For Quick Alerts
ALLOW NOTIFICATIONS  
For Daily Alerts

''ಜನ್ ಧನ್ ಪ್ಲಸ್''ಯೋಜನೆ ವೇಗವರ್ಧನೆಗೆ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಶಿಫಾರಸು

|

ಬೆಂಗಳೂರು, ಆಗಸ್ಟ್ 18: ಕಡಿಮೆ ಆದಾಯವಿರುವ ಮಹಿಳೆಯರಿಗೆ ತಮ್ಮ ಆರ್ಥಿಕ ಭದ್ರತೆ ಮತ್ತು ಸಮೃದ್ಧಿಗಾಗಿ ಆರ್ಥಿಕ ಸಾಧನಗಳಿಗೆ ಪ್ರವೇಶವನ್ನು ಕಲ್ಪಿಸಲು ಬದ್ಧವಾಗಿರುವ ಜಾಗತಿಕ ಲಾಭ ರಹಿತವಾದ ಸಂಸ್ಥೆಯಾಗಿರುವ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಮತ್ತು ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ ಇಂದು ಪವರ್ ಆಫ್ ಜನ್ ಧನ್: ಮೇಕಿಂಗ್ ಫೈನಾನ್ಸ್ ವರ್ಕ್ ಫಾರ್ ವುಮೆನ್ ಇನ್ ಇಂಡಿಯಾ' (ಜನ್ ಧನ್ ಶಕ್ತಿ : ಭಾರತದಲ್ಲಿ ಮಹಿಳೆಯರಿಗಾಗಿ ಹಣಕಾಸು ಸೇವೆ ನೀಡುವುದು) ವರದಿಯನ್ನು ಬಿಡುಗಡೆ ಮಾಡಿವೆ.

ಕಡಿಮೆ ಆದಾಯವಿರುವ 100 ಮಿಲಿಯನ್ ಗೂ ಅಧಿಕ ಮಹಿಳೆಯರಿಗೆ ಸೇವೆ ನೀಡುವ ಮೂಲಕ ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಸುಮಾರು 25,000 ಕೋಟಿ (250 ಬಿಲಿಯನ್) ರೂಪಾಯಿಗಳ ಠೇವಣಿ ಮಾಡುವುದರೊಂದಿಗೆ 40 ಕೋಟಿ (400 ಮಿಲಿಯನ್) ನಷ್ಟು ಕಡಿಮೆ ಆದಾಯವಿರುವ ಭಾರತೀಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.

ಉಳಿತಾಯವು ಕಡಿಮೆ ಆದಾಯವಿರುವ ಮಹಿಳೆಯರಿಗೆ ಮತ್ತು ಅವರ ಕುಟುಂಬದವರಿಗೆ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಸಹಾಯ ಮಾಡುವ ಪ್ರಬಲ ಸಾಧನವಾಗಿದೆ ಎಂಬ ಪ್ರಾಮುಖ್ಯತೆಯನ್ನು ವರದಿ ಎತ್ತಿ ತೋರಿಸಿದೆ. ಮಹಿಳೆಯರಲ್ಲಿನ ಉಳಿತಾಯ ಪ್ರವೃತ್ತಿ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಎದುರಾಗುವ ಅಡೆತಡೆಗಳ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸುವ ನಿಟ್ಟಿನಲ್ಲಿ ವರದಿಯು ಪಿಎಸ್ ಬಿಗಳು ಮತ್ತು ನೀತಿ ನಿರೂಪಕರಿಗೆ ಶಿಫಾರಸುಗಳನ್ನು ನೀಡುತ್ತದೆ. ಇದು 2014 ರಲ್ಲಿ ಆರಂಭವಾಗಿರುವ ಸರ್ಕಾರದ ಪ್ರಮುಖ ಆರ್ಥಿಕ ಸೇರ್ಪಡೆಯ ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಆಗಿದೆ.

