For Quick Alerts
ALLOW NOTIFICATIONS  
For Daily Alerts

ಚೀನಾವನ್ನು ಹಿಂದಿಕ್ಕಿ ಭಾರತದೊಂದಿಗೆ ವ್ಯಾಪಾರ ಪಾಲುದಾರಿಕೆ ಹೆಚ್ಚಿಸಿಕೊಂಡ ಅಮೆರಿಕಾ

|

ಫೆಬ್ರವರಿ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತಕ್ಕೆ ಬಂದಿಳಿಯುವ ಮೊದಲೇ ವಾಣಿಜ್ಯ ಸಚಿವಾಲಯವು ಮಾಹಿತಿ ಹೊರಹಾಕಿದ್ದು ಚೀನಾಗಿಂತಲೂ ಅಮೆರಿಕಾವೇ ಉನ್ನತ ಪಾಲುದಾರನಾಗಿದೆ.

 

ಉಭಯ ದೇಶಗಳ ನಡುವೆ ಹೆಚ್ಚಿನ ಆರ್ಥಿಕ ಸಂಬಂಧಗಳು ಅಮೆರಿಕಾ ದೇಶವು ಚೀನಾವನ್ನು ಹಿಂದಿಕ್ಕಲು ಸಾಧ್ಯವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ 2018-19ರಲ್ಲಿ ಅಮೆರಿಕಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 87.95 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 6 ಲಕ್ಷದ 32 ಸಾವಿರ ಕೋಟಿ) ಆಗಿತ್ತು.

 
ಭಾರತದೊಂದಿಗೆ ವ್ಯಾಪಾರ ಪಾಲುದಾರಿಕೆಯಲ್ಲಿ ಚೀನಾವನ್ನ ಹಿಂದಿಕ್ಕಿದ US

ಇದೇ ಅವಧಿಯಲ್ಲಿ ಭಾರತ ಚೀನಾದೊಂದಿಗೆ ದ್ವಿಪಕ್ಷೀಯ ವಾಣಿಜ್ಯ ವ್ಯಾಪಾರವು ಒಟ್ಟು 87.07 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 6 ಲಕ್ಷದ 25 ಸಾವಿರ ಕೋಟಿ)ಆಗಿತ್ತು

ಅಂತೆಯೇ, 2019-20ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ, ಅಮೆರಿಕಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 68 ಬಿಲಿಯನ್ ಡಾಲರ್ ಆಗಿತ್ತು. ಇದೇ ಅವಧಿಯಲ್ಲಿ ಇದು ಚೀನಾದೊಂದಿಗೆ 64.96 ಬಿಲಿಯನ್ ಆಗಿತ್ತು.

ಫೆಬ್ರವರಿ 24ರಂದು ಭಾರತಕ್ಕೆ ಟ್ರಂಪ್ ಭೇಟಿ ಬಳಿಕ ಉಭಯ ರಾಷ್ಟ್ರಗಳ ಆರ್ಥಿಕ ಸಂಬಂಧಗಳು ಮತ್ತಷ್ಟು ಉತ್ತಮವಾಗುವ ನಿರೀಕ್ಷೆಗಳಿದ್ದು ಈ ಪ್ರವೃತ್ತಿ ಮುಂದುವರಿಯುತ್ತದೆ ಎಂದು ವ್ಯಾಪಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary

US Surpasses China To Become India's Top Trading Partner

The US has surpassed China to become India's top trading partner, showing greater economic ties between the two countries.
Story first published: Sunday, February 23, 2020, 13:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X