For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್‌ಗಳಲ್ಲಿ ಅದೆಷ್ಟು ವಿಧ?

By Lekhaka
|

ಮ್ಯೂಚುವಲ್ ಫಂಡ್‌ ಅಂದಾಕ್ಷಣ ಅದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಸಾಧನ ಎಂದಷ್ಟೇ ತಿಳಿದ ಹಲವರು ಹೆದರಿ ಹೌಹಾರುತ್ತಾರೆ. ಮ್ಯೂಚುವಲ್ ಫಂಡ್‌ಗಳ ಮೂಲ ಸಿದ್ಧಾಂತ ಒಂದೇ ಆದರೂ ಅದರಲ್ಲಿ ಹೂಡಿಕೆದಾರರ ಅಗತ್ಯ ಮತ್ತು ಆಸಕ್ತಿಗೆ ತಕ್ಕಂತೆ ಹಲವರು ರೀತಿಯ ಫಂಡ್‌ಗಳು ಲಭ್ಯ. ಹೂಡಿಕೆಯನ್ನು ಆಧಾರವಾಗಿಟ್ಟುಕೊಂಡು, ಮ್ಯೂಚುವಲ್ ಫಂಡ್‌ಗಳ ವೈಶಿಷ್ಟ್ಯ ಪರಿಚಯಿಸುವ ಪ್ರಯತ್ನ ಇಲ್ಲಿದೆ.

ವ್ಯಕ್ತಿಯೊಬ್ಬರ ಪೋರ್ಟೊಫೋಲಿಯೊದಲ್ಲಿ ವೈವಿಧ್ಯತೆ ತರಲು ಮ್ಯೂಚುವಲ್ ಫಂಡ್‌ ಅತಿ ಸುಲಭದ, ಬೇಕಾದಂತೆ ರೂಪಿಸಿಕೊಳ್ಳಲು ಅವಕಾವವಿರುವ ಅತ್ಯುತ್ತಮ ಸಾಧನ. ಹೂಡಿಕೆದಾರರ ವಯಸ್ಸು, ಅಗತ್ಯ ಮತ್ತು ಆದಾಯದ ಪ್ರಮಾಣಕ್ಕೆ ತಕ್ಕಂತೆ ಪೋರ್ಟ್‌ಫೋಲಿಯೊ ರೂಪಿಸಿಕೊಳ್ಳಲು ಸಾಕಷ್ಟು ಆಯ್ಕೆಗಳಿವೆ. ಮ್ಯೂಚುವಲ್‌ಗಳ ವೈವಿಧ್ಯತೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮುಂದಿನ ಪ್ರಯತ್ನದಲ್ಲಿದೆ.

ಐದು ಮೂಲಸೂತ್ರಗಳು

ಐದು ಮೂಲಸೂತ್ರಗಳು

ಮಾರುಕಟ್ಟೆಯಲ್ಲಿ ಲಭ್ಯವಿರುವ ನೂರಾರು ಮ್ಯೂಚುವಲ್ ಫಂಡ್‌ಗಳನ್ನು ಅವುಗಳ ಹೂಡಿಕೆ ವಿಧಾನಕ್ಕೆ ತಕ್ಕಂತೆ ಈಕ್ವಿಟಿ, ಡೆಟ್ ಮತ್ತು ಹೈಬ್ರಿಡ್ ಎಂದು ಮೂರು ರೀತಿಯಲ್ಲಿ ವಿಂಗಡಿಸುತ್ತಾರೆ. ಈ ಮೂರು ವಿಧದ ಫಂಡ್‌ಗಳಲ್ಲಿ ಹೂಡಿಕೆಯ ಅವಕಾಶಕ್ಕೆ ತಕ್ಕಂತೆ ಓಪನ್ ಎಂಡೆಡ್ ಮತ್ತು ಕ್ಲೋಸ್‌ ಎಂಡೆಡ್ ಎಂಬ ಎರಡು ವಿಧಗಳಿವೆ. ಎಲ್ಲ ಮ್ಯೂಚುವಲ್ ಫಂಡ್‌ಗಳು ಈ ಐದು ಪರಿಕಲ್ಪನೆಯ ವ್ಯಾಪ್ತಿಯೊಳಗೇ ಬರುತ್ತವೆ.

