For Quick Alerts
ALLOW NOTIFICATIONS  
For Daily Alerts

ನಾವು ದರ ಹೆಚ್ಚಿಸುತ್ತೇವೆ, ಉಳಿದವರು ಅನುಸರಿಸುತ್ತಾರೆ: ವೊಡಾಫೋನ್ ಐಡಿಯಾ

|

ನವದೆಹಲಿ, ಅಕ್ಟೋಬರ್ 31: ದೇಶದ ಮೂರು ಮುಂಚೂಣಿ ಖಾಸಗಿ ದೂರಸಂಪರ್ಕ ಸೇವಾ ಸಂಸ್ಥೆಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ಶೀಘ್ರದಲ್ಲಿಯೇ ತನ್ನ ಧ್ವನಿ ಮತ್ತು ಡೇಟಾ ಸೌಲಭ್ಯಗಳ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ.

 

ದೂರಸಂಪರ್ಕ ಸಂಸ್ಥೆಯು ಬೆಲೆ ಏರಿಕೆ ಮಾಡುವುದಕ್ಕೆ ಹಿಂಜರಿಯುವುದಿಲ್ಲ. ಈ ಮೂಲಕ ಇತರೆ ಸಂಸ್ಥೆಗಳು ಅನುಸರಿಸುವಂತಹ ವೇದಿಕೆ ಸೃಷ್ಟಿಸಲಿದ್ದೇವೆ ಎಂದು ವೊಡಾಫೋನ್ ಐಡಿಯಾದ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ರವೀಂದರ್ ಠಕ್ಕರ್ ಹೇಳಿದ್ದಾರೆ.

ಪ್ರಸ್ತುತ ವಿಧಿಸಲಾಗುತ್ತಿರುವ ಧ್ವನಿ ಮತ್ತು ಡೇಟಾ ಸೇವೆಗಳ ದರದಿಂದ ದೂರಸಂಪರ್ಕ ಸಂಸ್ಥೆಗಳು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಕರವಾಗಲಿದೆ. ಅಲ್ಪಾವಧಿಯಲ್ಲಿ ಪ್ರತಿ ಬಳಕೆದಾರನಿಂದ ಸರಾಸರಿ ಆದಾಯವು (ಎಆರ್‌ಪಿಯು) 200 ರೂ. ಇರುವ ಅಗತ್ಯವಿದೆ. ಅಂತಿಮವಾಗಿ 300 ರೂ ಆದಾಯ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ದರ ಹೆಚ್ಚಿಸಲು ಮುಂದಾದ ವೊಡಾಫೋನ್ ಐಡಿಯಾ

'ಹಾಲಿ ಇರುವ ದರಗಳನ್ನು ನೋಡಿದರೆ ಅದರಲ್ಲಿ ಏನೋ ಸಮಸ್ಯೆ ಇದೆ. ದರ ಏರಿಕೆ ಮಾಡಲು ನಾವು ಹಿಂಜರಿಯುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದೇವೆ. ಹಾಗೆ ದರ ಏರಿಸುವ ಮೊದಲಿಗರಾಗಲು ಸಂತೋಷ ಪಡುತ್ತೇವೆ. ಉದ್ಯಮದ ಇತರರೂ ನಮ್ಮನ್ನು ಅನುಸರಿಸಲಿದ್ದಾರೆ ಎಂದು ಭರವಸೆ ಹೊಂದಿದ್ದೇವೆ' ಎಂದು ಹೇಳಿದ್ದಾರೆ.

ದೇಶದಲ್ಲಿ ಖಾಸಗಿ ದೂರಸಂಪರ್ಕ ಸೇವೆಗಳ ಕರೆ ಮತ್ತು ದತ್ತಾಂಶ ದರಗಳನ್ನು 2019ರ ಡಿಸೆಂಬರ್‌ನಲ್ಲಿ ಏರಿಸಲಾಗಿತ್ತು. ಹಾಲಿ ಇರುವ ಕರೆ ಮತ್ತು ಡೇಟಾ ಸೇವೆಗಳ ದರದಿಂದ ಕಂಪೆನಿಗಳು ಉಳಿಯುವುದು ಕಷ್ಟಕರ ಎಂದು ಭಾರ್ತಿ ಏರ್‌ಟೆಲ್ ಸಿಇಒ ಗೋಪಾಲ್ ವಿಠ್ಠಲ್ ಸಹ ಹೇಳಿದ್ದರು.

ವೊಡಾಫೋನ್ ಗ್ರೂಪ್ ಕಂಪೆನಿಯು ಬಾಕಿ ಇರುವ ಹೊಂದಾಣಿಕೆಯ ಒಟ್ಟು ಆದಾಯದ (ಎಜಿಆರ್) 6,400 ಕೋಟಿ ರೂ ಮೊತ್ತವನ್ನು ಪಾವತಿಸಬೇಕಿದ್ದು, ಅದಕ್ಕೆ ಅನುಗುಣವಾಗಿ ದರ ಹೆಚ್ಚಳ ಅಗತ್ಯವಾಗಿದೆ ಎಂದು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಅಕ್ಷಯ ಮೂಂದ್ರಾ ತಿಳಿಸಿದ್ದಾರೆ.

English summary

Vodafone Idea CEO Ravinder Takkar Says Will Not Shy Away From Raising Tariff

Vodafone Idea CEO Ravinder Takkar says will not shy away from raising tariff, we hope others will follow.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X