For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಕೇಂದ್ರ ಬಜೆಟ್ ಮೊಬೈಲ್ ಆಪ್ ಗೆ ಚಾಲನೆ ನೀಡಿದ ನಿರ್ಮಲಾ

|

ಹಲ್ವಾ ಕಾರ್ಯಕ್ರಮ ಇದ್ದ ಶನಿವಾರದಂದು (ಜನವರಿ 23, 2021) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು "ಕೇಂದ್ರ ಬಜೆಟ್ ಮೊಬೈಲ್ ಆಪ್"ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಸಂಸತ್ ಸದಸ್ಯರಿಗೆ ಹಾಗೂ ಜನ ಸಾಮಾನ್ಯರಿಗೆ ಯಾವುದೇ ಸಮಸ್ಯೆ ಇಲ್ಲದೆ ಡಿಜಿಟಲ್ ಆಗಿ ಬಜೆಟ್ ದಾಖಲಾತಿಗಳು ದೊರೆಯುತ್ತವೆ.

ಈ ಹಿಂದಿನ ಬಜೆಟ್ ನಲ್ಲಿ ದಾಖಲೆಗಳು ಮುದ್ರಣವಾಗುತ್ತಿದ್ದವು. ಆದರೆ ಈ ಬಾರಿ ಕೋವಿಡ್ 19 ಹಿನ್ನೆಲೆಯಲ್ಲಿ ದಾಖಲಾತಿಗಳು ಮುದ್ರಣ ಮಾಡುತ್ತಿಲ್ಲ. ಅದರ ಬದಲಿಗೆ ಸಂಸತ್ ಸದಸ್ಯರಿಗೆ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಈ ಅಪ್ಲಿಕೇಷನ್ ಅನ್ನು ಕೇಂದ್ರ ಬಜೆಟ್ ಪೋರ್ಟಲ್ www.indiabudget.gov.in ಮೂಲಕ ಡೌನ್ ಲೋಡ್ ಮಾಡಬಹುದು.

ಬಜೆಟ್ 2021: ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಗೆ ಮನವಿಬಜೆಟ್ 2021: ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಗೆ ಮನವಿ

ಇದಕ್ಕೂ ಮುನ್ನ ಹಲ್ವಾ ಕಾರ್ಯಕ್ರಮ ಅಂದರೆ ಬಜೆಟ್ ಗೆ ಮುನ್ನ ದಾಖಲಾತಿಗಳ ಮುದ್ರಣಕ್ಕೆ ಚಾಲನೆ ನೀಡುವಂಥದ್ದಾಗಿರುತ್ತಿತ್ತು. ಇದೇ ಮೊದಲ ಬಾರಿಗೆ, ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಆರ್ಥಿಕ ವರ್ಷದ ಕೇಂದ್ರ ಸರ್ಕಾರದ ಆದಾಯ ಮತ್ತು ವೆಚ್ಚ, ಫೈನಾನ್ಸ್ ಬಿಲ್, ತೆರಿಗೆಗಳು ಮತ್ತು ಇತರ ಕ್ರಮಗಳ ಬಗ್ಗೆ ಫಿಸಿಕಲ್ ಆಗಿ ಮುದ್ರಣ ಆಗುತ್ತಿಲ್ಲ.

ಬಜೆಟ್ 2021: ಕೇಂದ್ರ ಬಜೆಟ್ ಮೊಬೈಲ್ ಆಪ್ ಗೆ ಚಾಲನೆ ನೀಡಿದ ನಿರ್ಮಲಾ

ಈ ಮೊಬೈಲ್ ಅಪ್ಲಿಕೇಷನ್ ಹದಿನಾಲ್ಕು ಕೇಂದ್ರ ಬಜೆಟ್ ಮಾಹಿತಿಯನ್ನು ಒದಗಿಸುತ್ತದೆ. ಅದರಲ್ಲಿ ವಾರ್ಷಿಕ ಹಣಕಾಸು ಹೇಳಿಕೆ (ಬಜೆಟ್), ಅನುದಾನ ಬೇಡಿಕೆ (DG), ಫೈನಾನ್ಸ್ ಬಿಲ್ ಮುಂತಾದವುಗಳ ಮಾಹಿತಿ ಇರುತ್ತದೆ. ಫೆಬ್ರವರಿ 1ನೇ ತಾರೀಕಿನಂದು ಬಜೆಟ್ ಭಾಷಣ ಪೂರ್ಣಗೊಂಡ ನಂತರ ಮೊಬೈಲ್ ಅಪ್ಲಿಕೇಷನ್ ನಲ್ಲಿ ಬಜೆಟ್ ದಾಖಲಾತಿ ದೊರೆಯುತ್ತದೆ.

ಈ ಅಪ್ಲಿಕೇಷನ್ ಅನ್ನು ಆರ್ಥಿಕ ವ್ಯವಹಾರಗಳ ಇಲಾಖೆ ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ ಫೋರ್ಮಾಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದೆ.

English summary

Union Budget 2021: Mobile Application Launched By Finance Minister Nirmala Sitharaman

On the occasion of halwa ceremony budget related mobile application launched by finance minister Nirmaala Sitharaman on Saturday (January 23, 2021).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X