಯೋಗ ದರವು 7.5 ರಷ್ಟಿದ್ದು, ಪದವೀಧರರ ನಿರುದ್ಯೋಗ ದರವು 18.5 ಪರ್ಸೆಂಟ್ ಇದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ವರದಿಯಲ್ಲಿ ತಿಳಿಸಿದೆ.

ಸಿಎಸ್‌ಐಇ 2019 ರ ಅಂತ್ಯದ ಮಾಹಿತಿಯ ಪ್ರಕಾರ ಪದವಿ ಪಡೆದ ನಾಲ್ವರಲ್ಲಿ ಒಬ್ಬರು ನಿರುದ್ಯೋಗಿಗಳಿದ್ದಾರೆ ಎಂದು ಹೇಳಿದೆ. ಅಂದರೆ ನಿರುದ್ಯೋಗ ದರಕ್ಕಿಂತ ಪದವೀಧರರ ನಿರುದ್ಯೋಗ ದರವು ಎರಡು ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.

ದೇಶದಲ್ಲಿ ನಾಲ್ವರು ಪದವೀಧರರಲ್ಲಿ ಒಬ್ಬರಿಗೆ ಕೆಲಸವೇ ಸಿಗುತ್ತಿಲ್ಲ!

ಸೆಪ್ಟೆಂಬರ್ ಮತ್ತು ಡಿಸೆಂಬರ್ 2019 ರ ನಡುವೆ 1.74 ಲಕ್ಷ ಕುಟುಂಬಗಳೊಂದಿಗೆ ಸಂವಹನ ನಡೆಸಿದ ನಂತರ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಈ ವರದಿ ಬಿಡುಗಡೆ ಮಾಡಿದೆ. ಭಾರತದಲ್ಲಿ ನಗರ ನಿರುದ್ಯೋಗ ದರದಲ್ಲಿ ಗಣನೀಯ ಏರಿಕೆ ವರದಿಯನ್ನು ಚಿತ್ರಿಸಲಾಗಿದ್ದು, ಇದು ಗ್ರಾಮೀಣ ಭಾರತದಲ್ಲಿ ನಿರುದ್ಯೋಗ ದರಕ್ಕೆ ಹೋಲಿಸಿದರೆ 9 ಪರ್ಸೆಂಟ್‌ನಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು 6.2 ಪರ್ಸೆಂಟ್ನಷ್ಟಿದೆ.

2018ರಲ್ಲಿ ಪ್ರತಿ ಗಂಟೆಗೆ, ದೇಶದಲ್ಲಿ ಒಬ್ಬ ನಿರುದ್ಯೋಗಿ ಆತ್ಮಹತ್ಯೆ: NCRB ವರದಿ2018ರಲ್ಲಿ ಪ್ರತಿ ಗಂಟೆಗೆ, ದೇಶದಲ್ಲಿ ಒಬ್ಬ ನಿರುದ್ಯೋಗಿ ಆತ್ಮಹತ್ಯೆ: NCRB ವರದಿ

ಮಹಿಳೆಯರ ಒಟ್ಟಾರೆ ನಿರುದ್ಯೋಗ ದರವು 17.5 ಪರ್ಸೆಂಟ್‌ ನಷ್ಟಿದ್ದರೆ, ಪುರುಷರ ನಿರುದ್ಯೋಗ ದರ 6.2 ಪರ್ಸೆಂಟ್‌ನಷ್ಟಿದೆ.ಅದಲ್ಲೂ ನಗರಗಳಲ್ಲಿ ಮಹಿಳೆಯರ ನಿರುದ್ಯೋಗ ದರವು ತೀವ್ರವಾಗಿ ಹೆಚ್ಚಳವಾಗಿದ್ದು ನಿರುದ್ಯೋಗ ಪ್ರಮಾಣ 26 ಪರ್ಸೆಂಟ್ ರಷ್ಟಿದೆ.

ಕಳೆದ ವರ್ಷ ಸೋರಿಕೆಯಾದ ಎಸ್‌ಎಸ್ಒ ವರದಿಯ ಪ್ರಕಾರ 2018-19ರ ಆರ್ಥಿಕ ವರ್ಷದಲ್ಲಿ ನಿರುದ್ಯೋಗ ದರವು 45 ವರ್ಷಗಳಲ್ಲಿ ಗರಿಷ್ಟ ಮಟ್ಟದಲ್ಲಿದೆ ಎಂದು ಸೂಚಿಸಿತ್ತು.

English summary

Unemployment Rate For Graduates Stands At 18.5 Percent

Unemployment rate for graduates stands at 18.5 per cent - more than twice the headline rate, according to data for the end of 2019 compiled by CMIE.
Story first published: Tuesday, January 21, 2020, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X