For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದ್ದೇಕೆ, ಪರಿಣಾಮವೇನು?

|

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಮೇ 9 ರಂದು ಪ್ರತಿ ಡಾಲರ್‌ಗೆ 77.50 ಕ್ಕೆ ಕೊನೆಗೊಂಡಿತು. ಸಾರ್ವಕಾಲಿಕ ಕನಿಷ್ಠ ದಾಖಲೆ ಪ್ರತಿ ಡಾಲರ್‌ಗೆ 77.05 ರೂ ಆಗಿದೆ.

ಮಂಗಳವಾರ, ಆದಾಗ್ಯೂ, ಮೌಲ್ಯವು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಡಾಲರ್ ವಿರುದ್ಧ ರೂಪಾಯಿ ಒಂದು ಡಾಲರ್‌ಗೆ 77.23 ರೂಪಾಯಿ ಆಗಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ಡಾಲರ್ ಎದುರು ರೂಪಾಯಿಯ ತೀವ್ರ ಕುಸಿತಕ್ಕೆ ಕಾಣುತ್ತಲೇ ಇದೆ.

ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಕಾರಣವೇನು?ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಕಾರಣವೇನು?

ತಜ್ಞರುಗಳು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲು ಹಲವು ಕಾರಣಗಳನ್ನು ನೀಡಿದ್ದಾರೆ. ಡಾಲರ್ ಬಲಗೊಳ್ಳುತ್ತಿರುವ ಕಾರಣದಿಂದಾಗಿ ರೂಪಾಯಿ ಕುಸಿಯುತ್ತಿದೆ ಎಂದು ಕೆಲವು ತಜ್ಞರು ಹೇಳಿದರೆ, ಇನ್ನು ಕೆಲವರು ಇದಕ್ಕೆಲ್ಲ ದೇಶೀಯ ಹಣದುಬ್ಬರವೇ ಕಾರಣ ಎಂದು ಹೇಳಿದ್ದಾರೆ. ಈಕ್ವಿಟಿ ಮಾರುಕಟ್ಟೆಯೂ ಕೂಡಾ ರೂಪಾಯಿ ಕುಸಿತಕ್ಕೆ ಕಾರಣ ಎಂದು ಇನ್ನು ಕೆಲವರು ಹೇಳಿದ್ದಾರೆ. ಆದರೆ ಈ ನಡುವೆ ಪ್ರಮುಖ ಮೂರು ಅಂಶಗಳು ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಕಾರಣವಾಗಿದೆ. ಸೋಮವಾರ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕವಾಗಿ ದಾಖಲೆಯ ಕುಸಿತ ಕಾಣಲು ಮೂರು ಅಂಶಗಳು ಪ್ರಭಾವ ಬೀರಿದೆ. ಅವುಗಳು ಯಾವುದು ಎಂದು ತಿಳಿಯಲು ಮುಂದೆ ಓದಿ...

ಎಲ್‌ಐಸಿ ಐಪಿಒ ಮೇಲೆ ವಿದೇಶಿ ಹೂಡಿಕೆದಾರರಿಗೆ ಏಕಿಲ್ಲ ಒಲವು?ಎಲ್‌ಐಸಿ ಐಪಿಒ ಮೇಲೆ ವಿದೇಶಿ ಹೂಡಿಕೆದಾರರಿಗೆ ಏಕಿಲ್ಲ ಒಲವು?

 ಯುಎಸ್‌ ಫೆಡರಲ್ ದರ ಏರಿಕೆ, ಹಣದುಬ್ಬರ

ಯುಎಸ್‌ ಫೆಡರಲ್ ದರ ಏರಿಕೆ, ಹಣದುಬ್ಬರ

 

ಫೆಡರಲ್ ರಿಸರ್ವ್ ಬ್ಯಾಂಕ್ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಯುಎಸ್ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಣದುಬ್ಬರವು ತೀವ್ರವಾಗಿದೆ. ಈ ಕಾರಣದಿಂದಾಗಿ ಯುಎಸ್ ಡಾಲರ್ ಎದುರು ರೂಪಾಯಿ ಕುಸಿತ ಕಂಡಿದೆ. ಫೆಡರಲ್ ರಿಸರ್ವ್‌ನ ದರ ಏರಿಕೆಯಿಂದಾಗಿ ಡಾಲರ್‌ನ ಮೌಲ್ಯವೂ ಏರುತ್ತಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

 

 ಚೀನಾದಲ್ಲಿ ಕೋವಿಡ್: ಹೇಗೆ ಪ್ರಭಾವ?

