For Quick Alerts
ALLOW NOTIFICATIONS  
For Daily Alerts

ವಿಪ್ರೋಗೆ 75 ವರ್ಷ; ಅದರ ಯಶಸ್ಸಿನ ಪಯಣದ ಮುಕ್ಕಾಲು ಹಾದಿಯಲ್ಲಿ ಅಜೀಂ ಪ್ರೇಮ್ ಜೀ

By ಅನಿಲ್ ಆಚಾರ್
|

ಒಂದು ಕಂಪೆನಿ 75 ವರ್ಷ ಪೂರೈಸುವುದು ಸಾಮಾನ್ಯ ಸಂಗತಿಯಲ್ಲ. ಅದರಲ್ಲೂ ನಾನಾ ಕ್ಷೇತ್ರದಲ್ಲಿ ತೊಡಗಿಕೊಂಡು, ದಾನ- ದೇಣಿಗೆಗಳಿಂದಲೂ ಹೆಸರು ಪಡೆಯುವುದು ಖಂಡಿತಾ ಸಲೀಸಂತೂ ಅಲ್ಲವೇ ಇಲ್ಲ. ವಿಪ್ರೋ ಕಂಪೆನಿ 75 ವರ್ಷವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಒಮ್ಮೆ ಆ ಕಂಪೆನಿಯ ಪಯಣದ ಕಡೆಗೆ ಹಿಂತಿರುಗಿ ನೋಡುವ ಪ್ರಯತ್ನ ಮಾಡಲಾಗುತ್ತಿದೆ.

ವಿಪ್ರೋ ಷೇರು ಬೈಬ್ಯಾಕ್ ಡಿಸೆಂಬರ್ 29ರಿಂದ ಜನವರಿ 11ಕ್ಕೆ ದಿನ ನಿಗದಿವಿಪ್ರೋ ಷೇರು ಬೈಬ್ಯಾಕ್ ಡಿಸೆಂಬರ್ 29ರಿಂದ ಜನವರಿ 11ಕ್ಕೆ ದಿನ ನಿಗದಿ

ಮೊಹಮದ್ ಹಶೀಂ ಪ್ರೇಮ್ ಜೀ ಅವರು ಡಿಸೆಂಬರ್ 29, 1945ರಲ್ಲಿ ಆರಂಭಿಸಿದ್ದು ವೆಸ್ಟರ್ನ್ ಇಂಡಿಯಾ ಪ್ರಾಡಕ್ಟ್ಸ್ ಲಿಮಿಟೆಡ್. ಅದನ್ನು ಶುರು ಮಾಡಿದ್ದು ಮಹಾರಾಷ್ಟ್ರದ ಅಮಲ್ನೇರ್ ನಲ್ಲಿ. ವೆಜಿಟೇಬಲ್ ಮತ್ತು ರೀಫೈನ್ಡ್ ಆಯಿಲ್ ತಯಾರಿಕೆಗಾಗಿ ಶುರುವಾದ ಸಂಸ್ಥೆ ಅದು. ಅಂದ ಹಾಗೆ ಯಾರು ಮೊಹಮದ್ ಹಶೀಂ ಪ್ರೇಮ್ ಜೀ ಅನ್ನೋದು ನಿಮಗೀಗಾಗಲೇ ಗೊತ್ತಾಗಿದ್ದರೆ ಸರಿ.

ಜವಾಬ್ದಾರಿ ವಹಿಸಿಕೊಂಡಾಗ ಅಜೀಂ ಪ್ರೇಮ್ ಜೀ ವಯಸ್ಸು 21 ವರ್ಷ

ಜವಾಬ್ದಾರಿ ವಹಿಸಿಕೊಂಡಾಗ ಅಜೀಂ ಪ್ರೇಮ್ ಜೀ ವಯಸ್ಸು 21 ವರ್ಷ

ಆದರೂ ಒಮ್ಮೆ ಹೇಳಿಬಿಡ್ತೀನಿ; ಇವರೇ ಅಜೀಂ ಪ್ರೇಮ್ ಜೀ ಅವರ ತಂದೆ. 1966ರಲ್ಲಿ ತಂದೆಯನ್ನು ಕಳೆದುಕೊಂಡಾಗ ಅಜೀಂ ಪ್ರೇಮ್ ಜೀ ವಯಸ್ಸು 21 ವರ್ಷ. ಸ್ಟ್ಯಾನ್ ಫೋರ್ಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಜೀಂ ಪ್ರೇಮ್ ಜೀ ಅರ್ಧಕ್ಕೆ ನಿಲ್ಲಿಸಿ, ಕಂಪೆನಿಯ ಹೊಣೆಗಾರಿಕೆಯನ್ನು ಹೆಗಲಿಗೆ ಹಾಕಿಕೊಳ್ಳುತ್ತಾರೆ. ವೆಜಿಟೇಬಲ್ ಆಯಿಲ್ ಉದ್ಯಮದಿಂದ ಶುರುವಾದ ಕಂಪೆನಿ ಅಜೀಂ ಪ್ರೇಮ್ ಜೀ ಅವರಿಂದ ವಿಪರೀತ ಬೆಳೆಯಿತು. ವಿಪ್ರೋದಿಂದ ವೆಜಿಟೇಬಲ್ ತೈಲದಿಂದ ಮಾಹಿತಿ ತಂತ್ರಜ್ಞಾನದ ತನಕ ಮಾಡದ ಉದ್ಯಮವೇ ಇಲ್ಲ. 1982ರ ಹೊತ್ತಿಗೆ ವಿಪ್ರೋ ಸಮೂಹ ವಿಪರೀತ ಬೆಳೆದಿತ್ತು. ಲಿಸ್ಟ್ ಆಗದ ಸಂಸ್ಥೆಯಾದ ವಿಪ್ರೋ ಎಂಟರ್ ಪ್ರೈಸಸ್ ನಲ್ಲಿ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್, ಮೂಲಸೌಕರ್ಯ ಹಾಗೂ ಎಂಜಿನಿಯರಿಂಗ್ ಸಂಸ್ಥೆ ಹಾಗೂ ಜಿ.ಇ. ಹೆಲ್ತ್ ಕೇರ್ ಸೇರಿಸಿಕೊಳ್ಳಲಾಯಿತು.