ಗ್ಲೋಬಲ್ ಫೈಂಡೆಕ್ಸ್ ರಿಪೋರ್ಟ್ 2017

ಗ್ಲೋಬಲ್ ಫೈಂಡೆಕ್ಸ್ ರಿಪೋರ್ಟ್ 2017

ಗ್ಲೋಬಲ್ ಫೈಂಡೆಕ್ಸ್ ರಿಪೋರ್ಟ್ 2017 ಪ್ರಕಾರ, ಭಾರತದಲ್ಲಿ ಶೇ.77 ರಷ್ಟು ಮಹಿಳೆಯರು ಮತ್ತು ಶೇ.83 ರಷ್ಟು ಪುರುಷರು ತಮ್ಮ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಈ ಪೈಕಿ ಮಹಿಳೆಯರು ಖಾತೆಯನ್ನು ಹೊಂದುವುದರಲ್ಲಿ ಶೇ.6 ರಷ್ಟು ಹಿಂದೆ ಬಿದ್ದಿದ್ದಾರೆ(2014 ರಲ್ಲಿ ಶೇ.20 ರಷ್ಟರಿಂದ). ಇಂದು, 23.73 ಮಹಿಳೆಯರು(237.3 ಮಿಲಿಯನ್) ಜನ್ ಧನ್ ಖಾತೆಗಳನ್ನು ಹೊಂದಿದ್ದಾರೆ. ಆದಾಗ್ಯೂ, ಬ್ಯಾಂಕ್ ಖಾತೆಯನ್ನು ಹೊಂದಿದ್ದರೂ ಅದನ್ನು ಬಳಸಲಾಗುತ್ತಿದೆ ಎಂದು ಅರ್ಥವಲ್ಲ. ಇದು ಆರ್ಥಿಕ ಸೇರ್ಪಡೆಯ ನಿರ್ಣಾಯಕ ನಿರ್ಧಾರವಾಗಿ ಪರಿಣಮಿಸಿದೆ.

ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಮತ್ತು ಬ್ಯಾಂಕ್ ಆಫ್ ಬರೋಡಾ ಒಂದು ವಿಶೇಷವಾದ ಪೈಲಟ್ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದ್ದು, ಇದರ ಮೂಲಕ ಜನ್ ಧನ್ ಖಾತೆಯನ್ನು ಹೊಂದಿರುವ ಮಹಿಳೆಯರು ತಮ್ಮ ಖಾತೆಯ ಬಳಕೆಯನ್ನು ಹೆಚ್ಚು ಮಾಡಲು ಉತ್ತೇಜನ ನೀಡಲಾಗುತ್ತದೆ. ಜನ್ ಧನ್ ಪ್ಲಸ್ ಒಂದು ಅತ್ಯುತ್ತಮವಾದ ಪರಿಹಾರವಾಗಿದ್ದು, ಇದರಲ್ಲಿ ನಾಲ್ಕು ತಿಂಗಳಲ್ಲಿ 500 ರೂಪಾಯಿ ಠೇವಣಿಗೆ ಉತ್ತೇಜನ ಸಿಗಲಿದೆ.

10,000 ರೂಪಾಯಿವರೆಗೆ ಸಾಲ
 

10,000 ರೂಪಾಯಿವರೆಗೆ ಸಾಲ

ಖಾತೆದಾರರು 10,000 ರೂಪಾಯಿವರೆಗೆ ಸಾಲ/ಓವರ್ ಡ್ರಾಫ್ಟ್ ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಇದರಿಂದ ಹಲವಾರು ಪ್ರಯೋಜನಗಳಿವೆ- ಮಹಿಳಾ ಖಾತೆದಾರರು ಬ್ಯಾಂಕುಗಳೊಂದಿಗೆ ಹೆಚ್ಚು ಹೆಚ್ಚು ವ್ಯವಹಾರ ನಡೆಸಬಹುದು ಮತ್ತು ಕೌಶಲ್ಯಗಳು ಹಾಗೂ ವಿಶ್ವಾಸವನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಒಂದು ಪ್ರಮುಖವಾದ ಗ್ರಾಹಕ ನೆಲೆಯ ಬಗ್ಗೆ ಮತ್ತು ಉತ್ಪನ್ನಗಳು ಹಾಗೂ ಸೇವೆಗಳೊಂದಿಗೆ ಅದನ್ನು ಹೇಗೆ ಪರಿಹರಿಸಬೇಕೆಂಬುದರ ಬಗ್ಗೆ ಬ್ಯಾಂಕುಗಳಿಂದ ಹೆಚ್ಚು ಕಲಿತುಕೊಳ್ಳಬಹುದಾಗಿದೆ.

ಮಹಿಳೆಯರು ಮತ್ತು ಅವರ ಕುಟುಂಬ ಸದಸ್ಯರು ಕೋವಿಡ್-19 ನಂತಹ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಉಳಿತಾಯ ಮಾಡುವುದನ್ನು ಬೆಂಬಲಿಸಲಾಗುತ್ತದೆಯಷ್ಟೇ ಅಲ್ಲ, ಅವರಿಗೆ ಓವರ್ ಡ್ರಾಫ್ಟ್ ಸೌಲಭ್ಯ, ತುರ್ತು ನಿಧಿ ಮತ್ತು ಸಾಲ ಸೌಲಭ್ಯಗಳೂ ದೊರೆಯಲಿವೆ. ಇದು ಭವಿಷ್ಯದಲ್ಲಿ ಸಾಲ ಮತ್ತು ಇತರೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಸಮರ್ಥವಾಗಿ ಪಡೆದುಕೊಳ್ಳಲು ನೆರವಾಗುತ್ತದೆ.

ಬ್ಯಾಂಕ್ ಆಫ್ ಬರೋಡದಿಂದ ವರದಿ

ಬ್ಯಾಂಕ್ ಆಫ್ ಬರೋಡದಿಂದ ವರದಿ

2020 ರ ಫೆಬ್ರವರಿಯಿಂದ ಆಗಸ್ಟ್ ವರೆಗೆ ಮುಂಬೈ, ದೆಹಲಿ ಮತ್ತು ಚೆನ್ನೈನ 101 ಬ್ಯಾಂಕ್ ಆಫ್ ಬರೋಡ ಶಾಖೆಗಳಲ್ಲಿ ಮತ್ತು 300 ಕ್ಕೂ ಹೆಚ್ಚು ಬ್ಯುಸಿನೆಸ್ ಕರೆಸ್ಪಾಂಡೆಂಟ್ ಪಾಯಿಂಟ್ ಗಳಲ್ಲಿ ಈ ಪೈಲಟ್ ಅಧ್ಯಯನವನ್ನು ನಡೆಸಲಾಗಿದೆ. ಈ ಅವಧಿಯಲ್ಲಿ, ಸುಮಾರು 50,000 ದಷ್ಟು ಪುರುಷರು ಮತ್ತು ಮಹಿಳಾ ಗ್ರಾಹಕರು ಜನ್ ಧನ್ ಪ್ಲಸ್ ಗೆ ಸಹಿ ಹಾಕಿದ್ದಾರೆ. ಯೋಜನೆ ಆರಂಭವಾದ ಎರಡು ತಿಂಗಳೊಳಗಾಗಿಯೇ ಶೇ.32 ರಷ್ಟು ಮಹಿಳೆಯರು ಬ್ಯುಸಿನೆಸ್ ಕರೆಸ್ಪಾಂಡೆಂಟ್ ಪಾಯಿಂಟ್ ಗಳಿಗೆ ತೆರಳಿ ನೋಂದಣಿ ಮಾಡಿಕೊಂಡಿದ್ದಾರೆ.

ಶ್ರೀರಾಮನ್ ಜಗನ್ನಾಥನ್ ಮಾತನಾಡಿ

ಶ್ರೀರಾಮನ್ ಜಗನ್ನಾಥನ್ ಮಾತನಾಡಿ

ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ನ ಏಷ್ಯಾ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಶ್ರೀರಾಮನ್ ಜಗನ್ನಾಥನ್ ಮಾತನಾಡಿ, "ಕೋವಿಡ್-19 ಆದಾಯದ ಅಂತರವನ್ನು ಹೆಚ್ಚು ಮಾಡಿದೆ ಮತ್ತು ಮಹಿಳೆಯರ ಮೇಲೆ ಅದರಲ್ಲಿಯೂ ಹೆಚ್ಚಾಗಿ ಕಡಿಮೆ ಆದಾಯವಿರುವ ಮಹಿಳೆಯರ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ. ಇದರ ಪರಿಣಾಮ ಮಹಿಳೆಯರು ಔಪಚಾರಿಕವಾದ ಉಳಿತಾಯವನ್ನು ಕಾರ್ಯಸಾಧ್ಯವಾದ ಮಟ್ಟಿಗಿನ ಆರ್ಥಿಕ ಸಾಧನಗಳ ಕಡೆಗೆ ಗಮನಹರಿಸುವಂತೆ ಮಾಡಿದೆ. ಇದರ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಪುನರ್ ಸ್ಥಾಪಿಸಲು ನೆರವಾಗುವುದು ಮುಖ್ಯವಾಗಿದೆ. ಹಣಕಾಸು ಸಂಸ್ಥೆಗಳೊಂದಿಗೆ ಮಹಿಳೆಯರ ಭಾಗಿಯಾಗುವಿಕೆ ಮತ್ತು ಅಂತಹ ಸಂಸ್ಥೆಗಳಿಂದ ಸಾಲ ಪಡೆಯುವ ಸಾಮರ್ಥ್ಯವು ಅವರ ಸಾಮಾಜಿಕ ಹೂಡಿಕೆಯನ್ನು ಹೆಚ್ಚಿಸಬಹುದಾಗಿದೆ" ಎಂದು ಅಭಿಪ್ರಾಯಪಟ್ಟರು.