ಚೀನಾದಲ್ಲಿ ಕೋವಿಡ್: ಹೇಗೆ ಪ್ರಭಾವ?

ಇಡೀ ಪ್ರಪಂಚದಲ್ಲಿ ಚೀನಾ ಗರಿಷ್ಠ ವಿದೇಶೀ ವಿನಿಮಯವನ್ನು ಹೊಂದಿದೆ. ಇದರ ವಿದೇಶಿ ವಿನಿಮಯ ಭಾರತದ ಜಿಡಿಪಿಗಿಂತ ದೊಡ್ಡದಾಗಿದೆ. ಚೀನಾದ ಝಿರೋ ಕೋವಿಡ್ ಪಾಲಿಸಿ ಕಾರಣದಿಂದಾಗಿ ಚೀನಾ ದೆಶದ ಪ್ರಮುಖ ನಗರಗಳು ಲಾಕ್‌ಡೌನ್‌ನಲ್ಲಿದೆ. ಇದು ಭಾರತದಲ್ಲಿನ ಬಹಳಷ್ಟು ಕಂಪನಿಗಳಿಗೆ ತಮ್ಮ ನೆರೆಹೊರೆಯವರೊಂದಿಗೆ ನೇರವಾಗಿ ವ್ಯವಹರಿಸುವಲ್ಲಿ ತೊಂದರೆ ಉಂಟು ಮಾಡಿದೆ. ಇದು ಕೂಡಾ ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಕಾರಣವಾಗಿದೆ.

 ಭಾರತದಲ್ಲಿನ ಹಲವಾರು ಅಂಶಗಳು
 

ಭಾರತದಲ್ಲಿನ ಹಲವಾರು ಅಂಶಗಳು

ಭಾರತದಲ್ಲಿ, ವಿದೇಶಿ ಹೂಡಿಕೆದಾರರು ಹೆಚ್ಚಾಗಿ ವಹಿವಾಟು ನಡೆಸುತ್ತಿದ್ದು, ಇದರಿಂದಾಗಿ ರೂಪಾಯಿ ಮೌಲ್ಯವು ಕುಸಿಯುತ್ತಿದೆ. ಏಳನೇ ತಿಂಗಳಿಗೆ, ಅವರು ಭಾರತೀಯ ಮಾರುಕಟ್ಟೆಗಳಲ್ಲಿ ಪ್ರಮುಖ ಮಾರಾಟಗಾರರಾಗಿದ್ದಾರೆ. ಇದು ಮಾರುಕಟ್ಟೆಗಳನ್ನು ಕುಸಿಯುವಂತೆ ಮಾಡಿದೆ. ಮುಂದಿನ ತಿಂಗಳು ಮತ್ತೆ ಆರ್‌ಬಿಐ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಮತ್ತೆ ಪರಿಸ್ಥಿತಿ ಹದಗೆಡಬಹುದು.

 ರೂಪಾಯಿ ಮೌಲ್ಯ ಕುಸಿತವಾದರೆ ಪರಿಣಾಮವೇನು?

ರೂಪಾಯಿ ಮೌಲ್ಯ ಕುಸಿತವಾದರೆ ಪರಿಣಾಮವೇನು?

* ಆಮದು ಅಗ್ಗವಾಗುತ್ತದೆ, ರಫ್ತು ದುಬಾರಿಯಾಗುತ್ತದೆ
* ವಿದೇಶದಲ್ಲಿ ಅಧ್ಯಯನ ಮತ್ತು ವಿದೇಶ ಪ್ರಯಾಣ ದುಬಾರಿಯಾಗುತ್ತದೆ
* ಅಲ್ಪಾವಧಿಯಲ್ಲಿ ಹಣದುಬ್ಬರ ಹೆಚ್ಚಳವಾಗಲಿದೆ
* ವಿದೇಶಿ ಹೂಡಿಕೆದಾರರ ಹೂಡಿಕೆ ಹೆಚ್ಚಳ

English summary

Why Did Rupee Fall To All-Time Low Against Dollar On Monday?, Explained Here in Kannada

Why Did Rupee Fall To All-Time Low Against Dollar On Monday?, Explained Here in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X