For Quick Alerts
ALLOW NOTIFICATIONS  
For Daily Alerts

ಜನವರಿಯಲ್ಲಿ ಸಗಟು ಹಣದುಬ್ಬರ ಶೇಕಡಾ 2.3ರಷ್ಟು ಹೆಚ್ಚಳ

|

ಭಾರತದ ಸಗಟು ಹಣದುಬ್ಬರವು ಜನವರಿಯಲ್ಲಿ ಶೇಕಡಾ 2.03ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಜನವರಿಯಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇಕಡಾ 3.52ರಷ್ಟು ಏರಿಕೆಯಾಗಿದೆ.

ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ ಆಹಾರೇತರ ತಯಾರಿಕಾ ಉತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳವಾಗಿದೆ. ಜೊತೆಗೆ ಮುಂದಿನ ಕೆಲವು ತಿಂಗಳುಗಳಲ್ಲಿ ಬೆಲೆ ಹೆಚ್ಚಳದ ಪ್ರಮಾಣವು ಇನ್ನಷ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಜನವರಿಯಲ್ಲಿ ಸಗಟು ಹಣದುಬ್ಬರ ಶೇಕಡಾ 2.3ರಷ್ಟು ಹೆಚ್ಚಳ

ಸಗಟು ಹಣದುಬ್ಬರ ಪ್ರಮಾಣವು ಡಿಸೆಂಬರ್‌ನಲ್ಲಿ ಶೇಕಡಾ 1.22ರಷ್ಟಿತ್ತು. ಹಿಂದಿನ ವರ್ಷದ ಜನವರಿಯಲ್ಲಿ ಇದು ಶೇಕಡಾ 3.52ರಷ್ಟಿತ್ತು. ತಯಾರಿಸಿದ ಉತ್ಪನ್ನಗಳಲ್ಲಿನ ಹಣದುಬ್ಬರವು ಶೇಕಡಾ 5.13ರಷ್ಟಿದ್ದು, ಡಿಸೆಂಬರ್‌ನಲ್ಲಿ ಇದು ಶೇಕಡಾ 4.24 ರಷ್ಟಿತ್ತು.

"ಜನವರಿ 2021 ರಲ್ಲಿ ಸಗಟು ಹಣದುಬ್ಬರ ತೀವ್ರ ಏರಿಕೆಗೆ ತಯಾರಿಸಿದ ಆಹಾರೇತರ ಉತ್ಪನ್ನಗಳು (ಪ್ರಮುಖ ವಸ್ತುಗಳು), ಇಂಧನ ಮತ್ತು ವಿದ್ಯುತ್ ಮತ್ತು ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳು ಕಾರಣವಾಗಿವೆ" ಎಂದು ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಕಳೆದ ವಾರ ಬಿಡುಗಡೆಯಾದ ಅಧಿಕೃತ ದತ್ತಾಂಶ ಚಿಲ್ಲರೆ ಹಣದುಬ್ಬರವು, ಜನವರಿಯಲ್ಲಿ 16 ತಿಂಗಳ ಕನಿಷ್ಠ ಶೇಕಡಾ 4.06 ರಷ್ಟಿದೆ.

English summary

Wholesale Inflation Rises To 2.03 Percent In January 2021

India's wholesale inflation firmed to 2.03% in January from 1.22% in December led by manufactured items, official data released Monday showed.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X