"ಬ್ಯಾಂಕ್ ಆಫ್ ಬರೋಡದ ಜನ್ ಧನ್ ಪ್ಲಸ್ ಮೂಲಕ ನಾವು ಮಹಿಳೆಯರ ಉಳಿತಾಯದ ಮನೋಭಾವವನ್ನು ಮತ್ತು ಉದ್ದೇಶಗಳನ್ನು ಸನಿಹದಿಂದ ಅಧ್ಯಯನ ಮಾಡಲು ಸಾಧ್ಯವಾಯಿತು. ಈ ಅಧ್ಯಯನದಿಂದ ನಾವು ಮಹಿಳೆಯರ ವಿನೂತನವಾದ ಅಗತ್ಯತೆಗಳನ್ನು ಪೂರೈಸುವ ರೀತಿಯಲ್ಲಿ ಉತ್ಪನ್ನವನ್ನು ಅಥವಾ ಯೋಜನೆಯನ್ನು ವಿನ್ಯಾಸಗೊಳಿಸಲು ಅವಕಾಶ ಒದಗಿ ಬಂದಿತು. ನಮ್ಮ ಅಧ್ಯಯನವು ಮಹಿಳೆಯರಿಗೆ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಲಿಂಗ-ವಿಭಜಿತ ಡೇಟಾಗಳ ಅಗತ್ಯವನ್ನು ಒತ್ತಿ ಹೇಳಿತು. ಬ್ಯಾಂಕುಗಳೊಂದಿಗೆ ತೊಡಗಿಸಿಕೊಳ್ಳುವಲ್ಲಿ ಆತ್ಮವಿಶ್ವಾಸ ಮತ್ತು ಆರಾಮದಾಯಕವಾಗುವ ರೀತಿಯಲ್ಲಿ ನೆರವಾಯಿತು. ಹಣಕಾಸು ಸೇವಾ ಪೂರೈಕೆದಾರರು ಜನ್ ಧನ್ ಪ್ಲಸ್ ನ ವೈಶಿಷ್ಟ್ಯತೆಗಳನ್ನು ಸೂಕ್ತ ಪ್ರಮಾಣದಲ್ಲಿ ಅಳವಡಿಸಿಕೊಂಡರೆ ಅದು ಮಹಿಳೆಯರ ಉಳಿತಾಯದ ಅಭ್ಯಾಸವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಒಂದು ಒಳ್ಳೆಯ ಉತ್ಪನ್ನವಾಗಬಹುದು ಎಂಬುದನ್ನು ನಾವು ನಂಬುತ್ತೇವೆ" ಎಂದು ತಿಳಿಸಿದರು.

