For Quick Alerts
ALLOW NOTIFICATIONS  
For Daily Alerts

ಮೊಬೈಲ್ ರೀಚಾರ್ಜ್ ಮೇಲೆ ಆರೋಗ್ಯ ವಿಮೆ, ಇದು ವಿ-ಬಿರ್ಲಾ ಕೊಡುಗೆ

|

ಹಠಾತ್ತನೆ ಎದುರಾಗುವ ಆಸ್ಪತ್ರೆ ವೆಚ್ಚ ಭರಿಸಲು 'ವಿಐ' ಗ್ರಾಹಕರಿಗೆ ಸರಳವಾದ ಪರಿಹಾರ ಒದಗಿಸಲಿದೆ. ಭಾರತದ ಪ್ರಮುಖ ದೂರಸಂಪರ್ಕ ಕಂಪನಿಯಾಗಿರುವ ವಿಐ (Vi), ಹಾಗೂ ಆದಿತ್ಯ ಬಿರ್ಲಾ ಹೆಲ್ತ್ ಇನ್ಸುರೆನ್ಸ್ (ಎಬಿಎಚ್‍ಐ) ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ 'ವಿಐ ಹಾಸ್ಪಿಕೇರ್' ಕೊಡುಗೆ ಆರಂಭಿಸಿದೆ.

ರಾಷ್ಟ್ರೀಯ ಸಮೀಕ್ಷಾ ವರದಿಯೊಂದರ ಪ್ರಕಾರ (2020ರ ಜುಲೈನಲ್ಲಿ ಪ್ರಕಟ), ಭಾರತದಲ್ಲಿ ಕೇವಲ ಶೇ 14ರಷ್ಟು ಗ್ರಾಮೀಣ ಜನಸಂಖ್ಯೆ ಮತ್ತು ಶೇ 19ರಷ್ಟು ನಗರ ಪ್ರದೇಶದ ಜನಸಂಖ್ಯೆಯು ಆರೋಗ್ಯ ವಿಮೆ ಪರಿಹಾರ ಯೋಜನೆ ವ್ಯಾಪ್ತಿಗೆ ಒಳಪಟ್ಟಿದೆ. ಆರೋಗ್ಯ ವಿಮೆ ಬಗ್ಗೆ ಕಡಿಮೆ ತಿಳಿವಳಿಕೆ ಇರುವುದು ಮತ್ತು ವೈದ್ಯಕೀಯ ವೆಚ್ಚ ದುಬಾರಿಯಾಗಿರುವುದು, ನಮ್ಮ ಜನರ ಕಿಸೆಗೆ ಹೆಚ್ಚಿನ ಹೊರೆ ಬೀಳುವಂತೆ ಮಾಡಿದೆ.

 

ಈ 'ವಿಐ ಹಾಸ್ಪಿಕೇರ್'ನ ವಿಶಿಷ್ಟ ಕೊಡುಗೆಯು ಪ್ರಿಪೇಯ್ಡ್ ಗ್ರಾಹಕರಿಗೆ ಆಸ್ಪತ್ರೆ ವೆಚ್ಚದ ವಿಮೆ ಪರಿಹಾರ ಒದಗಿಸಲಿದೆ. 'ವಿಐ' ಗ್ರಾಹಕರು 24 ಗಂಟೆಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದರೆ ರೂ 1,000ದವರೆಗೆ ಸ್ಥಿರ ಮೊತ್ತದ ಪರಿಹಾರ ಮತ್ತು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆಗೆ ರೂ 2,000 ಪರಿಹಾರವನ್ನು ವಿಮೆ ಕಂಪನಿ 'ಎಬಿಎಚ್‍ಐ'ನಿಂದ ಪಡೆಯಲಿದ್ದಾರೆ. ಈ ವಿಮೆ ಪರಿಹಾರವು ಕೋವಿಡ್-19 ಅಥವಾ ಈ ಮೊದಲಿನ ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವುದಕ್ಕೂ ಅನ್ವಯಿಸುತ್ತದೆ.

ಮೊಬೈಲ್ ರೀಚಾರ್ಜ್ ಮೇಲೆ ಆರೋಗ್ಯ ವಿಮೆ, ಇದು ವಿ-ಬಿರ್ಲಾ ಕೊಡುಗೆ

'ವಿಐ ಹಾಸ್ಪಿಕೇರ್' ಒಳಗೊಂಡಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯ ಪ್ರೀ-ಪೇಯ್ಡ್ ಗ್ರಾಹಕರು ಎರಡು ವಿಭಿನ್ನ ಬೆಲೆಯ ಕೈಗೆಟುಕುವ ರೀಚಾರ್ಜ್‍ಗಳಾದ ರೂ 51 ಮತ್ತು ರೂ 301ರ ಜತೆಗೆ ಪಡೆಯಬಹುದು. ತೀವ್ರ ನಿಗಾ ಘಟಕದ (ಐಸಿಯು) ಚಿಕಿತ್ಸೆ ಸಂದರ್ಭದಲ್ಲಿ ಗ್ರಾಹಕರು ಪ್ರತಿ ದಿನ ಎರಡು ಪಟ್ಟು ವಿಮೆ ಪರಿಹಾರ ಮೊತ್ತವಾಗಿರುವ ರೂ 2,000 ಪಡೆಯುವರು