ಓಪನ್ ಎಂಡೆಡ್ ಫಂಡ್:

ಓಪನ್ ಎಂಡೆಡ್ ಫಂಡ್:

ನಮ್ಮ ದೇಶದ ಬಹುತೇಕ ಫಂಡ್‌ಗಳು ಓಪನ್ ಎಂಡೆಂಡ್‌ ಫಂಡ್‌ಗಳೇ ಆಗಿರುವುದು ಗಮನಾರ್ಹ ಸಂಗತಿ. ಇಂಥ ಫಂಡ್‌ಗಳು ಹೂಡಿಕೆಗೆ ಸದಾ ಮುಕ್ತವಾಗಿರುತ್ತವೆ. ಯೂನಿಟ್‌ಗಳನ್ನು ಖರೀದಿಸಲು (ಹೂಡಿಕೆ ಮಾಡಲು) ಮತ್ತು ಮಾರಲು (ನಗದೀಕರಿಸಲು) ಮುಕ್ತ ಅವಕಾಶವಿರುತ್ತವೆ. ನಿಯಮಗಳಿಗೆ ತಕ್ಕಂತೆ, ನಿರ್ದಿಷ್ಟ ದಿನಕ್ಕೆ ಮೊದಲೇ ಯೂನಿಟ್‌ಗಳನ್ನು ನಗದೀಕರಿಸಿದರೆ ಸಾಮಾನ್ಯವಾಗಿ ಎಕ್ಸಿಟ್ ಲೋಡ್ ವಿಧಿಸುತ್ತಾರೆ.

ಕ್ಲೋಸ್ ಎಂಡೆಡ್ ಫಂಡ್

ಕ್ಲೋಸ್ ಎಂಡೆಡ್ ಫಂಡ್

ಇಂಥ ಫಂಡ್‌ಗಳಿಗೆ ನಿರ್ದಿಷ್ಟ ಹೂಡಿಕೆ ಮತ್ತು ಪರಿಪಕ್ವತಾ ಅವಧಿ (ಮೆಚ್ಯುರಿಟಿ ಡೇಟ್) ಇರುತ್ತೆ. ಹೂಡಿಕೆದಾರರು ಎನ್‌ಎಫ್‌ಒ (ನ್ಯೂ ಫಂಡ್ ಆಫರ್) ಅವಧಿಯಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಮೆಚ್ಯುರಿಟಿ ಅವಧಿ ಮುಗಿದ ನಂತರ ಯೂನಿಟ್‌ಗಳನ್ನು ಫಂಡ್‌ ಹೌಸ್ ತನ್ನಿಂತಾನೆ ಖರೀದಿಸಿ, ನಗದು ಪಾವತಿಸುತ್ತದೆ.

ಈಕ್ವಿಟಿ ಫಂಡ್

ಈಕ್ವಿಟಿ ಫಂಡ್

ಜನಸಾಮಾನ್ಯರಿಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಅವಕಾಶ ಕಲ್ಪಿಸಿದ ಶ್ರೇಯ ಈಕ್ವಿಟಿ ಫಂಡ್‌ಗಳದ್ದು. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೈರಿಸ್ಕ್ ಇರುವ ಇಂಥ ಫಂಡ್‌ಗಳು ದೀರ್ಘಾವಧಿಯಲ್ಲಿ ಅತಿ ಹೆಚ್ಚು ಪ್ರತಿಫಲವನ್ನು ತಂದುಕೊಡುತ್ತದೆ. ಚಿಕ್ಕವಯಸ್ಸಿನಲ್ಲಿರುವ ಹೂಡಿಕೆದಾರರಿಗೆ ಇದು ಹೇಳಿಮಾಡಿಸಿದಂಥದ್ದು. ವಿವಿಧ ಕ್ಷೇತ್ರಗಳಲ್ಲಿ (ಸೆಕ್ಟರ್‌- ಫೈನಾನ್ಸ್‌, ಇನ್‌ಫ್ರಾಸ್ಟ್ರಕ್ಚರ್, ಟ್ರಾನ್ಸ್‌ಪೋರ್ಟ್‌, ಟೆಲಿಕಾಂ ಇತ್ಯಾದಿ) ಕಾರ್ಯನಿರ್ವಹಿಸುವ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುತ್ತದೆ.

 

ಕಾರ್ಯವೈಖರಿಗೆ ತಕ್ಕಂತೆ ಈಕ್ವಿಟಿ ಫಂಡ್‌ಗಳನ್ನು ಇನ್ನೂ ಮೂರು ವಿಧಗಳಾಗಿ ವಿಂಗಡಿಸಬಹುದು.

