For Quick Alerts
ALLOW NOTIFICATIONS  
For Daily Alerts

ಭಾರತ ಬಿಟ್ಟು ಉಳಿದೆಡೆ ಸದ್ಯದಲ್ಲೇ ಶುರುವಾಗಲಿದೆ ವಾಟ್ಸ್ ಆಪ್ ಪೇ

|

ಭಾರತದಲ್ಲಿ ಪಾವತಿ ಲೈಸೆನ್ಸ್ ಇನ್ನೂ ದೊರೆಯದಿದ್ದರೂ ಮುಂದಿನ ಆರು ತಿಂಗಳಲ್ಲಿ ವಾಟ್ಸ್ ಆಪ್ ಪೇ ಹಲವು ದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ವಾಟ್ಸ್ ಆಪ್ ನಲ್ಲಿ ಈಗ ಫೋಟೋಗಳನ್ನು ಹೇಗೆ ಸುಲಭವಾಗಿ ಕಳುಹಿಸಬಹುದೋ ಅದೇ ರೀತಿಯಲ್ಲಿ ಹಣವನ್ನೂ ಪಾವತಿಸಲು ಸಾಧ್ಯವಾಗುವಂಥ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ.

ಸದ್ಯಕ್ಕೆ ವಾಟ್ಸ್ ಆಪ್ ಗೆ ತಾಂತ್ರಿಕ ಮೂಲಸೌಕರ್ಯ ಒದಗಿಸುವ ಕೆಲಸ ನಡೆಯುತ್ತಿದೆ. ಅದರಲ್ಲಿ ಒಂದು, ವಾಟ್ಸ್ ಆಪ್ ಪೇಮೆಂಟ್. "ಈ ಬಗ್ಗೆ ಬಹಳ ಉತ್ಸುಕನಾಗಿದ್ದೇನೆ. ಹಲವು ದೇಶಗಳಲ್ಲಿ ಇದು ಆರಂಭವಾಗಲಿದೆ. ಮುಂದಿನ ಆರು ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕಿದೆ" ಎಂದು ಝುಕರ್ ಬರ್ಗ್ ಹೇಳಿದ್ದಾರೆ.

ಈಗ ಬ್ಯಾಂಕಿಂಗ್ ಗೂ ಬಂತು ವಾಟ್ಸಾಪ್; ಏನಿದು ವಾಟ್ಸಾಪ್ ಬ್ಯಾಂಕಿಂಗ್?ಈಗ ಬ್ಯಾಂಕಿಂಗ್ ಗೂ ಬಂತು ವಾಟ್ಸಾಪ್; ಏನಿದು ವಾಟ್ಸಾಪ್ ಬ್ಯಾಂಕಿಂಗ್?

ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಮೂಲಕ ವಾಟ್ಸ್ ಆಪ್ ಪೇ ಕಾರ್ಯ ನಿರ್ವಹಿಸಲಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ರೂಪಿಸಿದೆ. ಬಳಕೆದಾರರು ಇದರಲ್ಲಿ ಬೇರೆಯವರಿಗೆ ಹಣ ಪಾವತಿ ಮಾಡಬಹುದು ಅಥವಾ ವ್ಯಾಪಾರದ ಹಣಕಾಸು ವ್ಯವಹಾರವನ್ನು ತಮ್ಮ ಬ್ಯಾಂಕ್ ಖಾತೆ ಮೂಲಕ ಮಾಡಬಹುದು.

ಭಾರತ ಬಿಟ್ಟು ಉಳಿದೆಡೆ ಸದ್ಯದಲ್ಲೇ ಶುರುವಾಗಲಿದೆ ವಾಟ್ಸ್ ಆಪ್ ಪೇ

ಭಾರತದಲ್ಲಿ ಇನ್ನೂ ಪರವಾನಗಿ ದೊರೆತಿಲ್ಲ. ಅಂದ ಹಾಗೆ ದೇಶದಲ್ಲಿ ವಾಟ್ಸ್ ಆಪ್ ಬಳಸುವಂಥ ನಲವತ್ತು ಕೋಟಿ ಮಂದಿ ಇದ್ದಾರೆ. ಸದ್ಯಕ್ಕೆ ಪಾವತಿಯ ಫೀಚರ್ ಅನ್ನು ಪ್ರಯೋಗಾರ್ಥವಾಗಿ ನಡೆಸಲಾಗುತ್ತಿದೆ. ಒಂದು ವೇಳೆ ಕಂಪೆನಿಗೆ ಲೈಸೆನ್ಸ್ ದೊರೆತಲ್ಲಿ ಪೂರ್ಣಾವಧಿಗೆ ಆರಂಭಿಸಲಾಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.

English summary

WhatsApp Pay Will Rollout In Many Countries Except India

Payment feature WhatsApp will rollout in many countries, except India. Here is the complete details.
Story first published: Friday, January 31, 2020, 9:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X