For Quick Alerts
ALLOW NOTIFICATIONS  
For Daily Alerts

ಕೊರೊನಾಗೆ ಕುಸಿದ ಯು.ಎಸ್. ಷೇರು ಮಾರ್ಕೆಟ್; ಭಾರತದ್ದೂ ಅದೇ ಕಥೆ

|

ಯು.ಎಸ್. ಷೇರು ಮಾರ್ಕೆಟ್ ಮಾರ್ಚ್ 18ರ ಬುಧವಾರದಂದು ದಿನದ ಆರಂಭದ ವಹಿವಾಟಿನಲ್ಲೇ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಡೌ ಜೋನ್ಸ್ 1357.68 ಪಾಯಿಂಟ್ ಕುಸಿದಿದೆ. ಇನ್ನು S&P 36.99 ಪಾಯಿಂಟ್ ಇಳಿಕೆಯಾಗಿದೆ. ಮಂಗಳವಾರವಷ್ಟೇ ಸ್ವಲ್ಪ ಮಟ್ಟಿಗೆ ಯು.ಎಸ್. ಷೇರು ಮಾರ್ಕೆಟ್ ಚೇತರಿಕೆ ಕಂಡಿತ್ತು.

ಅಂದಹಾಗೆ ಮಾರ್ಚ್ ತಿಂಗಳಲ್ಲೇ ಮೂರು ಬಾರಿ ಷೇರು ಮಾರ್ಕೆಟ್ ವ್ಯವಹಾರ ಸ್ಥಗಿತಗೊಳಿಸಲಾಗಿತ್ತು. ಪ್ರಮುಖ ಸೂಚ್ಯಂಕಗಳು ಏಳು ಪರ್ಸೆಂಟ್ ಮತ್ತು ಅದಕ್ಕಿಂತ ಹೆಚ್ಚು ಕುಸಿತ ಕಂಡರೆ 15 ನಿಮಿಷಗಳ ಕಾಲ ವಹಿವಾಟು ನಿಲ್ಲಿಸಲಾಗುತ್ತದೆ. ಮಾರ್ಚ್ 17ನೇ ತಾರೀಕು ಶ್ವೇತಭವನದಿಂದ ಆರ್ಥಿಕತೆಗೆ ಚೈತನ್ಯ ನೀಡುವ ಸಲುವಾಗಿ 850 ಬಿಲಿಯನ್ ನಿಂದ 1 ಟ್ರಿಲಿಯನ್ ಡಾಲರ್ ಪ್ಯಾಕೇಜ್ ಕೇಳಲಾಗಿದೆ.

ಅಮೆರಿಕ ಡಾಲರ್ ವಿರುದ್ಧ 35 ವರ್ಷಗಳ ಕನಿಷ್ಠ ಮಟ್ಟಕ್ಕೆ ಪೌಂಡ್ಸ್ಅಮೆರಿಕ ಡಾಲರ್ ವಿರುದ್ಧ 35 ವರ್ಷಗಳ ಕನಿಷ್ಠ ಮಟ್ಟಕ್ಕೆ ಪೌಂಡ್ಸ್

ಟ್ರಂಪ್ ಆಡಳಿತವು ಕೊರೊನಾ ವೈರಾಣು ಆತಂಕದಿಂದ ಆರ್ಥಿಕತೆಯನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದು, ಈ ಮೇಲಿನದು ಹೊಸ ಪ್ರಸ್ತಾವವಾಗಿದೆ.

ಕೊರೊನಾಗೆ ಕುಸಿದ ಯು.ಎಸ್. ಷೇರು ಮಾರ್ಕೆಟ್; ಭಾರತದ್ದೂ ಅದೇ ಕಥೆ

ಅಂದ ಹಾಗೆ ಬುಧವಾರದಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ 1700ಕ್ಕೂ ಹೆಚ್ಚು ಪಾಯಿಂಟ್ ಕುಸಿದು, 29 ಸಾವಿರ ಪಾಯಿಂಟ್ ಗಿಂತ ಕೆಳಗೆ ವಹಿವಾಟು ಮುಗಿಸಿದ್ದರೆ, ನಿಫ್ಟಿ 498 ಪಾಯಿಂಟ್ ಕುಸಿದು, 8,500 ಪಾಯಿಂಟ್ ಗಿಂತ ಕೆಳಗೆ ವಹಿವಾಟು ಮುಗಿಸಿದೆ/

English summary

US Stock Market Down; Indian Major Index Tanks

US stock market down by more than 1000 points on March 18th. Even Sensex also tank by 1700 points. Here is the details.
Story first published: Wednesday, March 18, 2020, 21:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X