 

ಸೆಕ್ಟರ್‌ ಫಂಡ್‌ಗಳು

ಸೆಕ್ಟರ್‌ ಫಂಡ್‌ಗಳು

ಒಂದು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳಲ್ಲಿ ಮಾತ್ರ ಹಣ ಹೂಡಿಕೆ ಮಾಡುವ ಫಂಡ್‌ಗಳನ್ನು ಸೆಕ್ಟರ್‌ ಫಂಡ್‌ಗಳು ಎನ್ನುತ್ತಾರೆ. ಇನ್‌ಫ್ರಾಸ್ಟ್ರಕ್ಚರ್, ಬ್ಯಾಂಕಿಂಗ್, ಮೈನಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಒಂದಿಷ್ಟು ಮ್ಯೂಚುವಲ್ ಫಂಡ್‌ಗಳು ಇವೆ. ಅದರ ಜೊತೆಗೆ ಮಿಡ್‌ಕ್ಯಾಪ್ (ಮಧ್ಯಮ ಬಂಡವಾಳ ಗಾತ್ರದ ಕಂಪನಿಗಳು), ಸ್ಮಾಲ್‌ಕ್ಯಾಪ್ (ಸಣ್ಣ ಬಂಡವಾಳದ ಕಂಪನಿಗಳು) ಅಥವಾ ಲಾರ್ಜ್‌ಕ್ಯಾಪ್‌ (ದೊಡ್ಡ ಮಟ್ಟದ ಬಂಡವಾಳ ಸಂಚಯವಿರುವ ಕಂಪನಿಗಳು) ಕಂಪನಿಗಳಲ್ಲಿ ಮಾತ್ರವೇ ಹೂಡಿಕೆ ಮಾಡುವ ಫಂಡ್‌ಗಳಿವೆ. ಸೆಕ್ಟರ್‌ ಫಂಡ್‌ಗಳು ಆರ್ಥಿಕತೆಯ ಅವರ್ತ (ಎಕನಾಮಿಕ್ ಸೈಕಲ್) ಅರ್ಥ ಮಾಡಿಕೊಂಡು ಹೂಡಿಕೆ ಮಾಡಿದರೆ, ಅತ್ಯುತ್ತಮ ಪ್ರತಿಫಲಗಳನ್ನು ತಂದುಕೊಡುತ್ತವೆ.

ಇಂಡೆಕ್ಸ್‌ ಫಂಡ್‌ಗಳು

ಇಂಡೆಕ್ಸ್‌ ಫಂಡ್‌ಗಳು

ಮುಂಬೈ ಷೇರುಪೇಟೆ (ಬಿಎಸ್‌ಇ) ಅಥವಾ ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ವಿವಿಧ ಸಂವೇದಿ ಸೂಚ್ಯಂಕಗಳನ್ನು ಈ ಫಂಡ್‌ಗಳು ಚಾಚೂತಪ್ಪದೆ ಅನುಸರಿಸುತ್ತವೆ. ಇಂತ ಫಂಡ್‌ಗಳಲ್ಲಿ ಫಂಡ್‌ ಮ್ಯಾನೇಜರ್‌ ಮೇಲಿನ ಅವಲಂಬನೆ ಮತ್ತು ಫಂಡ್ ನಿರ್ವಹಣಾ ಶುಲ್ಕಗಳೂ ಅತ್ಯಂತ ಕನಿಷ್ಠ ಮಟ್ಟದಲ್ಲಿರುತ್ತೆ.

ಉದಾಹರಣೆಗೆ ನೀವು ಬಿಎಸ್‌ಇ 200 ಫಂಡ್‌ ಒಂದರಲ್ಲಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಹೂಡಿಕೆ ಮಾಡುವ ಫಂಡ್ ಅದನ್ನು ಯಥಾವತ್ತಾಗಿ ಅನುಸರಿಸುತ್ತದೆ. ಯಾವುದಾದರೂ ಒಂದು ಷೇರು ಬಿಎಸ್‌ಇಯ ಶೇ 20ರಷ್ಟು ಮೊತ್ತದಷ್ಟು ಪಾಲು ಹೊಂದಿದೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಫಂಡ್ ಸಹ ಫಂಡ್‌ ಮೊತ್ತದಲ್ಲಿ ಅಷ್ಟೇ ಪ್ರಮಾಣವನ್ನು ಹೂಡಿಕೆ ಮಾಡುತ್ತದೆ.

ಇಟಿಎಫ್‌ಗಳು (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಸಹ ಹೆಚ್ಚು ಕಡಿಮೆ ಇದೇ ವಿಧಾನದಲ್ಲಿ ಕೆಲಸ ಮಾಡುತ್ತವೆ. ಚಿನ್ನದ ಇಟಿಎಫ್‌ಗಳು ಜನಪ್ರಿಯ. ಅಲ್ಲಿ ಪ್ರತಿ ಗ್ರಾಂ ಚಿನ್ನ ಒಂದು ಯೂನಿಟ್ ಆಗಿ ಖರೀದಿ-ಮಾರಾಟವಾಗುತ್ತದೆ.

