For Quick Alerts
ALLOW NOTIFICATIONS  
For Daily Alerts

ಅಮೆರಿಕದಲ್ಲಿ ಬಡ್ಡಿ ಏರಿಕೆ ಎಫೆಕ್ಟ್; ಭಾರತದ ಷೇರುಪೇಟೆ, ಕರೆನ್ಸಿ ಕುಸಿತ

|

ನವದೆಹಲಿ, ನ. 3: ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿ ದರ 75 ಬೇಸಿಸ್ ಪಾಯಿಂಟ್ಸ್ ಹೆಚ್ಚಾದ ಬೆನ್ನಲ್ಲೇ ಭಾರತದಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಗುರುವಾರ ಬೆಳಗಿನ ವಹಿವಾಟಿನಲ್ಲಿ 400 ಅಂಕಗಳಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಕೂಡ ಕೆಲ ಅಂಕಗಳನ್ನು ಕಳೆದುಕೊಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ ಬೆಳಗ್ಗೆ ತುಸು ಇಳಿಕೆ ಕಂಡಿತ್ತು. ಗುರುವಾರದ ಫೋರೆಕ್ಸ್ ಮಾರುಕಟ್ಟೆ ವಹಿವಾಟಿನಲ್ಲಿ ಪ್ರತೀ ಡಾಲರ್‌ಗೆ 88.90 ರೂ ಬೆಲೆ ಇತ್ತು. ಡಾಲರ್ ಎದುರು ರೂಪಾಯಿ ಸುಮಾರು 10 ಪೈಸೆ ಮೌಲ್ಯ ಕಳೆದುಕೊಂಡಿದೆ.

ಅಮೆರಿಕದಲ್ಲಿ ಬಡ್ಡಿ ದರ ಮತ್ತೆ ತೀವ್ರ ಹೆಚ್ಚಳ; ಹಣದುಬ್ಬರ ಇಳಿಯೋವರೆಗೂ ಬಿಡಲ್ಲ ಎಂದ ಫೆಡ್ ರಿಸರ್ವ್ ಮುಖ್ಯಸ್ಥಅಮೆರಿಕದಲ್ಲಿ ಬಡ್ಡಿ ದರ ಮತ್ತೆ ತೀವ್ರ ಹೆಚ್ಚಳ; ಹಣದುಬ್ಬರ ಇಳಿಯೋವರೆಗೂ ಬಿಡಲ್ಲ ಎಂದ ಫೆಡ್ ರಿಸರ್ವ್ ಮುಖ್ಯಸ್ಥ

ನಿನ್ನೆ ಬುಧವಾರವೇ ಫೋರೆಕ್ಸ್ ಮತ್ತು ಷೇರು ಮಾರುಕಟ್ಟೆಗಳು ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ದರ ಏರಿಕೆ ನಿರೀಕ್ಷಿಸಿ ಕಳೆಗುಂದಿದ್ದವು. ಬುಧವಾರ ಡಾಲರ್ ಎದುರು ರೂಪಾಯಿ 19 ಪೈಸೆಯಷ್ಟು ಮೌಲ್ಯ ಇಳಿಕೆಕಂಡಿತ್ತು. ಇವತ್ತು ಅದರ ಕುಸಿತ ಮುಂದುವರಿದಿದೆ.

ಇನ್ನು, ಷೇರುಪೇಟೆ ಕೂಡ ನಿನ್ನೆಯಿಂದಲೇ ಇಳಿಕೆ ಕಂಡಿದೆ. ಬುಧವಾರ ವಹಿವಾಟಿನ ಅಂತ್ಯದಲ್ಲಿ ಬಿಎಸ್‌ಇ ಸೂಚ್ಯಂಕ 200ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿತು. ಇಂದು ಕೂಡ 400ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿ ಮಾರುಕಟ್ಟೆ ಹೆಚ್ಚು ಕಳೆದುಕೊಂಡಿಲ್ಲವಾದರೂ 18 ಸಾವಿರ ಅಂಕಗಳ ಮಟ್ಟಕ್ಕಿಂತ ಕಡಿಮೆಗೆ ಇಳಿದಿತ್ತು. ಆದರೆ, ಬಿಎಸ್‌ಇ ಸೆನ್ಸೆಕ್ಸ್ ಕೂಡ 61 ಸಾವಿರ ಅಂಕಗಳ ಮಟ್ಟಕ್ಕಿಂತ ಕೆಳಗೆ ಬಂದಿದೆ. ಇದು ಹೀಗೆ ಮುಂದುವರಿದರೆ ಒಂದೆರಡು ದಿನದಲ್ಲಿ 60 ಸಾವಿರ ಅಂಕಗಳ ಮಟ್ಟಕ್ಕಿಂತ ಕೆಳಗಿಳಿಯುವ ಸಾಧ್ಯತೆ ಇದೆ.

