ಮ್ಯೂಚುವಲ್ ಫಂಡ್ ಮ್ಯಾನೇಜರ್ UTI ಅಸೆಟ್ ಮ್ಯಾನೇಜ್ ಮೆಂಟ್ ಕಂಪೆನಿ ಲಿಮಿಟೆಡ್ (UTI AMC) 3000 ಕೋಟಿ ರುಪಾಯಿ ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ) ಯೋಜನೆ ಮಾಡಿದೆ. ಸೆಪ್ಟೆಂಬರ್ 14ನೇ ತಾರೀಕಿನ ವಾರದಲ್ಲಿ ಐಪಿಒ ಆರಂಭಿಸಲಿದೆ. ನಿರ್ದಿಷ್ಟವಾಗಿ ಐಪಿಒ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಲಾಗಿದೆ.
ಈ ಕಂಪೆನಿಯಲ್ಲಿ ಎಲ್ ಐಸಿ, ಎಸ್ ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾ ಪ್ರಮುಖವಾದ ಷೇರಿನ ಪಾಲು ಹೊಂದಿವೆ. ಸೆಬಿ ನಿಯಮಾವಳಿ ಪ್ರಕಾರ, ಈ ವರ್ಷದ ಡಿಸೆಂಬರ್ ಹೊತ್ತಿಗೆ ಷೇರಿನ ಪಾಲನ್ನು 10%ಗೆ ಇಳಿಕೆ ಮಾಡಬೇಕು. ಕಳೆದ ವರ್ಷ ಡಿಸೆಂಬರ್ ನಲ್ಲೇ ಈ ಬಗ್ಗೆ ಆದೇಶ ಹೊರಡಿಸಿ, ಒಂದು ವೇಳೆ 2020ರ ಡಿಸೆಂಬರ್ ನೊಳಗೆ ಷೇರಿನ ಪ್ರಮಾಣ ಇಳಿಸದಿದ್ದಲ್ಲಿ ಹೆಚ್ಚುವರಿ ಮತದಾನದ ಹಕ್ಕನ್ನು ಸ್ಥಗಿತ ಮಾಡುವುದಾಗಿ ತಿಳಿಸಲಾಗಿತ್ತು.
ಎರಡು ಹಂತದಲ್ಲಿ ಬಂಡವಾಳ ಹಿಂತೆಗೆತ
ಎಲ್ ಐಸಿ, ಎಸ್ ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾದಿಂದ ಎರಡು ಹಂತದಲ್ಲಿ ಬಂಡವಾಳ ಹಿಂತೆಗೆದುಕೊಳ್ಳಬೇಕಿತ್ತು. ಎಲ್ಲ ಸಾಂಸ್ಥಿಕ ಷೇರುದಾರರಿಂದ ಪ್ರೋ ರೇಟಾ ಆಧಾರದಲ್ಲಿ 25% ಹಿಂತೆಗೆತ ಹಾಗೂ ಆ ನಂತರ 10.92% ಫಾಲೋ ಆನ್ ಪಬ್ಲಿಕ್ ಆಫರ್ ಮೂಲಕ ಮಾಡಬೇಕಿತ್ತು.
ಟಿ ರೋವ್ ಪ್ರಮುಖ ಷೇರುದಾರ
ಮೊದಲ ಹಂತದಲ್ಲಿ ಮೂರು ಮುಖ್ಯ ಸಂಸ್ಥೆಗಳು ತಲಾ 8.25% ಪಾಲನ್ನು ಮಾರಾಟ ಮಾಡುತ್ತದೆ. ಟಿ ರೋವ್ ಪ್ರೈಸ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಲಾ 3% ಮಾರುತ್ತವೆ. ಅದರಲ್ಲಿ ಟಿ ರೋವ್ ಪ್ರಮುಖ ಷೇರುದಾರ ಆಗಿದ್ದು, UTI AMCಯಲ್ಲಿ 26% ಷೇರಿನ ಪಾಲು ಹೊಂದಿದೆ. ಇನ್ನು ಪಿಎನ್ ಬಿ 18.24% ಪಾಲು ಹೊಂದಿದೆ.
10%ಗಿಂತ ಹೆಚ್ಚಿನ ಪಾಲನ್ನು ಹೊಂದಿರುವಂತಿಲ್ಲ
ಮೂರು ಸಾರ್ವಜನಿಕ ಸ್ವಾಮ್ಯದ ಹಣಕಾಸು ಸಂಸ್ಥೆಗಳು ತಲಾ 18.24% ಪಾಲನ್ನು ಹೊಂದಿವೆ. ಸೆಬಿ ನಿಯಮಾವಳಿ ಪ್ರಕಾರ, ಒಂದು ಸಂಸ್ಥೆಯು ಮತ್ತೊಂದು ಸಂಸ್ಥೆಯ ಮ್ಯೂಚುವಲ್ ಫಂಡ್ ನಲ್ಲಿ 10%ಗಿಂತ ಹೆಚ್ಚಿನ ಪಾಲನ್ನು ಹೊಂದಿರುವಂತಿಲ್ಲ. UTI AMCಯಲ್ಲಿ ಷೇರಿನ ಪಾಲನ್ನು ಇಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ ಐಸಿ ಹಾಗೂ ಬ್ಯಾಂಕ್ ಆಫ್ ಬರೋಡಾಗೆ ಸೆಬಿಯಿಂದ ತಲಾ 10 ಲಕ್ಷ ರುಪಾಯಿ ದಂಡ ವಿಧಿಸಲಾಯಿತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications