For Quick Alerts
ALLOW NOTIFICATIONS  
For Daily Alerts

ವಿಶ್ವದ ಪ್ರಭಾವಿ ಪಾಸ್ ಪೋರ್ಟ್ 2021: ಭಾರತಕ್ಕೆ ಎಷ್ಟನೇ ಸ್ಥಾನ?

By ಅನಿಲ್ ಆಚಾರ್
|

ವಿಶ್ವದಾದ್ಯಂತ 2020ರಲ್ಲಿ ಪ್ರವಾಸೋದ್ಯಮ ನಿಂತ ನೀರಾಗಿತ್ತು. ನಮ್ಮ ಮನೆಗಳಲ್ಲೇ ಕೂರುವಂತಾಯಿತು. ಪಾಸ್ ಪೋರ್ಟ್ ಅಂತೂ ಬಳಕೆ ಆಗಿದ್ದೇ ಇಲ್ಲ. ಇಂಥ ಸನ್ನಿವೇಶದಲ್ಲಿ ಹೆನ್ಲೆ ಅಂಡ್ ಪಾರ್ಟನರ್ಸ್ ನಿಂದ ವಿಶ್ವದ ಅತ್ಯಂತ ಪ್ರಭಾವಿ ಪಾಸ್ ಪೋರ್ಟ್ ಸೂಚ್ಯಂಕ 2021 ಬಿಡುಗಡೆ ಮಾಡಲಾಗಿದೆ. ಈ ಹೊಸ ಪಟ್ಟಿಯಲ್ಲಿ ಭಾರತ 85ನೇ ಸ್ಥಾನದಲ್ಲಿದೆ.

 

2021ರ ಪಟ್ಟಿಯಲ್ಲಿ ಭಾರತದ ಪಾಸ್ ಪೋರ್ಟ್ 85ನೇ ಸ್ಥಾನದಲ್ಲಿದ್ದು, ಕಳೆದ ವರ್ಷ 84ನೇ ಸ್ಥಾನದಲ್ಲಿತ್ತು. ಭಾರತೀಯ ಪಾಸ್ ಪೋರ್ಟ್ ಅಂಕ 58. ಅದರರ್ಥ ಭಾರತೀಯ ಪಾಸ್ ಪೋರ್ಟ್ ಇರುವವರು ಮುಂಚಿತವಾಗಿ ವೀಸಾ ಪಡೆಯದೆ 58 ದೇಶಗಳಿಗೆ ಭೇಟಿ ನೀಡಬಹುದು. ತಜಿಕಿಸ್ತಾನ್ ಹಾಗೂ ಭಾರತ ಒಂದೇ ಸ್ಥಾನವನ್ನು ಹಂಚಿಕೊಂಡಿವೆ.

 

2021ರ ಆರಂಭದ ಹೊತ್ತಿಗೆ ಭಾರತೀಯರ ಕೈಗೆ ಇ- ಪಾಸ್ ಪೋರ್ಟ್2021ರ ಆರಂಭದ ಹೊತ್ತಿಗೆ ಭಾರತೀಯರ ಕೈಗೆ ಇ- ಪಾಸ್ ಪೋರ್ಟ್

ಮತ್ತೊಮ್ಮೆ 191 ಅಂಕದೊಂದಿಗೆ ಜಪಾನ್ ಮೊದಲ ಸ್ಥಾನದಲ್ಲಿದೆ. ಮುಂಚಿತವಾಗಿ ವೀಸಾ ಪಡೆಯದೆ ಜಪಾನ್ ಪಾಸ್ ಪೋರ್ಟ್ ಇದ್ದಲ್ಲಿ ಪ್ರಯಾಣಿಸಬಹುದು. ಸತತ ಮೂರನೇ ವರ್ಷ ಜಪಾನ್ ಈ ಸ್ಥಾನದಲ್ಲಿದೆ. ಒಂದೋ ಏಕಾಂಗಿಯಾಗಿ ಅಥವಾ ಸಿಂಗಪೂರ್ ಜತೆಗೂಡಿ ಮೊದಲ ಸ್ಥಾನದಲ್ಲಿತ್ತು. ಈ ವರ್ಷ 190 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು ಎಂಬ ಅಗ್ಗಳಿಕೆ ಮೂಲಕ ಸಿಂಗಪೂರ ಎರಡನೇ ಸ್ಥಾನದಲ್ಲಿದೆ.

