For Quick Alerts
ALLOW NOTIFICATIONS  
For Daily Alerts

ಶತಮಾನದಲ್ಲೇ ಕಂಡರಿಯದ ಆರ್ಥಿಕ ಬಿಕ್ಕಟ್ಟಿನಲ್ಲಿ ಜಗತ್ತು, ಕೊರೊನಾ ಆಪತ್ತು

|

ಕಳೆದ ಒಂದು ಶತಮಾನದಲ್ಲೇ ಕಂಡರಿಯದಂಥ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಕೊರೊನಾ ವೈರಾಣು ಸೃಷ್ಟಿಸುತ್ತಿದೆ ಮತ್ತು ಇದರಿಂದ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡುವ ಅಗತ್ಯ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ ಹೇಳಿದ್ದಾರೆ.

"ಜಾಗತಿಕ ಬೆಳವಣಿಗೆ ದರವು 2020ರಲ್ಲಿ ತೀಕ್ಷ್ಣವಾಗಿ ನಕಾರಾತ್ಮಕ ಕುಸಿತ ಕಾಣಲಿದೆ" ಎಂದು ಆಕೆ ಎಚ್ಚರಿಕೆ ನೀಡಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ 180 ಸದಸ್ಯ ರಾಷ್ಟ್ರಗಳ ಪೈಕಿ 170 ದೇಶಗಳಲ್ಲಿ ತಲಾದಾಯದಲ್ಲಿ ಇಳಿಕೆ ಅನುಭವ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶತಮಾನದಲ್ಲೇ ಕಂಡರಿಯದ ಆರ್ಥಿಕ ಬಿಕ್ಕಟ್ಟಲ್ಲಿ ಜಗತ್ತು, ಕೊರೊನಾ ಆಪತ್ತು

ಮಹಾ ಆರ್ಥಿಕ ಕುಸಿತದ (1930ರ ದಶಕ) ನಂತರ ಪ್ರಸ್ತುತ ಪರಿಸ್ಥಿತಿಯಲ್ಲಿ ಆರ್ಥಿಕ ಸನ್ನಿವೇಶ ಬಹಳ ಕೆಟ್ಟದಾಗಬಹುದು ಎಂದುಕೊಳ್ಳುತ್ತಿದ್ದೇವೆ. ಮುಂದಿನ ವರ್ಷ ಕೂಡ 'ಭಾಗಶಃ ಚೇತರಿಕೆ' ಕಾಣಿಸಿಕೊಳ್ಳಬಹುದು ಎಂದು ಐಎಂಎಫ್ ಅಂದುಕೊಳ್ಳುತ್ತಿದೆ. ವ್ಯಾಪಾರ- ವ್ಯವಹಾರಗಳು, ಸಾಮಾನ್ಯ ಜನರಿಗೆ ಸರ್ಕಾರಗಳು 'ಜೀವ' ತುಂಬಬೇಕು. ಆರ್ಥಿಕ ಸ್ಥಿತಿಯ ಬಗ್ಗೆ ಮತ್ತಷ್ಟು ಹೆದರಿದರೆ ಚೇತರಿಕೆ ಕಾಣಿಸಿಕೊಳ್ಳುವುದು ಇನ್ನಷ್ಟು ಕಷ್ಟವಾಗುತ್ತದೆ ಎಂದು ಆಕೆ ಅಭಿಪ್ರಾಯ ಪಟ್ಟಿದ್ದಾರೆ.

English summary

'World Faces Worst Economic Situation Since Great Depression'

Corona virus pandemic is causing an economic crisis unlike any in the past century, said IMF chief Kristalina Georgieva.
Story first published: Thursday, April 9, 2020, 20:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X