For Quick Alerts
ALLOW NOTIFICATIONS  
For Daily Alerts

ಒಟ್ಟು ದೇಶೀಯ ಉತ್ಪನ್ನ ಎಂದರೇನು? ಹೇಗೆ ಲೆಕ್ಕ ಹಾಕುತ್ತಾರೆ?

|

ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಎನ್ನುವುದು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ದೇಶದ ಗಡಿಯೊಳಗೆ ಉತ್ಪಾದಿಸುವ ಎಲ್ಲಾ ಸಿದ್ದಪಡಿಸಿದ ಸರಕು ಮತ್ತು ಸೇವೆಗಳ ವಿತ್ತೀಯ ಮೌಲ್ಯವಾಗಿದೆ. ದೇಶದ ಆರ್ಥಿಕತೆಯನ್ನು ಅಳೆಯಲು ಒಟ್ಟು ದೇಶೀಯ ಉತ್ಪನ್ನವು ಉತ್ತಮ ಮಾರ್ಗವಾಗಿದೆ.

ಉತ್ಪಾದನಾ ಕಂಪನಿಗಳು, ಮಾರಾಟಗಾರರು, ಸೇವೆಯನ್ನು ಒದಗಿಸುವವರು ಹೀಗೆ ನಾನಾ ವಲಯವು ಜಿಡಿಪಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ. ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಬಹುತೇಕ ಈ ವಲಯಗಳ ಒಟ್ಟು ಉತ್ಪಾದನೆಯನ್ನು ಲೆಕ್ಕಾಚಾರ ಮಾಡುವ ಮೂಲಕ ಜಿಡಿಪಿಯನ್ನು ಅಳೆಯುತ್ತವೆ. ಜಿಡಿಪಿ ಯಾವಾಗ ಕುಸಿಯಲಾರಂಭಿಸುತ್ತದೆಯೇ ದೇಶದ ಆರ್ಥಿಕತೆ ಬೆಳವಣಿಗೆಯು ಕುಸಿಯುತ್ತಿದೆ ಎನ್ನಲಾಗುತ್ತದೆ.

ಸದ್ಯ ಜಿಡಿಪಿಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಚೀನಾ, ಮೂರನೇ ಸ್ಥಾನದಲ್ಲಿ ಜಪಾನ್, ನಾಲ್ಕನೇ ಸ್ಥಾನದಲ್ಲಿ ಜರ್ಮನಿ ಇದೆ.

ಒಟ್ಟು ದೇಶೀಯ ಉತ್ಪನ್ನ ಎಂದರೇನು? ಹೇಗೆ ಲೆಕ್ಕ ಹಾಕುತ್ತಾರೆ?

ಭಾರತದಲ್ಲಿ ಜಿಡಿಪಿ ಲೆಕ್ಕಾಚಾರ ಹೇಗೆ?

ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಅಧೀನ ಸಂಸ್ಥೆಯಾದ ಕೇಂದ್ರೀಯ ಅಂಕಿ ಅಂಶಗಳ ಕಾರ್ಯಾಲಯ (ಸಿಎಸ್ಒ) ಭಾರತದ ಜಿಡಿಪಿಯನ್ನು ಲೆಕ್ಕ ಹಾಕುವ ಕಾರ್ಯ ನಿರ್ವಹಿಸುತ್ತದೆ.
ಈ ಇಲಾಖೆ ದತ್ತಾಂಶ ಸಂಗ್ರಹ, ಅಂಕಿ ಅಂಶಗಳ ದಾಖಲೆಗಳ ಕ್ರೂಢೀಕರಣ ಮತ್ತು ನಿರ್ವಹಣೆಯ ಪ್ರಮುಖ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ತನ್ನ ಇತರೆ ಕಾರ್ಯಚಟುಟಿಕೆಗಳ ಜೊತೆಗೆ ಇದು ಕಾಲ ಕಾಲಕ್ಕೆ ಕೈಗಾರಿಕೆ ಮತ್ತು ಉದ್ಯಮಗಳ ಸಮೀಕ್ಷೆ ನಡೆಸಿ ಹಲವು ಬಗೆಯ ಸೂಚ್ಯಂಕಗಳ ಕ್ರೂಡೀಕರಣದಲ್ಲಿ ನಿರತವಾಗಿರುತ್ತದೆ.
ಕೈಗಾರಿಕಾ ಉತ್ಪನ್ನ ಸೂಚ್ಯಂಕ, ಸಗಟು ದರ ಸೂಚ್ಯಂಕ ಇತ್ಯಾದಿಗಳ ಸಹಾಯದಿಂದ ಜಿ.ಡಿ.ಪಿ ಸೇರಿದಂತೆ ಇನ್ನಿತರೆ ಅಂಕಿಅಂಶಗಳನ್ನು ಲೆಕ್ಕ ಹಾಕುತ್ತದೆ.
ಈ ಸಂಸ್ಥೆ ದೇಶದ ಎಲ್ಲಾ ರಾಜ್ಯ ಸರಕಾರಗಳ, ಕೇಂದ್ರಾಡಳಿತ ಪ್ರದೇಶಗಳ ಹಾಗು ಕೇಂದ್ರ ಸರಕಾರದ ವಿವಿಧ ಸಂಸ್ಥೆ ಮತ್ತು ಇಲಾಖೆಗಳೊಂದಿಗೆ ಸಮನ್ವಯತೆ ಬೆಳೆಸಿ ಮಾಹಿತಿ ಕಲೆ ಹಾಕುತ್ತದೆ.

ಜಿಡಿಪಿ ಲೆಕ್ಕ ಹಾಕುವ ವಿಧಾನ
ಭಾರತದಲ್ಲಿ ಜಿಡಿಪಿ ಲೆಕ್ಕ ಹಾಕಲು ಪ್ರಮುಖವಾಗಿ ನಾಲ್ಕು ವಿಧಾನಗಳನ್ನು ಅನುಸರಿಸಲಾಗುತ್ತದೆ :
1. ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಆಧಾರದ ಮೇಲೆ ಇದನ್ನು ಕಂಡುಹಿಡಿಯಲಾಗುತ್ತದೆ
2. ಮಾರುಕಟ್ಟೆ ಬೆಲೆಗಳು- ವೆಚ್ಚಗಳ ಆಧಾರದ ಮೇಲೆ
3. ನಾಮಿನಲ್ ಜಿಡಿಪಿ- ಪ್ರಸಕ್ತ ಮಾರುಕಟ್ಟೆ ದರದ ಮೇಲೆ
4. ರಿಯಲ್ ಜಿಡಿಪಿ - ಹಣದುಬ್ಬರದ ದರದೊಂದಿಗೆ ಹೊಂದಾಣಿಕೆ ಮಾಡಿದ ಲೆಕ್ಕ

English summary

What is GDP and how is it measured? explained in kannada

GDP is the monetary value of all finished goods and services made within a country during a specific period
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X