ವಿಶ್ವದ ಪ್ರಭಾವಿ ಪಾಸ್ ಪೋರ್ಟ್ 2021: ಭಾರತಕ್ಕೆ ಎಷ್ಟನೇ ಸ್ಥಾನ?

ಮೂರನೇ ಸ್ಥಾನವನ್ನು ದಕ್ಷಿಣ ಕೊರಿಯಾ ಮತ್ತು ಜರ್ಮನಿ 189 ಅಂಕಗಳೊಂದಿಗೆ ಹಂಚಿಕೊಂಡಿವೆ. ಅಫ್ಗಾನಿಸ್ತಾನ ಪಾಸ್ ಪೋರ್ಟ್ ಈ ವರ್ಷ ಕೂಡ ಕೊನೆ ಸ್ಥಾನದಲ್ಲಿ ಇದೆ. ಅದರ ಅಂಕ 26. ಇನ್ನು ಪಾಕಿಸ್ತಾನ 32 ಅಂಕ ಪಡೆದಿದೆ.

ವಿಶ್ವದ ಟಾಪ್ 10 ಅತ್ಯಂತ ಪ್ರಭಾವಿ ಪಾಸ್ ಪೋರ್ಟ್ ಗಳ ಪಟ್ಟಿ ಹೀಗಿದೆ:
1. ಜಪಾನ್

2. ಸಿಂಗಪೂರ್

3. ಜರ್ಮನಿ

4. ಫಿನ್ ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಸ್ಪೇನ್

5. ಆಸ್ಟ್ರಿಯಾ, ಡೆನ್ಮಾರ್ಕ್

6. ಫ್ರಾನ್ಸ್, ಐರ್ಲೆಂಡ್, ನೆದರ್ಲೆಂಡ್ಸ್, ಪೋರ್ಚುಗಲ್, ಸ್ವೀಡನ್

7. ಬೆಲ್ಜಿಯಂ, ನ್ಯೂಜಿಲೆಂಡ್, ನಾರ್ವೆ, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಸ್ಟೇಟ್ಸ್

8. ಆಸ್ಟ್ರೇಲಿಯಾ, ಜೆಕ್ ರಿಪಬ್ಲಿಕ್, ಗ್ರೀಸ್, ಮಾಲ್ಟಾ

9. ಕೆನಡಾ

10. ಹಂಗೇರಿ

ಯಾವ ದೇಶದ ಪಾಸ್ ಪೋರ್ಟ್ ಅತಿ ಹೆಚ್ಚು ರಾಷ್ಟ್ರಗಳಿಗೆ ಪ್ರವಾಸಿಗರಾಗಿ ವೀಸಾ ಇಲ್ಲದೆ ತೆರಳಲು ಅನುವು ಮಾಡಿಕೊಡುತ್ತದೆ, ಅರ್ಥಾತ್ ವೀಸಾ ಆನ್ ಅರೈವಲ್ ಹೆಚ್ಚಿದೆ ಎಂಬುದರ ಆಧಾರದಲ್ಲಿ ಅದೆಷ್ಟು ಪ್ರಭಾವಿ ಎಂಬುದು ನಿರ್ಧಾರ ಆಗುತ್ತದೆ. ಕೊರೊನಾ ಕಾರಣಕ್ಕೆ ತಾತ್ಕಾಲಿಕವಾಗಿ ಹೇರಿರುವ ನಿರ್ಬಂಧವನ್ನು ಗಣನೆಗೆ ತೆಗೆದುಕೊಂಡಿಲ್ಲ.

English summary

World's Most Powerful Top 10 Passport, Japan Number 1; Where India Stands?

World's most powerful top 10 passport list released. Japan in number 1 position, where India stands? Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X