For Quick Alerts
ALLOW NOTIFICATIONS  
For Daily Alerts

ನವೆಂಬರ್ 1ರಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ!

|

ವಿಶ್ವದ ಅತಿದೊಡ್ಡ ಇನ್‌ಸ್ಟಂಟ್ ಮೆಸೇಜಿಂಗ್ ಆ್ಪ್ ವಾಟ್ಸಾಪ್ ವಿಶ್ವದಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿದೆ. ಆದರೆ ಇದೇ ಮೆಸೆಜಿಂಗ್ ಆ್ಯಪ್ ಮುಂದಿನ ತಿಂಗಳಿನಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.

ಹೌದು ಮುಂದಿನ ತಿಂಗಳಿಂದ ಲಕ್ಷಾಂತರ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಮತ್ತು ಬಳಕೆದಾರರು ತಮ್ಮ ಫೋನ್‌ನ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಇನ್ನು ಕೆಲವು ವಾರಗಳಲ್ಲಿ 50 ಕ್ಕೂ ಹೆಚ್ಚು ಬಗೆಯ ಫೋನ್‌ಗಳಲ್ಲಿ ಲಭ್ಯವಿರುವುದಿಲ್ಲ ಹಾಗೂ 53 ಮಾದರಿಯ ಫೋನ್ ಗಳಲ್ಲಿ ವಾಟ್ಸಾಪ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.

ನವೆಂಬರ್ 1ರಿಂದ 53 ಮೊಬೈಲ್‌ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ

ನವೆಂಬರ್ 1ರಿಂದ 53 ಮೊಬೈಲ್‌ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ

ನವೆಂಬರ್ 1 ರಿಂದ ಈ ಮೊಬೈಲ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ, ನವೆಂಬರ್ 1 ರಿಂದ ಸುಮಾರು 53 ಮೊಬೈಲ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಅದ್ರಲ್ಲೂ ಓಎಸ್ 4.0.4 ಮತ್ತು ಅದಕ್ಕಿಂತ ಹಳೆಯದಾದ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ, ಮತ್ತು ಐಫೋನ್‌ಗೆ ಇದು ಐಒಎಸ್ 10 ಅಥವಾ ಹೊಸದು ಅಗತ್ಯವಿರುತ್ತದೆ. ಹೀಗಾಗಿ ಆಂಡ್ರಾಯ್ಡ್ ಮತ್ತು ಆಪಲ್ ಸಾಧನಗಳ ಬಳಕೆದಾರರು ತಮ್ಮ ಮೊಬೈಲ್ ಅಪ್‌ಗ್ರೇಡ್ ಮಾಡಲು ಅಥವಾ ಅವರ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲು ಎಚ್ಚರಿಕೆ ನೀಡಲಾಗಿದೆ.

ಅಪ್‌ಡೇಟ್ ಮಾಡಿದ್ರೆ ಬಳಸಬಹುದು

ಅಪ್‌ಡೇಟ್ ಮಾಡಿದ್ರೆ ಬಳಸಬಹುದು

ನೀವು ಅಪ್‌ಡೇಟ್ ಮಾಡಿದ ತಕ್ಷಣ ನಿಮ್ಮ ಸಂಖ್ಯೆಗೆ ವಾಟ್ಸಾಪ್ ಬಳಸಲು ಸಾಧ್ಯವಾಗುತ್ತದೆ. ನೀವು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡುತ್ತಿದ್ದರೆ, ನೀವು ಅದಕ್ಕೆ ಸಂಬಂಧಿಸಿದ ಫೋನ್ ಸಂಖ್ಯೆಯನ್ನು ನಮೂದಿಸಿದಾಗ ಅಸ್ತಿತ್ವದಲ್ಲಿರುವ ಖಾತೆಯನ್ನು ಮರು ಸಕ್ರಿಯಗೊಳಿಸಲಾಗುತ್ತದೆ. ಪ್ಲಾಟ್‌ಫಾರ್ಮ್‌ಗಳ ನಡುವೆ ಚಾಟ್ ಇತಿಹಾಸವನ್ನು ವರ್ಗಾಯಿಸಲು ಸಾಧ್ಯವಿಲ್ಲದಿದ್ದರೂ, ಉದಾಹರಣೆಗೆ ಆಂಡ್ರಾಯ್ಡ್‌ನಿಂದ ಐಫೋನ್‌ಗೆ, ಜನರು ಇನ್ನೂ ತಮ್ಮ ಚಾಟ್ ಇತಿಹಾಸವನ್ನು ಉಳಿಸಿಕೊಳ್ಳಬಹುದು.

