For Quick Alerts
ALLOW NOTIFICATIONS  
For Daily Alerts

ಅಮೆರಿಕಾದಲ್ಲಿ ನಿರುದ್ಯೋಗ ಹೆಚ್ಚಳ: H-1B ವೀಸಾಗಳ ತಾತ್ಕಾಲಿಕ ನಿಷೇಧ ಸಾಧ್ಯತೆ

|

ಮಹಾಮಾರಿ ಕೊರೊನಾವೈರಸ್ ಹರಡುವಿಕೆಯಿಂದ ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಅಮೆರಿಕಾ ಅತ್ಯಂತ ಜನಪ್ರಿಯವಾಗಿರುವ H-1B ವೀಸಾಗಳಂತಹ ಕೆಲವು ಕೆಲಸದ ಆಧಾರಿತ ವೀಸಾಗಳ ವಿತರಣೆಗೆ ತಾತ್ಕಾಲಿಕ ನಿಷೇಧ ಹೇರಲಿದೆ ಎಂದು ವರದಿಯಾಗಿದೆ.

 

H-1B ಎಂಬುದು ಅಮೆರಿಕಾ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣಿತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಪ್ರಸ್ತುತ ಅಮೆರಿಕಾದಲ್ಲಿ H-1B ವೀಸಾ ಪಡೆದು ಸುಮಾರು 5,00,000 ಮಂದಿ ಕೆಲಸಮಾಡುತ್ತಿದ್ದಾರೆ. ಆದರೆ ಇನ್ಮುಂದೆ ಅಮೆರಿಕಾದಲ್ಲಿ ಕೆಲಸ ಮಾಡಬೇಕೆಂದು ಕನಸನ್ನು ಹೊಂದಿರುವವರು ಬಹಳ ಸಮಯದವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

 
ನಿರುದ್ಯೋಗ ಹೆಚ್ಚಳ: H-1B ವೀಸಾಗಳ ತಾತ್ಕಾಲಿಕ ನಿಷೇಧ ಸಾಧ್ಯತೆ

ಸದ್ಯ ಈ ಕುರಿತಂತೆ ವರದಿ ಸಿದ್ದಪಡಿಸಿ ಆದೇಶಕ್ಕಾಗಿ ಯೋಜನೆ ರೂಪಿಸುತ್ತಿರುವ ಅಮೆರಿಕ ಅಧ್ಯಕ್ಷರ ವಲಸೆ ಸಲಹೆಗಾರರು, ಹೊಸ ತಾತ್ಕಾಲಿಕ ಕೆಲಸ ಆಧಾರಿತ ವೀಸಾಗಳ ವಿತರಣೆಯನ್ನು ನಿಷೇಧಿಸುವ ಪ್ರಯತ್ನದಲ್ಲಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ವರದಿ ಮಾಡಿದೆ.

ಹೆಚ್ಚು ನುರಿತ ಕೆಲಸಗಾರರಿಗಾಗಿ ವಿನ್ಯಾಸಗೊಳಿಸಲಾದ H-1B ಮತ್ತು ಕಾಲೋಚಿತ ವಲಸೆ ಕಾರ್ಮಿಕರಿಗಾಗಿ H-2 ಬಿ ಹಾಗೂ ವಿದ್ಯಾರ್ಥಿ ವೀಸಾಗಳು ಮತ್ತು ಅವರೊಂದಿಗೆ ಬರುವ ಕೆಲಸದ ದೃಢೀಕರಣ ಸೇರಿದಂತೆ ವೀಸಾ ವಿಭಾಗಗಳ ಮೇಲೆ ಈ ಆದೇಶವು ಗಮನ ಹರಿಸುವ ನಿರೀಕ್ಷೆಯಿದೆ.

ಆದಾಗ್ಯೂ ಈ ಕುರಿತಂತೆ ಆಡಳಿತಾಧಿಕಾರಿಗಳು ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಇದು ಸಂಪೂರ್ಣ ವೀಸಾ ವರ್ಗಗಳ ಅಮಾನತುಗಳಿಂದ ಹಿಡಿದು ವಜಾಗೊಳಿಸುವಿಕೆಯವರೆಗೆ ಹೆಚ್ಚು ಹಾನಿಗೊಳಗಾದ ಕೈಗಾರಿಕೆಗಳಲ್ಲಿ ಅಮೆರಿಕನ್ನರನ್ನು ನೇಮಿಸಿಕೊಳ್ಳಲು ಯಾವ ರೀತಿ ಪ್ರೋತ್ಸಾಹ ನೀಡಬಹುದು ಎಂಬುದರ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕೆಲವು ಹೊಸ ರಿಪಬ್ಲಿಕನ್ ಸೆನೆಟರ್‌ಗಳು ಟ್ರಂಪ್‌ಗೆ ಪತ್ರ ಬರೆದು ವರ್ಷ ಅಥವಾ ನಿರುದ್ಯೋಗ ಅಂಕಿಅಂಶಗಳು ದೇಶದಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳುವವರೆಗೆ ಎಲ್ಲಾ ಹೊಸ ಅತಿಥಿ ಕೆಲಸಗಾರರ ವೀಸಾಗಳನ್ನು 60 ದಿನಗಳವರೆಗೆ ಮತ್ತು ಎಚ್ -1 ಬಿ ವೀಸಾ ಸೇರಿದಂತೆ ಅದರ ಕೆಲವು ವಿಭಾಗಗಳನ್ನು ಕನಿಷ್ಠ ಮುಂದಿನ ಅವಧಿಗೆ ಅಮಾನತುಗೊಳಿಸುವಂತೆ ಮನವಿ ಮಾಡಿವೆ.

English summary

US Govt Working To Temporarily Ban H-1B And Other Work Visas

The US is working to temporarily ban the issuance of some work-based visas like H-1B, popular among highly-skilled Indian IT professionals
Story first published: Saturday, May 9, 2020, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X