ಏರ್‌ಏಷ್ಯಾದ ಸಂಪೂರ್ಣ ಪಾಲು ಪಡೆದ ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾಏರ್‌ಏಷ್ಯಾದ ಸಂಪೂರ್ಣ ಪಾಲು ಪಡೆದ ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ

ಗುರುವಾರದ ವಹಿವಾಟಿನಲ್ಲಿ ಬಜಾಜ್ ಆಟೋ, ಭಾರ್ತಿ ಏರ್ಟೆಲ್, ಟೈಟಾನ್, ಐಟಿಸಿ, ಮಾರುತಿ ಕಂಪನಿಯ ಷೇರುಗಳು ಲಾಭ ಪಡೆದಿವೆ. ಟೆಕ್ ಮಹೀಂದ್ರ, ಹಿಂಡಾಲ್ಕೋ, ಟಾಟಾ ಕನ್ಸಲ್ಟೆನ್ಸಿ, ಪವರ್ ಗ್ರಿಡ್, ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋ ಮೊದಲಾದ ಕೆಲ ಕಂಪನಿಗಳ ಷೇರುಗಳು ನಷ್ಟ ಕಂಡಿವೆ.

ಏಷ್ಯಾದ ಇತರೆಡೆಯೂ ಎಫೆಕ್ಟ್

ಏಷ್ಯಾದ ಇತರೆಡೆಯೂ ಎಫೆಕ್ಟ್

ಭಾರತ ಮಾತ್ರವಲ್ಲ ಏಷ್ಯಾದ ಹಲವು ಷೇರುಪೇಟೆಗಳೂ ಅಮೆರಿಕ ಫೆಡರಲ್ ಬ್ಯಾಂಕ್ ದರ ಏರಿಕೆಯ ಬಿಸಿ ತಾಕಿಸಿಕೊಂಡಿವೆ. ದಕ್ಷಿಣ ಕೊರಿಯಾ, ಶಾಂಘೈ, ಹಾಂಕಾಂಗ್‌ನ ಷೇರು ಮಾರುಕಟ್ಟೆಗಳು ಗುರುವಾರ ಬೆಳಗಿನ ವಹಿವಾಟಿನಲ್ಲಿ ಅಂಕಗಳನ್ನು ಕಳೆದುಕೊಂಡಿವೆ. ಅಮೆರಿಕದ ವಾಲ್ ಸ್ಟ್ರೀಟ್ (ಷೇರುಪೇಟೆ) ನಲ್ಲೂ ಹಲವು ಸಂಸ್ಥೆಗಳ ಷೇರುಗಳು ಬೆಲೆ ಕಳೆದುಕೊಂಡಿವೆ.

ತೀವ್ರ ತರದಲ್ಲಿ ಬಡ್ಡಿ ಹೆಚ್ಚಳ ಮಾಡಿದರ ಪರಿಣಾಮ ಇದು. ಆದರೆ, ಮುಂದಿನ ದಿನಗಳಲ್ಲಿ ಬಡ್ಡಿ ಹೆಚ್ಚಳ ಮೆದುವಾಗಿರುತ್ತದೆ ಎಂದು ಫೆಡರಲ್ ಬ್ಯಾಂಕ್ ಮುಖ್ಯಸ್ಥರು ಸಮಜಾಯಿಷಿ ನೀಡಿದ ಬಳಿಕ ಹೂಡಿಕೆದಾರರು ತುಸು ನಿಟ್ಟುಸಿರು ಬಿಡುವಂತಾಗಿದೆ ಎಂಬುದು ತಜ್ಞರ ಅನಿಸಿಕೆ.

ಸಾಮಾನ್ಯವಾಗಿ ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದಾಗ ಭಾರತದಲ್ಲಿ ವಿದೇಶೀ ಹೂಡಿಕೆ ಕರಗುತ್ತದೆ. ಇಲ್ಲಿ ವಿದೇಶೀ ಪೋರ್ಟ್‌ಫೋಲಿಯಾ ಹೂಡಿಕೆದಾರರು ಭಾರತೀಯ ಈಕ್ವಿಟಿಗಳಿಂದ ಬಂಡವಾಳ ಹಿಂಪಡೆದುಕೊಳ್ಳುವುದಿದೆ. ಹಿಂದಿನ ಕೆಲ ತಿಂಗಳಿಂದ ಈ ಟ್ರೆಂಡ್ ಇದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರತದಿಂದ ಸಾವಿರಾರು ಕೋಟಿ ರೂ ಎಫ್‌ಪಿಐಗಳು ಹೊರಹೋಗಿವೆ. ಅಧಿಕ ಬಡ್ಡಿ ನೀಡುವ ಡಾಲರ್‌ನಲ್ಲಿ ಇವರು ಹೂಡಿಕೆ ಮಾಡುತ್ತಿದ್ದಾರೆ.

