For Quick Alerts
ALLOW NOTIFICATIONS  
For Daily Alerts

ಕೊರೊನಾಗೂ ಮುಂಚಿನ ಶೇ 80ರಷ್ಟು ಸಾಮರ್ಥ್ಯದೊಂದಿಗೆ ವಿಮಾನ ಹಾರಾಟಕ್ಕೆ ಒಪ್ಪಿಗೆ

|

ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮುಂಚೆ ಯಾವ ಪ್ರಮಾಣದಲ್ಲಿ ವಿಮಾನ ಯಾನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವೋ ಅದರ ಶೇಕಡಾ 80ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ನಿರ್ವಹಿಸುವುದಕ್ಕೆ ಗುರುವಾರ ಸರ್ಕಾರ ಅನುವು ಮಾಡಿಕೊಟ್ಟಿದೆ. ದೀಪಾವಳಿಗೂ ಮುಂಚೆಯಿಂದ ಈಗಿನ ತನಕ ಶೇಕಡಾ 70ರಷ್ಟು ಸಾಮರ್ಥ್ಯದೊಂದಿಗೆ ವಿಮಾನ ಯಾನ ಸಂಸ್ಥೆಗಳು ಹಾರಾಟ ನಡೆಸುತ್ತಿದ್ದವು.

ಅಂತರರಾಷ್ಟ್ರೀಯ ವಿಮಾನ ಹಾರಾಟ ಡಿಸೆಂಬರ್ 31, 2020ರ ತನಕ ಅಮಾನತುಅಂತರರಾಷ್ಟ್ರೀಯ ವಿಮಾನ ಹಾರಾಟ ಡಿಸೆಂಬರ್ 31, 2020ರ ತನಕ ಅಮಾನತು

ದೇಶೀಯ ವಿಮಾನ ಹಾರಾಟವನ್ನು ಕಳೆದ ಮೇ 25ನೇ ತಾರೀಕಿಗೆ 30 ಸಾವಿರ ಪ್ರಯಾಣಿಕರೊಂದಿಗೆ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಅದೀಗ ನವೆಂಬರ್ 30, 2020ಕ್ಕೆ 2.52 ಲಕ್ಷ ಪ್ರಯಾಣಿಕರಿಗೆ ತಲುಪಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಕೊರೊನಾಗೂ ಮುಂಚಿನ ಶೇ 80ರಷ್ಟು ಸಾಮರ್ಥ್ಯದೊಂದಿಗೆ ವಿಮಾನ ಹಾರಾಟ

ಈ ವರ್ಷದ ಮೇ ತಿಂಗಳಲ್ಲಿ ವಿಮಾನ ಹಾರಾಟ ಪುನರಾರಂಭವಾದ ಮೇಲೆ ಇದು ಐದನೇ ಬಾರಿಗೆ ಸರ್ಕಾರದಿಂದ ವಿಮಾನಯಾನ ಹಾರಾಟದ ಸಾಮರ್ಥ್ಯ ವಿಸ್ತರಣೆ ಮಾಡಲಾಗುತ್ತಿದೆ. ಕೊರೊನಾ ಲಾಕ್ ಡೌನ್ ಘೋಷಣೆಗೂ ಮುನ್ನ್ ವಿಮಾನಯಾನ ಸಂಸ್ಥೆಗಳು 2500 ದೇಶೀಯ ವಿಮಾನಗಳ ಹಾರಾಟ ನಡೆಸುತ್ತಿದ್ದವು. ಈಗ ಶೇಕಡಾ 80ರಷ್ಟು ವಿಮಾನಗಳಿಗೆ ಅವಕಾಶ ನೀಡಿದಲ್ಲಿ ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮುಂಚಿನ ಪ್ರಮಾಣದಲ್ಲಿ ಬಹುತೇಕ ವಿಮಾನಗಳು ಹಾರಾಟ ಆರಂಭಿಸಿದಂತಾಗುತ್ತದೆ.

English summary

Union Government Allows Airlines To Operate At 80 Percent Of Pre-Covid Capacity

Central government on Thursday allows airlines to operate at 80 percent of pre covid capacity.
Story first published: Thursday, December 3, 2020, 17:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X