For Quick Alerts
ALLOW NOTIFICATIONS  
For Daily Alerts

ವಾಹನಗಳ ದಾಖಲೆ ವ್ಯಾಲಿಡಿಟಿ ಡಿಸೆಂಬರ್ 31, 2020ರ ತನಕ ವಿಸ್ತರಣೆ

By ಅನಿಲ್ ಆಚಾರ್
|

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈಗ ಮಾನ್ಯತೆ ಮುಗಿಯಲಿರುವ ಡ್ರೈವಿಂಗ್ ಲೈಸೆನ್ಸ್ (ಚಾಲನೆ ಪರವಾನಗಿ) ಹಾಗೂ ಮೋಟಾರು ವಾಹನ ದಾಖಲೆಗಳನ್ನು ಡಿಸೆಂಬರ್ 31ನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ (ಆಗಸ್ಟ್ 24, 2020) ತಿಳಿಸಿದೆ.

 

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಈ ಕುರಿತು ತೀರ್ಮಾನ ಮಾಡಿದೆ. ವ್ಯಾಲಿಡಿಟಿ ಆಫ್ ಫಿಟ್ ನೆಸ್, ಲೈಸೆನ್ಸ್, ರಿಜಿಸ್ಟ್ರೇಷನ್ ಅಥವಾ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮ 1989ರ ಅಡಿಯಲ್ಲಿ ಬರುವ ಇತರ ಎಲ್ಲ ದಾಖಲೆಗಳ ಮಾನ್ಯತೆಯನ್ನು ಡಿಸೆಂಬರ್ 31, 2020ರ ತನಕ ವಿಸ್ತರಿಸಲಾಗಿದೆ.

 

20ರಿಂದ 25 ಪರ್ಸೆಂಟ್ ಸಾಗಣೆ ವೆಚ್ಚ ಹೆಚ್ಚಳಕ್ಕೆ ನೀ ಕೊಡೆ- ನಾ ಬಿಡೆ20ರಿಂದ 25 ಪರ್ಸೆಂಟ್ ಸಾಗಣೆ ವೆಚ್ಚ ಹೆಚ್ಚಳಕ್ಕೆ ನೀ ಕೊಡೆ- ನಾ ಬಿಡೆ

ಎಲ್ಲ ಬಗೆಯ ಪರ್ಮಿಟ್, ವ್ಯಾಲಿಡಿಟಿ ಆಫ್ ಫಿಟ್ ನೆಸ್, ಲೈಸೆನ್ಸ್ ಹಾಗೂ ನೋಂದಣಿ ಮತ್ತಿತರ ದಾಖಲೆಗಳನ್ನು ಈ ವರ್ಷದ ಕೊನೆ ತನಕ ಮಾನ್ಯತೆ ಇರುವುದಾಗಿಯೇ ಪರಿಗಣಿಸಬೇಕು. ಈ ವರ್ಷದ ಫೆಬ್ರವರಿ 1ರಿಂದ ಡಿಸೆಂಬರ್ 31ರ ತನಕ ಮಾನ್ಯತೆ ಇರುವ ಯಾವುದೇ ದಾಖಲೆಯನ್ನು ಈ ವರ್ಷದ ಕೊನೆ ತನಕವೂ ಮಾನ್ಯ ಮಾಡಲೇಬೇಕು ಎಂದು ತಿಳಿಸಲಾಗಿದೆ.

ವಾಹನಗಳ ದಾಖಲೆ ವ್ಯಾಲಿಡಿಟಿ ಡಿಸೆಂಬರ್ 31, 2020ರ ತನಕ ವಿಸ್ತರಣೆ

ಕೊರೊನಾವನ್ನು ನಿಯಂತ್ರಿಸಬೇಕು ಎಂಬ ಕಾರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆ ವೇಳೆ ಮೋಟಾರು ವಾಹನಕ್ಕೆ ಸಂಬಂಧಿಸಿದ ದಾಖಲೆಗಳ ಮಾನ್ಯತೆ (ವ್ಯಾಲಿಡಿಟಿ) ನವೀಕರಣಕ್ಕೆ (ರಿನೀವಲ್) ಅವಕಾಶ ವಿಸ್ತರಿಸುತ್ತಾ ಬರಲಾಯಿತು. ಅದೀಗ ಡಿಸೆಂಬರ್ 31, 2020ಕ್ಕೆ ಬಂದು ಮುಟ್ಟಿದೆ.

English summary

Vehicles Document Validity Extended Till December 31, 2020

Due to corona crisis central government extended vehicles document validity till December 31, 2020. What are the documents comes under this? Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X