ನೀತಿ ನಿರೂಪಕರಿಗೆ ಶಿಫಾರಸುಗಳು

ನೀತಿ ನಿರೂಪಕರಿಗೆ ಶಿಫಾರಸುಗಳು

ಭಾರತೀಯ ಹಣಕಾಸು ಸೇವಾ ಪೂರೈಕೆದಾರರು ಮತ್ತು ನೀತಿ ನಿರೂಪಕರಿಗೆ ಶಿಫಾರಸುಗಳು

ಮಹಿಳೆಯರಿಗಾಗಿ ಸೂಕ್ತವಾದ ಮತ್ತು ಸರಳೀಕೃತ ಉತ್ಪನ್ನವನ್ನು ರಚಿಸಿ:- ಜನ್ ಧನ್ ಪ್ಲಸ್ ಅನ್ನು ಒದಗಿಸುವ ಮೂಲಕ ಉಳಿತಾಯಗಳನ್ನು ಕ್ರೋಢೀಕರಿಸುವುದು, ಸಾಲಗಳಿಗೆ ಓವರ್ ಡ್ರಾಫ್ಟ್ ನೀಡುವುದು ಮತ್ತು ಅವರ ಜನ್ ಧನ್ ಖಾತೆಗಳಿಂದ ಸುಲಭವಾಗಿ ಪಾವತಿಗಳನ್ನು ಸ್ವೀಕರಿಸಲು ಅನುಕೂಲವಾಗುವಂತಹ ಯುಪಿಐಗಳ ಸೇವೆಯನ್ನು ನೀಡುವುದು ಸೂಕ್ತ.

ಬ್ಯುಸಿನೆಸ್ ಕರೆಸ್ಪಾಂಡೆಂಟ್ ಟಚ್ ಪಾಯಿಂಟ್ ಗಳಲ್ಲಿ ಉಳಿತಾಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು:- ಮಹಿಳಾ ಗ್ರಾಹಕರನ್ನು ತಲುಪಲು ಸುಲಭ ಮತ್ತು ಕಡಿಮೆ ವೆಚ್ಚದ ಮಾಧ್ಯಮಗಳನ್ನು ಅನ್ವೇಷಣೆ ಮಾಡುವುದು ಮತ್ತು ವಿಶೇಷವಾಗಿ ಅವರಿಗಾಗಿ ವಿನ್ಯಾಸಗೊಳಿಸಲಾದ ಸಂವಹನಗಳನ್ನು ಬಳಸಿ ಅರಿವು ಮೂಡಿಸಬೇಕು. ಅದೇ ರೀತಿ ಅವರ ಬ್ಯಾಂಕಿಂಗ್ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೂಚನೆಗಳನ್ನು ಮತ್ತು ಸಲಹೆಗಳನ್ನು ನೀಡಬೇಕು.

ಬ್ಯುಸಿನೆಸ್ ಕರೆಸ್ಪಾಂಡೆಂಟ್ಸ್ ಜಾಲವನ್ನು ಬಲವರ್ಧನೆ ಮಾಡಬೇಕು:- ಬೆಳೆಯುತ್ತಿರುವ ಪಿಎಂಜೆಡಿವೈ ವಿಭಾಗದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ವ್ಯವಸ್ಥಾಪಕರನ್ನು ರೂಪಿಸಬೇಕು. ಇದರ ಮೂಲಕ ಶಾಖೆಗಳು ಕನಿಷ್ಠ ಮೌಲ್ಯದ ವಹಿವಾಟುಗಳನ್ನು ಕಡಿಮೆ ಮಾಡಲು ಮತ್ತು ಪಿಎಸ್ ಬಿಗಳಿಗೆ ನೆರವಾಗಲು ಸಾಧ್ಯವಾಗುತ್ತದೆ.

ಲಿಂಗ -ವಿಭಜಿತ ಮಟ್ಟದಲ್ಲಿ ಡೇಟಾವನ್ನು ಟ್ರ್ಯಾಕ್ ಮಾಡುವುದು ಮತ್ತು ಪೋರ್ಟ್ ಫೋಲಿಯೋ ಡೇಟಾವನ್ನು ಮೇಲ್ವಿಚಾರಣೆ ಮಾಡುವುದು:- ಮಹಿಳಾ ಗ್ರಾಹಕರ ನಡವಳಿಕೆಯಲ್ಲಿನ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವುದು ಹಣಕಾಸು ಸಂಸ್ಥೆಗಳು ಮತ್ತು ನೀತಿ ನಿರೂಪಕರು ಹಣಕಾಸಿನ ಸೇರ್ಪಡೆಯನ್ನು ಮುನ್ನಡೆಸುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸಲು ಇದು ಸಹಾಯ ಮಾಡುತ್ತದೆ.

English summary

Women's World Banking and Bank of Baroda shares report 'Making Finance Work for Women in India'

Women’s World Banking, a global non-profit committed to giving low-income women access to financial tools for their financial security and prosperity, and Bank of Baroda, among India’s largest Public Sector Banks (PSBs) today unveiled a new report ‘The Power of Jan Dhan: Making Finance Work for Women in India’.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X