 

ಟ್ಯಾಕ್ಸ್‌ ಸೇವಿಂಗ್ ಫಂಡ್‌

ಟ್ಯಾಕ್ಸ್‌ ಸೇವಿಂಗ್ ಫಂಡ್‌

ಆದಾಯ ತೆರಿಗೆ ಕಾಯ್ದೆಯ 80 ಸಿ ವಿಧಿಯ ಅನ್ವಯ ತೆರಿಗೆ ಲಾಭ ತಂದುಕೊಡುವ ಫಂಡ್‌ಗಳಿವು. ಇಂಥ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಮೂರು ವರ್ಷ ಹಿಂಪಡೆಯಲು ಸಾಧ್ಯವಿಲ್ಲ (ಲಾಕ್ಡ್‌ ಇನ್ ಪಿರಿಯಡ್). ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಕಾರಣ ಇಂಥ ಫಂಡ್‌ಗಳನ್ನು ಈಕ್ವಿಟಿ ಲಿಂಕ್ಡ್‌ ಸೇವಿಂಗ್ ಸ್ಕೀಮ್ಸ್‌ (ಇಎಲ್‌ಎಸ್‌ಎಸ್‌) ಎಂದೂ ಕರೆಯುತ್ತಾರೆ.

 

ಇದನ್ನೊಮ್ಮೆ ಓದಿ: ಮ್ಯೂಚುವಲ್ ಫಂಡ್ ಅರ್ಥ ಮಾಡ್ಕೊಳ್ಳೋದು ಸುಲಭಇದನ್ನೊಮ್ಮೆ ಓದಿ: ಮ್ಯೂಚುವಲ್ ಫಂಡ್ ಅರ್ಥ ಮಾಡ್ಕೊಳ್ಳೋದು ಸುಲಭ

ಲಿಕ್ವಿಡ್ ಫಂಡ್‌ಗಳು ಅಥವಾ ಮನಿ ಮಾರ್ಕೆಟ್ ಫಂಡ್‌ಗಳು

ಲಿಕ್ವಿಡ್ ಫಂಡ್‌ಗಳು ಅಥವಾ ಮನಿ ಮಾರ್ಕೆಟ್ ಫಂಡ್‌ಗಳು

ಕಡಿಮೆ ಅವಧಿಯ ಸಾಲಪತ್ರಗಳ ಮೇಲೆ ಹಣ ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರಿಗೆ ಗರಿಷ್ಠ ಪ್ರಮಾಣದ ಆದಾಯ ತಂದುಕೊಡಲು ಪ್ರಯತ್ನಿಸುವ ಫಂಡ್‌ಗಳಿವು. ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದ, ಹೂಡಿಕೆಯ ಮೊತ್ತವನ್ನು ಶೀಘ್ರ ಹಿಂಪಡೆಯಬೇಕು ಎನ್ನುವವರಿಗೆ ಇವು ಉತ್ತಮ ಆಯ್ಕೆ. ಇವು ಒಂದು ರೀತಿ ನಮ್ಮ ಎಸ್‌ಬಿ ಅಕೌಂಟ್‌ಗೆ (ಸೇವಿಂಗ್ಸ್‌ ಬ್ಯಾಂಕ್) ಪರ್ಯಾಯ.

ಡೆಟ್ ಅಥವಾ ಫಿಕ್ಸಡ್‌ ಇನ್‌ಕಮ್ ಫಂಡ್‌ಗಳು

ಡೆಟ್ ಅಥವಾ ಫಿಕ್ಸಡ್‌ ಇನ್‌ಕಮ್ ಫಂಡ್‌ಗಳು

ಹೂಡಿಕೆಯ ಬಹುಪಾಲು ಮೊತ್ತವನ್ನು ನಿಗದಿತ ಅವಧಿಗೆ ಪರಿಪಕ್ವಗೊಳ್ಳುವ ಬಾಂಡ್‌, ಸೆಕ್ಯುರಿಟಿ, ಡೆಬೆಂಚರ್‌, ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳಿವು. ಕಡಿಮೆ ಪ್ರತಿಫಲ ಬಂದರೂ ಸಾಕು, ರಿಸ್ಕ್ ಇರಬಾರದು ಎನ್ನುವವರಿಗೆ ಹೇಳಿ ಮಾಡಿಸಿದಂಥ ಫಂಡ್‌ಗಳಿವು.