 

ಇತರ ಸೆಂಟ್ರಲ್ ಬ್ಯಾಂಕ್‌ಗಳಿಂದಲೂ ಕ್ರಮ

ಇತರ ಸೆಂಟ್ರಲ್ ಬ್ಯಾಂಕ್‌ಗಳಿಂದಲೂ ಕ್ರಮ

ಗಮನಿಸಬೇಕಾದ ಇನ್ನೂ ಒಂದು ಅಂಶ ಎಂದರೆ ಅಮೆರಿಕದ ಫೆಡರಲ್ ಬ್ಯಾಂಕ್ ದರ ಹೆಚ್ಚಾದರೆ ಬೇರೆ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ದರ ಹೆಚ್ಚಿಸುತ್ತವೆ. ಇದು ಅಮೆರಿಕದ ಡಾಲರ್ ಹೊಂದಿರುವ ಶಕ್ತಿಯ ಪರಿಣಾಮ. ಭಾರತದಲ್ಲಿ ಆರ್‌ಬಿಐ ಕೂಡ ಯುಎಸ್ ದರಕ್ಕೆ ಅನುಗುಣವಾಗಿ ದರ ಏರಿಳಿಕೆ ಮಾಡುತ್ತದೆ.

ಹಾಂಕಾಂಗ್‌ನ ಸೆಂಟ್ರಲ್ ಬ್ಯಾಂಕ್ ಅಮೆರಿಕದಷ್ಟೇ ಸಮವಾಗಿ ಬಡ್ಡಿ ಏರಿಕೆ ಮಾಡಿದೆ. ಎಚ್‌ಕೆಎಂಎ ಇಂದು 75 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಅಲ್ಲೀಗ ಬಡ್ಡಿ ದರ ಶೇ. 4.25ರಷ್ಟು ಇದೆ.

 

ಇತರ ಕೈಗಾರಿಕಾ ದೇಶಗಳು

ಇತರ ಕೈಗಾರಿಕಾ ದೇಶಗಳು

ವಿಶ್ವದ ಪ್ರಮುಖ ಕೈಗಾರಿಕಾ ದೇಶಗಳ ಜಿ10 ಗುಂಪಿನ ಹೆಚ್ಚಿನ ಸೆಂಟ್ರಲ್ ಬ್ಯಾಂಕುಗಳೂ ಕೂಡ ಅಮೆರಿಕದ ದರ ಏರಿಕೆಗೆ ಅನುಗುಣವಾಗಿ ಬಡ್ಡಿ ಏರಿಕೆ ಮಾಡಿವೆ. ಈ ವರ್ಷ ಜಿ10 ಸೆಂಟ್ರಲ್ ಬ್ಯಾಂಕುಗಳಿಂದ ಒಟ್ಟಾರೆ 2050 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ಹೆಚ್ಚಳ ಆಗಿದೆ.

ಅಮೆರಿಕವಲ್ಲದೇ, ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ನೆದರ್‌ಲೆಂಡ್ಸ್, ಸ್ವೀಡನ್ ಮತ್ತು ಬ್ರಿಟನ್ ದೇಶಗಳು ಈ ಗುಂಪಿನ ಇತರ ರಾಷ್ಟ್ರಗಳು. ಸ್ವಿಟ್ಜರ್ಲ್ಯಾಂಡ್ ಕೂಡ ಈ ಗುಂಪಿನಲ್ಲಿ ಇದೆಯಾದರೂ ಅದರ ಪಾತ್ರ ತುಸು ನಗಣ್ಯ. ಇವೆಲ್ಲವೂ ವಿಶ್ವದ ಪ್ರಮುಖ ಔದ್ಯಮಿಕ ದೇಶಗಳಾಗಿದ್ದು, ಸೆಂಟ್ರಲ್ ಬ್ಯಾಂಕುಗಳ ಮುಖ್ಯಸ್ಥರು ವರ್ಷಕ್ಕೊಮ್ಮೆ ಸಭೆ ನಡೆಸಿ ಚರ್ಚೆ ನಡೆಸುವುದು ವಾಡಿಕೆಯಾಗಿದೆ.

 

English summary

US Fed Bank Rate Hike Effect, Indian Shares and Currency Tumble

As USA's federal reserve bank has raised the interest rates by 75 basis points, share markets in most of the asia, including India have gone down in Wednesday closing and in Thursday opening transaction.
Story first published: Thursday, November 3, 2022, 13:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X