ಚಾಟ್ ಇತಿಹಾಸವನ್ನು ಇಮೇಲ್ ಲಗತ್ತಾಗಿ ಮೈಲ್‌ ಮಾಡಿಕೊಳ್ಳುವ ಅವಕಾಶವಿದೆ, ಆದ್ರೆ ಇದನ್ನು ನವೆಂಬರ್‌ಗಿಂತ ಮೊದಲು ಮಾಡಬಹುದು. ಸೆಟ್ಟಿಂಗ್ಸ್ ಫಂಕ್ಷನ್ ನಲ್ಲಿ ಚೆಕ್ ಮಾಡುವ ಮೂಲಕ ಜನರು ತಮ್ಮ ಫೋನ್ ಯಾವ ಆಪರೇಟಿಂಗ್ ಸಿಸ್ಟಮ್ ಬಳಸುತ್ತದೆ ಎಂಬುದನ್ನು ಕಂಡುಕೊಳ್ಳಬಹುದು. ವಾಟ್ಸಾಪ್ ಇದು ಫೇಸ್‌ಬುಕ್ ಮಾಲೀಕತ್ವದ ಮೆಸೇಜಿಂಗ್ ಆಪ್ ಆಗಿದ್ದು ಅದು ನಿಯಮಿತವಾಗಿ ಅಪ್‌ಡೇಟ್ ಆಗುತ್ತಲೇ ಇರುತ್ತದೆ.

 

ಸಮಯಕ್ಕೆ ಸರಿಯಾಗಿ ಅಪ್‌ಡೇಟ್‌ ಮಾಡಿ

ಸಮಯಕ್ಕೆ ಸರಿಯಾಗಿ ಅಪ್‌ಡೇಟ್‌ ಮಾಡಿ

ನಿಮ್ಮ ಮೊಬೈಲ್ ಫೋನ್‌ನ ಸಾಫ್ಟ್‌ವೇರ್ ಅನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡಿ, ಈ ಕಾರಣದಿಂದಾಗಿ, ಈಗ ತುಂಬಾ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ, ಆದರೆ ಸ್ಮಾರ್ಟ್‌ಫೋನ್ ಅಪ್‌ಡೇಟ್ ಆಗಿದ್ದರೆ, ನೀವು ಅದನ್ನು ಮತ್ತೆ ರನ್ ಮಾಡಲು ಸಾಧ್ಯವಾಗುತ್ತದೆ.

ನಿಮ್ಮ ಮೊಬೈಲ್ ಫೋನ್‌ನ ಸಾಫ್ಟ್‌ವೇರ್ ಅನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡಿ, ಈ ಕಾರಣದಿಂದಾಗಿ, ಈಗ ತುಂಬಾ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ, ಆದರೆ ಸ್ಮಾರ್ಟ್‌ಫೋನ್ ಅಪ್‌ಡೇಟ್ ಆಗಿದ್ದರೆ, ನೀವು ಅದನ್ನು ಮತ್ತೆ ರನ್ ಮಾಡಲು ಸಾಧ್ಯವಾಗುತ್ತದೆ.

ಈ ರೀತಿಯಾಗಿ, ಈಗ ನೀವು ನಿಮ್ಮ ಸ್ಮಾರ್ಟ್ ಫೋನ್ ಕೂಡ ಮೇಲೆ ತಿಳಿಸಿದ ಆವೃತ್ತಿಗಿಂತ ಹಳೆಯದೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ ನಿಮಗೆ ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ.

 

English summary

WhatsApp Will Not Work In These Mobiles From November 1

World's Largest Instant Messaging App WhatsApp has billions of users worldwide. But the same messaging app won't work on most smartphones since next month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X