ವೊಡಾಫೋನ್ ಐಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ವಿಶಾಂತ್ ವೋರಾ ರಾಜೀನಾಮೆ
ವೊಡಾಫೋನ್ ಐಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ (ಚೀಫ್ ಟೆಕ್ನಾಲಜಿ ಅಧಿಕಾರಿ- ಸಿಟಿಒ) ವಿಶಾಂತ್ ವೋರಾ ರಾಜೀನಾಮೆ ನೀಡಿದ್ದಾರೆ ಎಂದು ಟೆಲಿಕಾಂ ಕಂಪೆನಿ ಬುಧವಾರ ಖಾತ್ರಿಪಡಿಸಿದೆ. ವೊರಾ ಯುಎಸ್ ಗೆ ಹಿಂತಿರುಗಲು ನಿರ್ಧರಿಸಿದ್ದಾರೆ ಎಂದು ಇ ಮೇಲ್ ನಲ್ಲಿ ಕೇಳಲಾದ ಪ್ರಶ್ನೆಗೆ ಕಂಪೆನಿಯಿಂದ ಉತ್ತರಿಸಲಾಗಿದೆ.
"ವಿಐಎಲ್ ಈಚೆಗೆ ವಿಶ್ವದ ಅತಿ ದೊಡ್ಡ ನೆಟ್ ವರ್ಕ್ ಒಗ್ಗೂಡಿಸುವ ಕಾರ್ಯ ಪೂರ್ಣವಾಗಿದೆ. ಭವಿಷ್ಯದ 5G ನೆಟ್ ವರ್ಕ್ ಗೆ ಸಿದ್ಧವಾಗಿದೆ. ಎರಡೂ ಒಗ್ಗೂಡಿದ ನಂತರ, ವಿವಿಧ ಥರ್ಡ್ ಪಾರ್ಟಿ ಸಂಸ್ಥೆಗಳ ಪ್ರಕಾರ, Vi GIGAnet ಈಗ ಅತ್ಯಂತ ವೇಗವಾದ 4G ನೆಟ್ ವರ್ಕ್ ಎನಿಸಿಕೊಂಡಿದೆ," ಎಂದು ಕಂಪೆನಿ ಹೇಳಿದೆ.
ಭಾರತದ ವಿರುದ್ಧ 20 ಸಾವಿರ ಕೋಟಿಯ ಮಧ್ಯಸ್ಥಿಕೆ ಪ್ರಕರಣ ಗೆದ್ದ ವೊಡಾಫೋನ್
ಸಿಟಿಒ ಆಗಿ ವೊರಾ ಕಳೆದ ಎರಡು ವರ್ಷಗಳಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದಾರೆ ಎಂದು ಕಂಪೆನಿ ಹೇಳಿದೆ. "ಅವರು ಈಗ ಯುಎಸ್ ನಲ್ಲಿನ ಮನೆಗೆ ಹಿಂತಿರುಗಲು ನಿರ್ಧರಿಸಿದ್ದಾರೆ. ಅವರ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸುತ್ತೇವೆ," ಎಂಬುದಾಗಿ ಕಂಪೆನಿ ಸೇರಿಸಿದೆ.
ವೊಡಾಫೋನ್ ಐಡಿಯಾದಿಂದ ಸೆಕ್ಯೂರಿಟೀಸ್ ವಿತರಣೆ ಮೂಲಕ 15,000 ಕೋಟಿ ಸಂಗ್ರಹ ಮಾಡುವುದು ಸೇರಿದಂತೆ ವಿವಿಧ ಪ್ರಸ್ತಾವಕ್ಕೆ ಈಚೆಗೆ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ.