For Quick Alerts
ALLOW NOTIFICATIONS  
For Daily Alerts

2,000 ರು. ಮುಖಬೆಲೆಯ ನೋಟಿನ ಬಗ್ಗೆ ಮಾತಾಡಿದ ಸಚಿವೆ ನಿರ್ಮಲಾ

|

2,000 ರುಪಾಯಿ ಮುಖಬೆಲೆಯ ನೋಟು ವಿತರಣೆ ನಿಲ್ಲಿಸುವಂತೆ ಯಾವುದೇ ಸೂಚನೆಯನ್ನು ಬ್ಯಾಂಕ್ ಗಳಿಗೆ ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ.

"ಈ ವರೆಗೆ ನನಗೆ ಗೊತ್ತಿರುವಂತೆ, 2,000 ರುಪಾಯಿ ಮುಖಬೆಲೆಯ ನೋಟು ವಿತರಣೆ ನಿಲ್ಲಿಸುವಂತೆ ಯಾವುದೇ ಸೂಚನೆಯನ್ನು ಬ್ಯಾಂಕ್ ಗಳಿಗೆ ನೀಡಿಲ್ಲ" ಎಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಮುಖ್ಯಸ್ಥರ ಸಭೆಯಲ್ಲಿ ಹೇಳಿದ್ದಾರೆ.

ಮಾರ್ಚ್‌ 1ರಿಂದ ಸಿಗಲ್ಲ 2,000 ರುಪಾಯಿ ನೋಟುಮಾರ್ಚ್‌ 1ರಿಂದ ಸಿಗಲ್ಲ 2,000 ರುಪಾಯಿ ನೋಟು

ಈಚೆಗೆ ಸುದ್ದಿಯೊಂದು ಹರಿದಾಡುತ್ತಿತ್ತು. 2,000 ರುಪಾಯಿ ಮುಖಬೆಲೆಯ ನೋಟು ಎಟಿಎಂಗಳಲ್ಲಿ ತುಂಬದಿರಲು ಬ್ಯಾಂಕ್ ಗಳು ನಿರ್ಧರಿಸಿವೆ. ಆದರೆ ಎರಡು ಸಾವಿರ ರುಪಾಯಿ ನೋಟಿನ ಕಾನೂನು ಮಾನ್ಯತೆ ಹಾಗೇ ಮುಂದುವರಿಯಲಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು.

2,000 ರು. ಮುಖಬೆಲೆಯ ನೋಟಿನ ಬಗ್ಗೆ ಮಾತಾಡಿದ ಸಚಿವೆ ನಿರ್ಮಲಾ

ಆದರೆ, ನಿಧಾನವಾಗಿ ಎರಡು ಸಾವಿರ ರುಪಾಯಿ ನೋಟಿನ ಸಾರ್ವಜನಿಕ ಚಲಾವಣೆಯನ್ನು ಹಿಂಪಡೆಯಲಾಗುವುದು ಎಂಬ ಮಾತು ಚಾಲ್ತಿಯಲ್ಲಿತ್ತು. ಈಗ ಈ ವಿಚಾರದ ಬಗ್ಗೆ ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಸ್ಪಷ್ಟನೆ ನೀಡಿದ್ದು, ಅಂಥ ಯಾವ ಸೂಚನೆಯನ್ನೂ ಕೊಟ್ಟಿಲ್ಲ ಎಂದಿದ್ದಾರೆ.

English summary

Union Minister Nirmala Sitharaman Clarifies About 2 Thousand Notes

Union finance minister Nirmala Sitharaman clarifies about 2,000 rupees denomination circulation news.
Story first published: Thursday, February 27, 2020, 10:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X