For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಸಂಕಷ್ಟದಲ್ಲೂ ಹಿಮಾಚಲ ಪ್ರದೇಶದ ರೈತರಿಗೆ ವಾಟ್ಸಾಪ್ ಮೂಲಕ ನೆರವು..!

|

ಕೊರೊನಾವೈರಸ್ ಸೋಂಕು ಹರಡುವಿಕೆಯ ಭೀತಿ ಹಾಗೂ ಲಾಕ್‌ಡೌನ್‌ ಹಿಮಾಚಲ ಪ್ರದೇಶದಲ್ಲಿನ ಕೃಷಿ ಪ್ರದೇಶಗಳು ಹಾಗೂ ತೋಟಗಾರಿಕೆಗೆ ಹೆಚ್ಚು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಈ ಪ್ರದೇಶದ ರೈತರು ಲಾಕ್‌ಡೌನ್ ಸಂದರ್ಭದಲ್ಲೂ ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿದ್ದಾರೆ.

ಹಿಮಾಚಲ ಪ್ರದೇಶದ ಸುಮಾರು 80 ಪರ್ಸೆಂಟ್‌ನಷ್ಟು ಗ್ರಾಮೀಣ ಕುಟುಂಬಗಳು ಸ್ವಲ್ಪ ಭೂಮಿಯನ್ನು ಹೊಂದಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಕೃಷಿ ಇಲಾಖೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಬೆಳೆಗಾರರೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸಿದೆ.

5,676 ರೈತರಿಗೆ ವಾಟ್ಸಾಪ್ ಮೂಲಕ ಕೃಷಿ ಸಲಹೆ
 

5,676 ರೈತರಿಗೆ ವಾಟ್ಸಾಪ್ ಮೂಲಕ ಕೃಷಿ ಸಲಹೆ

ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿರುವ ಒಟ್ಟು 5,676 ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾಲಕಾಲಕ್ಕೆ ಅವರಿಗೆ ಸಲಹೆಗಳನ್ನು ನೀಡಲು ಇಲಾಖೆ ಬಳಸುತ್ತಿರುವ ಸಂವಹನ ವೇದಿಕೆ ವಾಟ್ಸಾಪ್‌ಗೆ ದಾಖಲಾಗಿದ್ದಾರೆ.

"ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ 94 ವಾಟ್ಸಾಪ್ ಕೃಷಿ ಗ್ರೂಪ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಕೃಷಿ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನೈಸರ್ಗಿಕ ಕೃಷಿಯ ಬಗ್ಗೆ ಸಲಹೆಗಳನ್ನು ನೀಡುವಂತೆ ವೀಡಿಯೊ ಕರೆ ಮೂಲಕ ರೈತರನ್ನು ತಲುಪುತ್ತಿದ್ದಾರೆ" ಎಂದು ಪ್ರಕೃತಿಕ್ ಖೇತಿ ಖುಷಾಲ್ ಕಿಸ್ಸಾನ್ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ವರ ಸಿಂಗ್ ಚಾಂಡೆಲ್ ಐಎಎನ್‌ಎಸ್‌ಗೆ ತಿಳಿಸಿದರು.

90 ಪರ್ಸೆಂಟ್‌ನಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸ

90 ಪರ್ಸೆಂಟ್‌ನಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸ

ಹಿಮಾಚಲ ಪ್ರದೇಶದಲ್ಲಿ 2011 ರ ಜನಗಣತಿಯ ಪ್ರಕಾರ 89.96 ರಷ್ಟು ಜನಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದೆ. ಕೃಷಿ ಮತ್ತು ತೋಟಗಾರಿಕೆ ಒಟ್ಟು ಉದ್ಯೋಗಿಗಲ್ಲಿ 69 ಪರ್ಸೆಂಟ್‌ರಷ್ಟು ಜನರಿಗೆ ನೇರ ಉದ್ಯೋಗವನ್ನು ನೀಡುತ್ತದೆ.