ಬ್ಯಾಲೆನ್ಸ್‌ಡ್ ಫಂಡ್

ಬ್ಯಾಲೆನ್ಸ್‌ಡ್ ಫಂಡ್

ಹೂಡಿಕೆಯ ಮೊತ್ತವನ್ನು ಈಕ್ವಿಟಿ ಮತ್ತು ಡೆಟ್‌ ವಿಧಾನಗಳಲ್ಲಿ ಒಂದು ಅನುಪಾತ ಕಾಯ್ದುಕೊಂಡು ಹಂಚುವ ಫಂಡ್‌ಗಳಿವು. ಮಾರುಕಟ್ಟೆಯ ಏರಿಳಿತಕ್ಕೆ ತಕ್ಕಂತೆ ಹೂಡಿಕೆಯ ಅನುಪಾತದಲ್ಲಿಯೂ ವ್ಯತ್ಯಾಸವಾಗುತ್ತದೆ. ಕಡಿಮೆ ರಿಸ್ಕ್‌ ಇರಬೇಕು. ಆದರೆ ಉತ್ತಮ ಪ್ರತಿಫಲ ಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆ. ಸಾಮಾನ್ಯವಾಗಿ ಬ್ಯಾಂಕ್‌ ಎಫ್‌ಡಿಗಳಿಗಿಂತಲೂ ಉತ್ತಮ ಪ್ರತಿಫಲ ನಿರೀಕ್ಷಿಸಬಹುದು. ಆದರೆ ರಿಸ್ಕ್ ಅಂತೂ ಇದ್ದೇ ಇದೆ.

ಹೈಬ್ರಿಡ್ ಅಥವಾ ಮಂತ್ಲಿ ಇನ್‌ಕಮ್ ಪ್ಲಾನ್‌ (ಎಂಐಪಿ)

ಹೈಬ್ರಿಡ್ ಅಥವಾ ಮಂತ್ಲಿ ಇನ್‌ಕಮ್ ಪ್ಲಾನ್‌ (ಎಂಐಪಿ)

ನಿವೃತ್ತರಿಗೆ ಹೇಳಿ ಮಾಡಿಸಿದಂಥ ಫಂಡ್‌ಗಳಿವು. ಬ್ಯಾಲೆನ್‌ಸ್ಡ್‌ ಫಂಡ್‌ಗಳಿಗೆ ಹೋಲಿಸಿದರೆ ಈಕ್ವಿಟಿಯ ಹೂಡಿಕೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಹೀಗಾಗಿಯೇ ಇಂಥ ಫಂಡ್‌ಗಳನ್ನು ಮಾರ್ಜಿನಲ್ ಈಕ್ವಿಟಿ ಫಂಡ್‌ಗಳು ಎಂದೂ ಕರೆಯುತ್ತಾರೆ. ಅತ್ಯಂತ ಕಡಿಮೆ ರಿಸ್ಕ್‌ನಲ್ಲಿ ನಿಗದಿತ ಆದಾಯ ಬೇಕು ಎನ್ನುವವರಿಗೆ ಇಂಥ ಫಂಡ್‌ಗಳು ಸೂಕ್ತ.

ಗಿಲ್ಟ್ ಫಂಡ್‌ಗಳು

ಗಿಲ್ಟ್ ಫಂಡ್‌ಗಳು

ಕೇವಲ ಸರ್ಕಾರಿ ಸಾಲಪತ್ರಗಳ ಮೇಲೆ ಹೂಡಿಕೆ ಮಾಡುವ ಫಂಡ್‌ ಇದು. ರಿಸ್ಕ್ ಸ್ವಲ್ಪವೂ ಬೇಡವೇ ಬೇಡ ಎನ್ನುವಂಥವರಿಗೆ, ನಮ್ಮ ಅಸಲಿಗೆ ಎಂದೂ ಮೋಸವಾಗಬಾರದು- ಬಂದಷ್ಟು ಪ್ರತಿಫಲ ಬರಲಿ ಎಂದುಕೊಳ್ಳುವವರಿಗೆ ಇವು ಸೂಕ್ತ. ಆದರೆ ಇದರಲ್ಲಿಯೂ ಸ್ವಲ್ಪ ಮಟ್ಟಿನ ರಿಸ್ಕ್ (ಇಂಟರೆಸ್ಟ್ ರೇಟ್ ರಿಸ್ಕ್) ಇದ್ದೇ ಇದೆ.

English summary

What Are The Types Of Mutual Funds

In this article Completely explained different types of mutual funds
Story first published: Wednesday, January 15, 2020, 12:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X