For Quick Alerts
ALLOW NOTIFICATIONS  
For Daily Alerts

ವಿಶ್ವ ಮಟ್ಟದ ದಾಖಲೆ ಬರೆದ ಐಸಿಐಸಿಐ ಬ್ಯಾಂಕ್: ಈ ಷೇರಿನ ಮೇಲೆ ಎಷ್ಟು ಕಣ್ಣು?

|

ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಕಿರೀಟಕ್ಕೆ ಗರಿಯೊಂದು ಸೇರ್ಪಡೆಯಾಗಿದೆ. ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಷೇರುಗಳಲ್ಲಿ ಎರಡನೇ ಸ್ಥಾನ ಐಸಿಐಸಿಐ ಬ್ಯಾಂಕ್ ಪಾಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಎಲ್ಲ 59 ವಿಶ್ಲೇಷಕರು ಐಸಿಐಸಿಐ ಬ್ಯಾಂಕ್ ಷೇರಿಗೆ 'ಖರೀದಿ ರೇಟಿಂಗ್' ನೀಡಿದ್ದಾರೆ.

ಚೈನೀಸ್ ಇ ಕಾಮರ್ಸ್ ಪ್ರಮುಖ ಕಂಪೆನಿ ಅಲಿಬಾಬ ಬಿಟ್ಟರೆ ಅತಿ ಹೆಚ್ಚು ಗಮನಿಸುತ್ತಿರುವ, ಅನುಸರಿಸುತ್ತಿರುವ (Track) ಷೇರು ಐಸಿಐಸಿಐ ಬ್ಯಾಂಕ್ ನದು. ಅಲಿಬಾಬಗೆ 64 ತಜ್ಞರು ಹಾಗೂ ಐಸಿಐಸಿಐ ಬ್ಯಾಂಕ್ ಗೆ 63 ತಜ್ಞರು ಖರೀದಿಗೆ ಶಿಫಾರಸು ಮಾಡಿದ್ದಾರೆ. ಅದೇ ರೀತಿ ಚೀನಾದ ಟೆನ್ಸೆಂಟ್ ಹಾಗೂ ಜೆಡಿ.ಕಾಮ್ ಕೂಡ ಅತಿ ಹೆಚ್ಚು ಅನುಸರಿಸುತ್ತಿರುವ ಷೇರುಗಳು. ಅವುಗಳಿಗೆ ಕ್ರಮವಾಗಿ 56 ಮತ್ತು 51 ವಿಶ್ಲೇಷಕರು ಖರೀದಿಗೆ ಶಿಫಾರಸು ಮಾಡಿದ್ದಾರೆ.

80 ಸಾವಿರ ಸಿಬ್ಬಂದಿಗೆ 8% ತನಕ ವೇತನ ಹೆಚ್ಚಳ ಮಾಡುತ್ತದಂತೆ ಐಸಿಐಸಿಐ ಬ್ಯಾಂಕ್80 ಸಾವಿರ ಸಿಬ್ಬಂದಿಗೆ 8% ತನಕ ವೇತನ ಹೆಚ್ಚಳ ಮಾಡುತ್ತದಂತೆ ಐಸಿಐಸಿಐ ಬ್ಯಾಂಕ್

ವರದಿಗಳ ಪ್ರಕಾರ, ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ ಉತ್ತೇಜನ ಕ್ರಮಗಳಿಂದ ಬೆಂಬಲ ಸಿಕ್ಕಿ, ಭಾರತದ ಷೇರುಗಳು ಗಳಿಕೆ ದಾಖಲಿಸುತ್ತಿವೆ. ಐಸಿಐಸಿಐ ಬ್ಯಾಂಕ್ ಜುಲೈ 25ರಂದು ಮಾರ್ಚ್ ನಿಂದ ಜೂನ್ ತ್ರೈಮಾಸಿಕದ ಫಲಿತಾಂಶ ಘೋಷಣೆ ಮಾಡಿದೆ. 2599.1 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 36.2 ಪರ್ಸೆಂಟ್ ಬೆಳವಣಿಗೆ ದಾಖಲಿಸಿದೆ.

ವಿಶ್ವ ಮಟ್ಟದ ದಾಖಲೆ ಬರೆದ ICICI ಬ್ಯಾಂಕ್: ಷೇರಿನ ಮೇಲೆ ಎಷ್ಟು ಕಣ್ಣು

ಹಲವು ಬ್ರೋಕರೇಜ್ ಗಳು ಐಸಿಐಸಿಐ ಬ್ಯಾಂಕ್ ಷೇರು ಖರೀದಿಗೆ ಶಿಫಾರಸು ಮಾಡಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ ಐಸಿಐಸಿಐ ಬ್ಯಾಂಕ್ ಷೇರು ಖರೀದಿ ತಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

English summary

World's Second Most Tracked Stock ICICI Bank With 59 Buy Calls

ICICI bank world's second most tracked stock with 59 buy calls by analysts, after Alibaba.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X