ಈ ಗುಂಪುಗಳಿಗೆ ಈವರೆಗೆ 5,676 ರೈತರು ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು. ಅವುಗಳಲ್ಲಿ, ಬ್ಲಾಕ್ ಮಟ್ಟದಲ್ಲಿ 80, ಜಿಲ್ಲಾ ಮಟ್ಟದಲ್ಲಿ 12 ಮತ್ತು ರಾಜ್ಯ ಮಟ್ಟದಲ್ಲಿ ಎರಡು ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ.

ವಿಡಿಯೋ ಕಾಲ್‌ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ

ವಿಡಿಯೋ ಕಾಲ್‌ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ

ಪ್ರತಿ ಬ್ಲಾಕ್‌ನಲ್ಲಿ ಮೂವರು ಅಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಯೋಜನಾ ನಿರ್ದೇಶಕರು ಮತ್ತು ವಿಷಯ ತಜ್ಞರು ಲಾಕ್‌ಡೌನ್ ಸಮಯದಲ್ಲಿ ರೈತರೊಂದಿಗೆ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ರೈತರ ಸಮಸ್ಯೆಗಳಿಗೆ ಸಾಧ್ಯವಿರುವ ಎಲ್ಲಾ ಪರಿಹಾರಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿದೆ ಎಂದು ಚಾಂಡೆಲ್ ಹೇಳಿದರು.

ವಾಟ್ಸಾಪ್ ಗ್ರೂಪ್‌ಗಳ ಮೂಲಕ ನೈಸರ್ಗಿಕ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ರೈತರಿಗೆ ಕಾಲಕಾಲಕ್ಕೆ ಸಲಹೆ ನೀಡಲಾಗುತ್ತಿದೆ ಎಂದರು. ಜೊತೆಗೆ ವಿಡಿಯೋ ಕಾಲ್ ಮೂಲಕ ರೈತರ ಸಮಸ್ಯೆ ಆಲಿಸಿ ಪರಿಹಾರವನ್ನು ನೀಡಲಾಗುತ್ತಿದೆ.

ಶೂನ್ಯ ಬಜೆಟ್ ಕೃಷಿ ತಂತ್ರ
 

ಶೂನ್ಯ ಬಜೆಟ್ ಕೃಷಿ ತಂತ್ರ

ಪ್ರಕೃತಿಕ್ ಖೇತಿ ಖುಷಾಲ್ ಕಿಸ್ಸಾನ್ ಅವರ ಅಡಿಯಲ್ಲಿ ರಾಜ್ಯದ 54,000 ರೈತರು ಕೃಷಿಕ ಸುಭಾಷ್ ಪಾಲೇಕರ್ ಅವರ ಶೂನ್ಯ ಬಜೆಟ್ ನೈಸರ್ಗಿಕ ಕೃಷಿ ತಂತ್ರಕ್ಕೆ ಸೇರಿದ್ದಾರೆ. ಪ್ರತ್ಯೇಕವಾಗಿ ಮತ್ತು ಸ್ವ-ಸಹಾಯ ಗುಂಪುಗಳನ್ನು ರಚಿಸುವ ಮೂಲಕ ಯೋಜನೆಯಡಿಯಲ್ಲಿ ಅವರು ನೈಸರ್ಗಿಕ ಕೃಷಿಯ ಮೂಲಕ ತರಕಾರಿಗಳು ಮತ್ತುಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ .

ನೈಸರ್ಗಿಕ ಕೃಷಿಗಾಗಿ 70,000 ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಗಿದೆ. ಪ್ರಸ್ತುತ, ರಾಜ್ಯದಲ್ಲಿ 2,151 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಮಾಡಲಾಗುತ್ತಿದೆ.

English summary

Whatsapp Is Helping Himachal Farmers Amid Lockdown

The Himachal Pradesh state Agriculture Department has seen the lockdown period as an opportunity to get involved with the growers through the digital technology.
Story first published: Tuesday, May 26, 2020, 13:07 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more