ಭಾರತದ ಆತಿ ದೊಡ್ಡ ದಾನಿ ಪಟ್ಟಿಯಲ್ಲಿ ನಂಬರ್ ವನ್

ಭಾರತದ ಆತಿ ದೊಡ್ಡ ದಾನಿ ಪಟ್ಟಿಯಲ್ಲಿ ನಂಬರ್ ವನ್

ಜುಲೈ 31, 2019ರಂದು ವಿಪ್ರೋದ ಕಾರ್ಯ ನಿರ್ವಾಹಕ ಅಧ್ಯಕ್ಷ ಹುದ್ದೆಯಿಂದ ಪ್ರೇಮ್ ಜೀ ಕೆಳಗಿಳಿದರು. ಅಷ್ಟರೊಳಗೆ ಅವರು ಕಂಪೆನಿಗೆ 53 ವರ್ಷದ ಸುದೀರ್ಘ ಸೇವೆ ಸಲ್ಲಿಸಿದ್ದರು. ಪ್ರೇಮ್ ಜೀ ಅವರ ಹಿರಿಯಣ್ಣ ರಿಷದ್ ಪ್ರೇಮ್ ಜೀ ಕಾರ್ಯ ನಿರ್ವಾಹಕ ಅಧ್ಯಕ್ಷರ ಹುದ್ದೆಗೆ ಏರಿದರು. ಅಂದ ಹಾಗೆ , ಅಜೀಂ ಪ್ರೇಮ್ ಜೀ ಅವರು ತಮ್ಮ ದಾನ ಕರ್ಮಗಳಿಂದಲೂ ಹೆಸರು ಮಾಡಿದ್ದಾರೆ. ಎಡೆಲ್ ಗೀವ್ ಹ್ಯುರನ್ ಇಂಡಿಯಾದ ಭಾರತದ ಆತಿ ದೊಡ್ಡ ದಾನಿ ಎಂಬ ಪಟ್ಟಿಯಲ್ಲಿ ಮೊದಲ ಸ್ಥಾನ ಅಜೀಂ ಪ್ರೇಮ್ ಜೀಗೆ ನೀಡಲಾಗಿದೆ. ಎರಡನೇ ಸ್ಥಾನದಲ್ಲಿ ಇರುವ ಎಚ್ ಸಿಎಲ್ ಟೆಹ್ನಾಲಜೀಸ್ ಶಿವ್ ನಾಡಾರ್ 795 ಕೋಟಿ ದಾನದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ ನಿಂದ ಪುಸ್ತಕ

ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ ನಿಂದ ಪುಸ್ತಕ

2006ರಲ್ಲಿ ಪ್ರೇಮ್ ಜೀ ಅವರಿಂದ ಪ್ರೇಮ್ ಜೀಇನ್ವೆಸ್ಟ್ ಎಂಬ ಇನ್ವೆಸ್ಟ್ ಮೆಂಟ್ ಕಂಪೆನಿ ಆರಂಭಿಸಲಾಯಿತು. ಎಕನಾಮಿಕ್ ಟೈಮ್ಸ್ ವರಿ ಪ್ರಕಾರ, 3 ಬಿಲಿಯನ್ ಯುಎಸ್ ಡಿ ಆಸ್ತಿಯನ್ನು ಈ ಕಂಪೆನಿಯು ಸಾರ್ವಜನಿಕ ಮಾರುಕಟ್ಟೆಯಲ್ಲಿ ನಿರ್ವಹಿಸಲಾಗುತ್ತದೆ. ಈ ಕಂಪೆನಿಯಿಂದ ಇದರ ಹೂಡಿಕೆಯು ಐಸಿರ್ಟೀಸ್, ಸಾಸ್ ಯೂನಿಕಾರ್ನ್, ಎಸ್ ಬಿಐ ಜನರಲ್ ಇನ್ಷೂರೆನ್ಸ್ ಅನ್ನೂ ಒಳಗೊಂಡಿದೆ ಎನ್ನುತ್ತವೆ ಮೂಲಗಳು. ಪ್ರೇಮ್ ಜೀ ಅವರ ನಾಯಕತ್ವದ ಗುಣ ಮೈಂಡ್ ಟ್ರೀ ಸ್ಥಾಪಕ ಕೃಷ್ಣಮೂರ್ತಿ ನಟರಾಜನ್ ಸೇರಿದಂತೆ ಅನೇಕರಿಗೆ ಮಾದರಿ ಆಗಿದೆ. ಅಂದ ಹಾಗೆ ವೆಜಿಟೇಬಲ್ ತೈಲದಿಂದ ನಾನಾ ಉದ್ಯಮಗಳನ್ನು ಮಾಡಿದ ಅಜೀಂ ಪ್ರೇಮ್ ಜೀ ಬಗ್ಗೆ ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ ನಿಂದ ಪುಸ್ತಕ ಹೊರಬರಲಿದೆ. ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಇನ್ನು ರಿಷದ್ ಪ್ರೇಮ್ ಜೀ ಟ್ವೀಟ್ ಮಾಡಿ, ವಿಪ್ರೋ ಬಗೆಗಿನ ಯಶೋಗಾಥೆಯೆಂದರೆ ಅದು ಅಜೀಂ ಪ್ರೇಮ್ ಜೀ ಅವರದು ಕೂಡ. ಏಕೆಂದರೆ 75 ವರ್ಷದಲ್ಲಿ 53 ವರ್ಷದಿಂದ ಇದ್ದಾರೆ ಎಂದಿದ್ದಾರೆ.

ವಿಶ್ಲೇಷಕರಿಗೆ ಫಲಿತಾಂಶದ ಬಗ್ಗೆ ಸಮಾಧಾನ ಇಲ್ಲ

ವಿಶ್ಲೇಷಕರಿಗೆ ಫಲಿತಾಂಶದ ಬಗ್ಗೆ ಸಮಾಧಾನ ಇಲ್ಲ

ಆದರೆ, ಕಳೆದ ಕೆಲ ಸಮಯದಿಂದ ಕಂಪೆನಿಯ ಬೆಳವಣಿಗೆ ಬಗ್ಗೆ ವಿಶ್ಲೇಷಕರಿಗೆ ಸಮಾಧಾನ ಇಲ್ಲ. FY11 ಹಾಗೂ FY12ರಲ್ಲಿ ಕಂಪೆನಿಯಿಂದ ಎರಡಂಕಿಯ ಬೆಳವಣಿಗೆ ಸಾಧಿಸಿದ್ದನ್ನು ಹೊರತುಪಡಿಸಿದರೆ ಆ ನಂತರ ಅದು ಒಂದಂಕಿಗೆ ಇಳಿಯಿತು. ಹತ್ತು ವರ್ಷಗಳಲ್ಲಿ ವಿಪ್ರೋಗೆ ನಾಲ್ವರು ಸಿಇಒಗಳಾದರು. ಇದೇ ಅವಧಿಯಲ್ಲಿ ಎಚ್ ಸಿಎಲ್ ಟೆಕ್ನಾಲಜಿಗೆ ಮೂವರು ಸಿಇಒಗಳಾಗಿದ್ದಾರೆ. ಈಗ ಹೊಸ ಸಿಇಒ ಥಿಯೆರಿ ಡೆಲಪೊರ್ಟೆ ಕಂಪೆನಿಯನ್ನು ಬೆಳವಣಿಗೆ ಪಥದಲ್ಲಿ ಮುನ್ನಡೆಸಬೇಕಿದೆ. ಡೆಲಪೊರ್ಟೆ ಅಡಿಯಲ್ಲಿ ವಿಪ್ರೋ ಜರ್ಮನ್ ಸಂಸ್ಥೆ ಮೆಟ್ರಾ ಜತೆಗೆ ಅತಿ ದೊಡ್ಡ ವ್ಯವಹಾರ ಒಪ್ಪಂದ ಮುಗಿಸಿದೆ. ಮೊದಲ ಐದು ವರ್ಷಕ್ಕೆ ಇದರ ಮೌಲ್ಯ 700 ಮಿಲಿಯನ್ ಯುಎಸ್ ಡಿ ಆಗಿದೆ. ಇದು ಹೆಚ್ಚುವರಿಯಾಗಿ ಇನ್ನೂ ನಾಲ್ಕು ವರ್ಷ ವಿಸ್ತರಿಸುವ ಉದ್ದೇಶ ಇದೆ. ಈ ವ್ಯವಹಾರದ ಮೌಲ್ಯ 1 ಬಿಲಿಯನ್ ಯುಎಸ್ ಡಿ ಆಗುವ ಸಾಧ್ಯತೆ ಕೂಡ ಇದೆ.

English summary

Wipro 75 Years Success Journey And Azim Premji Contribution

Wipro completed 75 years on December 29, 2020. Here is the success story of the company and Azim Premji contribution towards it.
Story first published: Wednesday, December 30, 2020, 16:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X