ಹಾಸ್ಪಿಕೇರ್ ವಿಮೆ ಸೌಲಭ್ಯ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ 'ವಿಐ'ನ ಸಿಎಂಒ ಅವನೀಶ್ ಖೋಸ್ಲಾ ಅವರು, 'ನಮ್ಮ ಗ್ರಾಹಕರ ಪ್ರಗತಿಗಾಗಿ ಅವರನ್ನು ಸಬಲರನ್ನಾಗಿಸಲು 'ವಿಐ'ನಲ್ಲಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಭಾರತದ 100 ಕೋಟಿ ಮೊಬೈಲ್ ಬಳಕೆದಾರರ ಉತ್ತಮ ಭವಿಷ್ಯಕ್ಕಾಗಿ ಅನನ್ಯ ಮತ್ತು ಅಗ್ಗದ ಪರಿಹಾರಗಳನ್ನು ಒದಗಿಸಲು ನಾವು ಗಮನ ಕೇಂದ್ರೀಕರಿಸಿದ್ದೇವೆ. ನಮ್ಮ ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿಯಾದ, ಮೌಲ್ಯವರ್ಧಿತ ಪರಿಹಾರ ಒದಗಿಸುವ ದಿಸೆಯಲ್ಲಿ ಆದಿತ್ಯ ಬಿರ್ಲಾ ಹೆಲ್ತ್ ಇನ್ಶುರನ್ಸ್ ಸಹಯೋಗದಲ್ಲಿ 'ವಿಐ ಹಾಸ್ಪಿಕೇರ್' ಸೌಲಭ್ಯ ಪರಿಚಯಿಸಿರುವುದು ನಮ್ಮ ಇನ್ನೊಂದು ಹೊಸ ಪ್ರಯತ್ನವಾಗಿದೆ. 'ವಿಐ'ನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮ ಬಳಕೆದಾರರು ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಒದಗಿದಾಗ ಅವರ ಮೇಲಿನ ಹೆಚ್ಚುವರಿ ಹಣಕಾಸಿನ ಹೊರೆಯನ್ನು ತಗ್ಗಿಸಲು ನಾವು ಈ ಪಾಲುದಾರಿಕೆಯೊಂದಿಗೆ ಈ ಮಹತ್ವದ ಹೆಜ್ಜೆ ಇರಿಸಿದ್ದೇವೆ. ಅತ್ಯಂತ ಸರಳ, ಮರೆಮಾಚುವ ವೆಚ್ಚಗಳಿಲ್ಲದ, ಸಮರ್ಥ ಪ್ರಯೋಜನಗಳ ಈ ಕೊಡುಗೆಯು ಸಮಾಜದ ವಿವಿಧ ಹಂತಗಳಲ್ಲಿನ ನಮ್ಮ ಪ್ರಿಪೇಯ್ಡ್ ಗ್ರಾಹಕರಿಗೆ ಅಪಾರ ಬಗೆಯಲ್ಲಿ ಪ್ರಯೋಜನಕಾರಿಯಾಗುವ ಬಗ್ಗೆ ನನಗೆ ಖಾತರಿ ಇದೆ' ಎಂದು ಹೇಳಿದ್ದಾರೆ.

ಮೊಬೈಲ್ ರೀಚಾರ್ಜ್ ಮೇಲೆ ಆರೋಗ್ಯ ವಿಮೆ, ಇದು ವಿ-ಬಿರ್ಲಾ ಕೊಡುಗೆ

 

ಎಬಿಎಚ್‍ಐ ಆರೋಗ್ಯ ವಿಮೆ ಸೌಲಭ್ಯವು ನೋಂದಾಯಿತ ಸರ್ಕಾರಿ ಆಸ್ಪತ್ರೆಗಳು, ಆಲೋಪಥಿ , ಆಯುಷ್ ಆಸ್ಪತ್ರೆಗಳು ಒಳಗೊಂಡಂತೆ ಎಲ್ಲ ಬಗೆಯ ಆಸ್ಪತ್ರೆಗಳಿಗೆ ಅನ್ವಯವಾಗಲಿದೆ. ಕ್ಲೇಮ್ ಪಡೆಯುವುದನ್ನು ಸರಳಗೊಳಿಸಲಾಗಿದೆ. 'ವಿಐ' ಗ್ರಾಹಕರು ಡಿಸ್‍ಚಾರ್ಜ್ ಸರ್ಟಿಫಿಕೇಟ್ ಮತ್ತು ಪ್ರಾಥಮಿಕ ಪರಿಶೀಲನೆಯ ಸ್ಕ್ಯಾನ್ ಪ್ರತಿಯನ್ನಷ್ಟೇ ತೋರಿಸಿ ಕ್ಲೇಮ್ ಪಡೆದುಕೊಳ್ಳಬಹುದು.

English summary

Vi partners with Aditya Birla Health Insurance to offer Health Insurance benefit on Mobile Recharges

Vi and Aditya Birla Health Insurance to offer Rs. 1,000 worth of hospitalization expenses per day on medical exigencies incl Covid, and Rs. 2,000/Day on ICU expenses, to Vi users who subscribe to these plans.
Company Search
COVID-19